ಹಿರೇಕೆರೂರು: ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ 10 ತಿಂಗಳಿನಲ್ಲಿ ಹಿರೇಕೆರೂರು ಘಟಕಕ್ಕೆ 21 ಹೊಸ ಬಸ್ಸುಗಳ ಲೋಕಾರ್ಪಣೆ ಮಾಡಲಾಗಿದೆ. ಇದು ಹಿರೇಕೆರೂರ ಕ್ಷೇತ್ರದ ಇತಿಹಾಸದಲ್ಲಿ ಒಂದು ಸಾಧನೆ ಎಂದು ಶಾಸಕ ಯು.ಬಿ. ಬಣಕಾರ್ ಹೇಳಿದರು.
ಪಟ್ಟಣದ ವಾಯುವ್ಯಕರ್ನಾಟಕ ಸಾರಿಗೆ ಘಟಕಕ್ಕೆ ಸರಕಾರ 3 ಹೊಸ ಬಸ್ಸುಗಳನ್ನು ಒದಗಿಸಿದ ಹಿನ್ನೆಲೆಯಲ್ಲಿ ಬಸ್ಸುಗಳ ಲೋಕಾರ್ಪಣೆ ಹಾಗೂ ಮುಂಗಡ ಟಿಕೆಟ್ ಕಾಯ್ದಿರಿಸುವ ಕೇಂದ್ರ ಉದ್ಘಾಟನಾ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ನಂತರ ಮಾತನಾಡಿದರು.ನಮ್ಮ ಸರಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಹಿರೇಕೆರೂರು ಘಟಕದಲ್ಲಿ 83 ಅನುಸೂಚಿಗಳ ಸಂಚಾರ ಇತ್ತು. ಅದು ಈಗ 100 ಅನುಸೂಚಿಗಳಿಗೆ ಏರಿದೆ. ನಮ್ಮ ಸರಕಾರದ ಐದು ಜನಪರ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆಯಲ್ಲಿ ಜೂನ್ 2023ರಿಂದ ಫೆಬ್ರವರಿ 2026ರ ವರೆಗೆ ಹಿರೇಕೆರೂರು ಕ್ಷೇತ್ರದಲ್ಲಿ ಒಟ್ಟು 3,13,21,973 ಪ್ರಯಾಣಕರು ಈ ಯೋಜನೆಯ ಸೌಲಭ್ಯ ಪಡೆದಿದ್ದು. ಒಟ್ಟು ಪ್ರಯೋಜನ ಪಡೆದ ಮೊತ್ತ ₹ 92,88,59,563 ಗಳಾಗಿವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಗಳು ಸ್ವಾವಲಂಬಿಯಾಗಿವೆ ಎಂದರು.ಹಿರೇಕೆರೂರು ಘಟಕಕ್ಕೆ ಐದು ಎಕರೆ ಭೂಮಿಯನ್ನು ಮಂಜೂರು ಮಾಡುವ ಪ್ರಸ್ತಾವನೆಯನ್ನು ವಿಧಾನಸಭೆಯಲ್ಲಿ ಸಾರಿಗೆ ಸಚಿವರ ಜೊತೆ ಚರ್ಚಿಸಲಾಗಿದೆ. ಹಿರೇಕೆರೂರು ಹಾಗೂ ರಟ್ಟಿಹಳ್ಳಿ ಘಟಕವನ್ನು ಮಾಡಿ ಉತ್ತಮ ಎರಡು ಘಟಕ ಮಾಡಿ ಸಾರಿಗೆ ವ್ಯವಸ್ಥೆಗೆ ಇನ್ನೂ ಉತ್ತಮವಾಗಿ ಅಭಿವೃದ್ಧಿ ಮಾಡುವ ದಿಟ್ಟಿನಲ್ಲಿ ಕ್ರಮ ವಹಿಸುವೆ ಎಂದರು.ಈ ಸಂದರ್ಭದಲ್ಲಿ ಹಿರೇಕೆರೂರು ಸಾರಿಗೆ ವ್ಯವಸ್ಥಾಪಕ ಮಂಜುನಾಥ ಹಡಪದ, ಸಂಚಾರ ನಿಯಂತ್ರಣಕರಾದ ಎಸ್.ವೈ. ಹೊರಿಕೆರಿ, ಗ್ಯಾರಂಟಿ ಸಮಿತಿಯ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ್ ಬುರ್ಡಿಕಟ್ಟಿ, ಹಾವೇರಿ ಹಾಲು ಒಕ್ಕೂಟದ ಉಪಾಧ್ಯಕ್ಷೆ ಉಜ್ಜನಗೌಡ ಮಾವಿನತೋಪ, ಸುನೀತಾ ಕೊಡ್ಲಿರ್, ಸಿದ್ದು ತಂಬಾಕದ್, ಶಂಭು ಹಂಸಭಾವಿ, ಈರಪ್ಪ ಬಣಕಾರ್, ಆಂಜನೇಯ ಬಿ.ಆರ್. ಸನಾವುಲ್ಲಾ ಮಖಾಂದರ್, ಕೊಟ್ರೇಶ್ ಅಂಗಡಿ, ಬಿಕೆ ಬತ್ತಿಕೊಪ್ಪ, ಮಂಜು ಶಿವನಕ್ಕನವರ್, ರಾಜು ಕರಡಿ, ಮಾಲತೇಶ ಬಿಲಳ್ಳಿ, ಸುರೇಶ್ ಮಡಿವಾಳರ್ ಹಾಗೂ ಮುಖಂಡರು, ಪ್ರಯಾಣಿಕರು ಸಾರಿಗೆ ಸಿಬ್ಬಂದಿ ಹಾಜರಿದ್ದರು.ಹಿರೇಕೆರೂರು ಘಟಕದಲ್ಲಿ 10 ತಿಂಗಳಲ್ಲಿ 21 ಹೊಸ ಬಸ್ಗಳ ಲೋಕಾರ್ಪಣೆ
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ 10 ತಿಂಗಳಿನಲ್ಲಿ ಹಿರೇಕೆರೂರು ಘಟಕಕ್ಕೆ 21 ಹೊಸ ಬಸ್ಸುಗಳ ಲೋಕಾರ್ಪಣೆ ಮಾಡಲಾಗಿದೆ. ಇದು ಹಿರೇಕೆರೂರ ಕ್ಷೇತ್ರದ ಇತಿಹಾಸದಲ್ಲಿ ಒಂದು ಸಾಧನೆ ಎಂದು ಶಾಸಕ ಯು.ಬಿ. ಬಣಕಾರ್ ಹೇಳಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.