ಕಲಬುರಗಿ ಜಿಲ್ಲೆಯಲ್ಲಿ 22,68,944 ಮತದಾರರು: ಜಿಲ್ಲಾಧಿಕಾರಿ

| Published : Jan 24 2024, 02:02 AM IST

ಸಾರಾಂಶ

ಕಲಬುರಗಿ ಜಿಲ್ಲೆಯಾದ್ಯಂತ 11,43,159 ಪುರುಷ, 11,25,463 ಮಹಿಳೆ ಹಾಗೂ 322 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 22,68,944 ಮತದಾರರು ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ಅವರು ಮಾಹಿತಿ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಭಾರತ ಚುನಾವಣಾ ಆಯೋಗದ ನಿರ್ದೇಶನುಸಾರ 2024ರ ಜ.1ಕ್ಕೆ ಅನ್ವಯಿಸುವಂತೆ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಯ ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿದ್ದು, ಜಿಲ್ಲೆಯಾದ್ಯಂತ 11,43,159 ಪುರುಷ, 11,25,463 ಮಹಿಳೆ ಹಾಗೂ 322 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 22,68,944 ಮತದಾರರು ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಂಡಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಕಲಬುರಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್, ಕಳೆದ ಅ.27ರಂದು ಪ್ರಕಟಿಸಲಾದ ಕರಡು ಪಟ್ಟಿಯಂತೆ ಕಲಬುರಗಿ ಜಿಲ್ಲೆಯಲ್ಲಿ 11,29,472 ಪುರುಷರು, 11,04,813 ಮಹಿಳೆಯರು ಹಾಗೂ ಇತರೆ 324 ಸೇರಿ ಒಟ್ಟಾರೆ 22,34,609 ಜನ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಂಡಿದ್ದರು.

ಪ್ರಕಟಿತ ಕರಡು ಪಟ್ಟಿಗೆ ಅಕ್ಷೇಪಣೆ ಸಲ್ಲಿಸಲು ಜನವರಿ 12ರ ವರೆಗೆ ಅವಕಾಶ ನೀಡಲಾಗಿತ್ತು. ಸ್ವೀಕೃತ ಅಕ್ಷೇಪಣೆಯನ್ನು ವಿಲೇವಾರಿ ಮಾಡಿ ಇಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಅಕ್ಷೇಪಣೆ ಅವಧಿಯಲ್ಲಿ 34,335 ಜನ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಅಂತಿಮ ಮತದಾರರ ಪಟ್ಟಿಯನ್ನು ಸಾರ್ವಜನಿಕರು ಚುನಾವಣಾ ಆಯೋಗದ ವೆಬ್‍ಸೈಟ್ https://ceo.karnataka.gov.in/en ಹಾಗೂ ಜಿಲ್ಲೆಯ ವೆಬ್‍ಸೈಟ್ https://kalaburagi.nic.in/en ನಲ್ಲಿ ವೀಕ್ಷಿಸಬಹುದಾಗಿದೆ.

2,378 ಮತಗಟ್ಟೆಗಳು: ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳ ನಗರ ಪ್ರದೇಶದಲ್ಲಿ 705 ಮತ್ತು ಗ್ರಾಮಾಂತರ ಪ್ರದೇಶದಲ್ಲಿ 1,673 ಸೇರಿ ಒಟ್ಟು 2,378 ಮತಗಟ್ಟೆ ಗುರುತಿಸಲಾಗಿದೆ ಎಂದು ಡಿ.ಸಿ. ಫೌಜಿಯಾ ತಿಳಿಸಿದ್ದಾರೆ.ವಿಧಾನಸಭಾ ಕ್ಷೇತ್ರವಾರು ಮಾಹಿತಿ

1) ಅಫಜಲ್ಪುರ- 1,19,836 ಪುರುಷ, 1,14,334 ಮಹಿಳೆ, ಇತರೆ 19 ಸೇರಿ 2,34,189,

2) ಜೇವರ್ಗಿ- 1,23,731 ಪುರುಷ, 1,20,740 ಮಹಿಳೆ, ಇತರೆ 24 ಸೇರಿ 2,44,495,

3) ಚಿತ್ತಾಪುರ- 1,21,011 ಪುರುಷ, 1,21,732 ಮಹಿಳೆ, ಇತರೆ 14 ಸೇರಿ 2,42,757,

4) ಸೇಡಂ- 1,12,987 ಪುರುಷ, 1,16,184 ಮಹಿಳೆ, ಇತರೆ 28 ಸೇರಿ 2,29,199,

5) ಚಿಂಚೋಳಿ- 1,05,722 ಪುರುಷ, 1,02,551 ಮಹಿಳೆ, ಇತರೆ 15 ಸೇರಿ 2,08,288

6) ಗುಲ್ಬರ್ಗ ಗ್ರಾಮೀಣ- 1,35,294 ಪುರುಷ, 1,29,808 ಮಹಿಳೆ, ಇತರೆ 34 ಸೇರಿ 2,65,136,

7) ಗುಲ್ಬರ್ಗ ದಕ್ಷಿಣ- 1,40,703 ಪುರುಷ, 1,43,844 ಮಹಿಳೆ, ಇತರೆ 54 ಸೇರಿ 2,84,601,

8) ಗುಲ್ಬರ್ಗ ಉತ್ತರ- 1,54,825 ಪುರುಷ, 1,57,020 ಮಹಿಳೆ, ಇತರೆ 95 ಸೇರಿ 3,11,940

9) ಆಳಂದ- 1,29,050 ಪುರುಷ, 1,19,250 ಮಹಿಳೆ, ಇತರೆ 39 ಸೇರಿ 2,48,339