ಸಾರಾಂಶ
ಗದಗ: ನಗರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವವನ್ನು ಕಳೆದ 8 ವರ್ಷಗಳಿಂದ ಅತ್ಯಂತ ಅದ್ಧೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದ್ದು, ಪ್ರತಿ ವರ್ಷ ಓರ್ವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತದೆ. ಪ್ರಸಕ್ತ ಸಾಲಿನ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವದ ಅಧ್ಯಕ್ಷರಾಗಿ ಉದ್ಯಮಿ ಜಗದೀಶ ಎಸ್. ಪಿ. ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಶ್ರೀರಾಮ ಸೇನೆ ರಾಜ್ಯ ಕಾರ್ಯದರ್ಶಿ ರಾಜು ಖಾನಪ್ಪನವರ ಹೇಳಿದರು. ಅವರು ಸೋಮವಾರ ನಗರದ ಒಕ್ಕಲಗೇರಿ ಓಣಿಯ ರಾಚೋಟೇಶ್ವರ ದೇವಸ್ಥಾನದಲ್ಲಿ 2024ರ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವದ ಪೂರ್ವಭಾವಿ ಸಭೆಯ ನೇತೃತ್ವ ವಹಿಸಿ ಮಾತನಾಡಿದರು. ಈ ಸಭೆಯಲ್ಲಿ ಹಿಂದೂಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಜರಿದ್ದು ಆಯ್ಕೆಗೆ ಅನುಮೋದಿಸಿದರು.
ಈ ಬಾರಿ ಗ್ರಾಮೀಣ ಭಾಗದವರಿಗೆ "ಚಿತ್ರದಲ್ಲಿ ಛತ್ರಪತಿ ಶಿವಾಜಿ " ಎನ್ನುವ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಜೊತೆಗೆ ಮಹಿಳೆಯರಿಗೆ ರಂಗೋಲಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಆಯೋಜಿಸಿದ್ದೇವೆ ಎಂದು ರಾಜು ಖಾನಪ್ಪನವರ ಹೇಳಿದರು. ಜಯಂತ್ಯುತ್ಸವದ ಅಧ್ಯಕ್ಷರಾಗಿ ಆಯ್ಕೆಯಾದ ಜಗದೀಶ ಎಸ್.ಪಿ. ಮಾತನಾಡಿ, ನನಗೆ ಅವಕಾಶ ಮಾಡಿಕೊಟ್ಟ ಎಲ್ಲ ಹಿಂದೂಪರ ಸಂಘಟನೆಗಳಿಗೂ ಹಾಗೂ ಶಿವಾಜಿ ಮಹಾರಾಜರ ಭಕ್ತರಿಗೂ ಅಭಿನಂದನೆ ಸಲ್ಲಿಸಿದರು. ಜಯಂತ್ಯುತ್ಸವ ಕಮಿಟಿಗೌರವ ಅಧ್ಯಕ್ಷ ರಾಜು ಮುಧೋಳ, ಅಧ್ಯಕ್ಷ ಜಗದೀಶ್ ಎಸ್. ಪಿ., ಉಪಾಧ್ಯಕ್ಷ ಅನಿಲ್ ಅಬ್ಬಿಗೇರಿ, ಮಲ್ಲಣ್ಣ ಚಿಂಚಲಿ, ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಪ್ಪ ಹೆಬ್ಬಳ್ಳಿ, ಮಹಾಂತೇಶ್ ನೆಲೋಡಿ, ಸಹ ಕಾರ್ಯದರ್ಶಿ ಕಿಶನ್ ಮೇರವಾಡೆ, ಸಿದ್ದು ಜೀವನಗೌಡ್ರ, ಸಂಘಟನಾ ಕಾರ್ಯದರ್ಶಿ ಮನೋಜ್ ಆಲೂರ್, ರಾಜು ಗದ್ದಿ, ಖಜಾಂಚಿ ಸುನೀಲ ಕಬಾಡಿ, ರವಿ ಕರಬಸಣ್ಣವರ್, ಪ್ರಚಾರಕರು ವಿಶ್ವನಾಥ್ ಸಿರಿ, ಬಸವರಾಜ್ ಹುಬ್ಬಳ್ಳಿ, ಪ್ರಶಾಂತ್ ಬೆಟಗೇರಿ, ಸಂತೋಷ ಪೂಜಾರ, ಸತ್ಯಪ್ಪಗೌಡ ಪಾಟೀಲ, ಅಪ್ಪು ದುಂಡಸಿ, ಪಂಚಾಕ್ಷರಿ ವೀರಶೆಟ್ಟರ, ಮಾರ್ಗದರ್ಶಕರಾಗಿ ಸಹದೇವ್ ಗಣಾಚಾರಿ, ಅಜ್ಜಣ್ಣ ಮಲ್ಲಾಡದ, ಮುರುಗಪ್ಪ ಕರಗಲ್, ವಿಠ್ಠಲ್ ಬಾಂಡಗೆ, ಪಕೀರಸಾ ಬಾಂಡಗೆ, ವಿನಾಯಕ್ ಮಾನ್ವಿ, ರಾಜು ಮಲ್ಲಾಡದ, ಮಂಜುನಾಥ ಬೆಲೇರಿ ಆಯ್ಕೆಯಾಗಿದ್ದಾರೆ.