ಜನಸಂಖ್ಯೆ ಆಧರಿಸಿ ನೀರು ಪೂರೈಕೆ: ಜಲಮಂಡಳಿ

| Published : Mar 17 2024, 01:50 AM IST / Updated: Mar 17 2024, 12:57 PM IST

ಸಾರಾಂಶ

ಜನಸಂಖ್ಯೆ ಆಧಾರಿಸಿ ಅಗತ್ಯವಿರುವಷ್ಟು ನೀರು ಸರಬರಾಜು ಮಾಡುವಂತೆ ಜಲಮಂಡಳಿ ಅಧ್ಯಕ್ಷ ಡಾ। ವಿ.ರಾಮ್ ಪ್ರಸಾತ್ ಮನೋಹರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಜನರಿಗೆ ಕುಡಿಯುವ ನೀರು ಸಮಸ್ಯೆಯಾಗದಂತೆ ಹಾಗೂ ಪ್ರದೇಶದಲ್ಲಿನ ಜನಸಂಖ್ಯೆ ಆಧಾರಿಸಿ ಅಗತ್ಯವಿರುವಷ್ಟು ನೀರು ಸರಬರಾಜು ಮಾಡುವಂತೆ ಜಲಮಂಡಳಿ ಅಧ್ಯಕ್ಷ ಡಾ। ವಿ.ರಾಮ್ ಪ್ರಸಾತ್ ಮನೋಹರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಶನಿವಾರ ಬಂಡೆಪಾಳ್ಯಕ್ಕೆ ಭೇಟಿ ನೀಡಿ ಉಚಿತ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಪರಿಶೀಲಿಸಿದ ಅವರು, ನೀರಿನ ಸರಬರಾಜು, ಲಭ್ಯತೆ, ಗುಣಮಟ್ಟದ ಬಗ್ಗೆ ಮಹಿಳೆಯರಿಂದ ಮಾಹಿತಿ ಪಡೆದುಕೊಂಡರು.

ಉಚಿತ ಸ್ಟಿಕ್ಕರ್‌ ಅಂಟಿಸಿ: ಉಚಿತವಾಗಿ ನೀರು ಪೂರೈಕೆ ಮಾಡುವ ಟ್ಯಾಂಕರ್ ಗಳ ಮೇಲೆ ಉಚಿತ ಎಂದು ಸ್ಟಿಕ್ಕರ್‌ ಅಂಟಿಸದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

 ನಗರದಲ್ಲಿ ಬಿಬಿಎಂಪಿ ಮತ್ತು ಜಲಮಂಡಳಿಯಿಂದ ಉಚಿತವಾಗಿ ನೀರು ಪೂರೈಕೆ ಮಾಡುವ ಎಲ್ಲ ಟ್ಯಾಂಕರ್‌ ಮೇಲೆ ಉಚಿತ ಎಂದು ಸ್ಟಿಕ್ಕರ್‌ ಅಂಟಿಸಬೇಕು. ಇಲ್ಲದಿದ್ದರೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರುಟ್ಯಾಂಕರ್‌ ನೊಂದಣಿ ಮುಕ್ತಾಯ

ನೀರು ಸರಬರಾಜು ಮಾಡುವ ಟ್ಯಾಂಕರ್‌ಗಳನ್ನು ನೊಂದಾಯಿಸಿಕೊಳ್ಳಲು ನೀಡಿದ್ದ ಗಡುವು ಮುಕ್ತಾಯಗೊಂಡಿದ್ದು, 1,700 ಟ್ಯಾಂಕರ್‌ಗಳು ನೋಂದಾಯಿತವಾಗಿವೆ. 

ಈ ಟ್ಯಾಂಕರ್‌ಗಳ ಮೇಲೆ ನಿಗದಿತ ಸ್ಟಿಕ್ಕರ್‌ ಅಳವಡಿಸಲಾಗುವುದು. ವಿಶೇಷ ಸಂಖ್ಯೆಯನ್ನು ನೀಡಲಾಗುವುದು, ಇವುಗಳ ಮೇಲೆ ದರದ ಪಟ್ಟಿಯನ್ನು ಹಾಗೂ ದೂರು ನೀಡಲು ದೂರವಾಣಿ ಸಂಖ್ಯೆಯನ್ನು ನಮೂದಿಸಲಾಗುವುದು ಎಂದು ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ.

ಡ್ರೈ ಹೋಳಿ ಹಬ್ಬ ಆಚರಿಸಿ
ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ನೀರಿನ ಸಮಸ್ಯೆ ಇರುವುದರಿಂದ ಈ ಬಾರಿ ಹೋಳಿ ಹಬ್ಬವನ್ನು ಡ್ರೈ ಹೋಳಿ ಹಬ್ಬ ಆಚರಿಸುವ ಮೂಲಕ ಜಲಸ್ನೇಹಿಯಾಗಿ ಆಚರಣೆಗೆ ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ರಾಮಪ್ರಸಾತ್ ಮನೋಹರ್‌ ಮನವಿ ಮಾಡಿದ್ದಾರೆ.

ಹೋಳಿ ಹಬ್ಬದ ಸಂದರ್ಭದಲ್ಲಿ ಬೇಕಾಬಿಟ್ಟಿ ನೀರು ವ್ಯರ್ಥ ಮಾಡದಂತೆ ಜಲಮಂಡಳಿ ಕ್ರಮ ಮುಂದಾಗಿದೆ. ಹೋಳಿ ಆಚರಣೆ ವೇಳೆ ನೀರನ್ನು ವ್ಯರ್ಥ ಮಾಡದೆ ಹಬ್ಬ ಆಚರಣೆ ಮಾಡಬೇಕು. 

ಬಣ್ಣದ ಹಬ್ಬದ ಹೆಸರಿನಲ್ಲಿ ನಗರದ ಹೋಟೆಲ್, ಮಾಲ್‌ಗಳಲ್ಲಿ ನೀರು ವ್ಯರ್ಥ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.ಹೋಟೆಲ್‌ಗಳಲ್ಲಿ ಯೂಸ್ ಆ್ಯಂಡ್‌ ಥ್ರೋ ತಟ್ಟೆಗೆ ಮೊರೆ

ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ನಗರದ ಅನೇಕ ಹೋಟೆಲ್‌ ಗಳಲ್ಲಿ ಇದೀಗ ಯೂಸ್‌ ಆ್ಯಂಡ್‌ ಥ್ರೋ ಪ್ಲೇಟ್‌ ಗಳ ಮೊರೆ ಹೋಗಿದ್ದಾರೆ. ತಟ್ಟೆ, ಲೋಟ ತೊಳೆಯಲು ಅತಿ‌ ಹೆಚ್ಚು ನೀರು‌ ಖರ್ಚಾಗಲಿದೆ. 

ಟ್ಯಾಂಕರ್‌ ನೀರಿನ ದರ ಹೆಚ್ಚಳವಾಗಿದೆ, ತಟ್ಟೆ ಲೋಟ ತೊಳೆಯುವವರಿಗೆ ನೀರು ಸಂಬಳದ ಹಣದಲ್ಲಿ ಪರಿಸರ ಸ್ನೇಹಿ ಯೂಸ್ ಅಂಡ್ ಥ್ರೋಪ್ಲೇಟ್‌ ಮತ್ತು ಕಪ್‌ ಗಳನ್ನು ಬಳಕೆ ಮಾಡಬಹುದಾಗಿದೆ ಎಂದು ರಾಜ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್ ಹೇಳಿದ್ದಾರೆ.