ಸಾರಾಂಶ
ಧಾರವಾಡ ಹೈಕೋರ್ಟ್ ಪೀಠದಲ್ಲಿ ಜರುಗಿದ ರಾಷ್ಟ್ರೀಯ ಲೋಕ್ ಅದಾಲತ್‌ದಲ್ಲಿ ಒಟ್ಟು 583 ಪ್ರಕರಣಗಳ ಪೈಕಿ 200 ಪ್ರಕರಣಗಳನ್ನು 4,16,68,242 ಮೊತ್ತಕ್ಕೆ ಇತ್ಯರ್ಥಪಡಿಸಲಾಯಿತು.
ಧಾರವಾಡ:
ಇಲ್ಲಿಯ ಹೈಕೋರ್ಟ್ ಪೀಠದಲ್ಲಿ ಜರುಗಿದ ರಾಷ್ಟ್ರೀಯ ಲೋಕ್ ಅದಾಲತ್‌ದಲ್ಲಿ ಒಟ್ಟು 583 ಪ್ರಕರಣಗಳ ಪೈಕಿ 200 ಪ್ರಕರಣಗಳನ್ನು ₹ 4,16,68,242 ಮೊತ್ತಕ್ಕೆ ಇತ್ಯರ್ಥಪಡಿಸಲಾಯಿತು.ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಎಂ.ಐ. ಅರುಣ ಅವರ ಮಾರ್ಗದರ್ಶನದಲ್ಲಿ ನಡೆದ ಅದಾಲತ್‌ನಲ್ಲಿ ನ್ಯಾಯಮೂರ್ತಿಗಳಾದ ಇ.ಎಸ್. ಇಂದಿರೇಶ್ ಮತ್ತು ಅನಿಲ ಬಿ. ಕಟ್ಟಿ ಹಾಗೂ ಅದಾಲತ್‌ನ ಸದಸ್ಯರಾದ ಎಂ.ಸಿ. ಹುಕ್ಕೇರಿ ಮತ್ತು ಜಿ.ಎಂ, ಭಟ್ ಸೇರಿ ಒಟ್ಟು ಎರಡು ಪೀಠಗಳನ್ನು ಸ್ಥಾಪಿಸಲಾಗಿತ್ತು.ಸುಮಾರು 19 ವರ್ಷದ ಹಳೆಯ ದಿವಾಣಿ ಪ್ರಕರಣವನ್ನು ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಹಾಗೂ ಎಂ.ಸಿ. ಹುಕ್ಕೇರಿ ಮತ್ತು ಪಕ್ಷಗಾರರ ವಕೀಲರಾದ ಪದ್ಮಜಾ ತಾಡಪತ್ರಿ ಮತ್ತು ಎಸ್.ಎಲ್. ಮಟ್ಟಿ, ಎಸ್.ಎ. ಸಂಡೂರ ಸಹಕಾರದಿಂದ ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಯಿತು. ಐದು ವರ್ಷಗಳಿಂದ ದೂರವಾಗಿದ್ದ ದಂಪತಿಗಳ ವ್ಯಾಜ್ಯವನ್ನು ನ್ಯಾಯಮೂರ್ತಿ ಅನಿಲ ಬಿ. ಕಟ್ಟಿ ಮತ್ತು ಜಿ.ಎಂ. ಭಟ್ ಒಂದುಗೂಡಿಸಿದರು ಎಂದು ಹೈಕೋರ್ಟ್ ಕಾನೂನು ಸೇವಾ ಸಮಿತಿ ವಿಲೇಖನಾಧಿಕಾರಿಗಳು ತಿಳಿಸಿದರು.;Resize=(128,128))
;Resize=(128,128))
;Resize=(128,128))