ಸಾರಾಂಶ
ಈಗಾಗಲೇ ಎರಡು ಬ್ಯಾಂಕುಗಳನ್ನು ವಿಲೀನ ಮಾಡಿಕೊಂಡು ಯಶಸ್ವಿಯಾಗಿ ನಡೆಸಿದ ಅನುಭವದ ಆದಾರದ ಮೇಲೆ ಮತ್ತೆರಡು ಅಂದರೆ ಮಂಡ್ಯ ಹಾಗೂ ಆಳಂದ ಬ್ಯಾಂಕ್ ವಿಲೀನನ ಪ್ರಸ್ತಾವನೆಗಳು ಆರ್‌ಬಿಐ ಮುಂದಿದ್ದು ಪರಿಶೀಲಿಸಿ.
ಹೊಸಪೇಟೆ: ಆರ್ಥಿಕ ವರ್ಷ ೨೦೨೩-೨೪ನೇ ಸಾಲಿನ ವಿಕಾಸ ಬ್ಯಾಂಕ್ ₹೨೨.೮೩ ಕೋಟಿ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಚ.ಹಿರೇಮಠ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಭದಲ್ಲಿ ಆದಾಯ ತೆರಿಗೆ ಎಲ್ಲ ತೆಗೆದು ನಿವ್ವಳ ₹೯.೨೦ ಕೋಟಿ ಲಾಭ ಗಳಿಸಿದೆ. ವರ್ಷಾಂತ್ಯಕ್ಕೆ ₹೭೬ ಕೋಟಿ ಸ್ವಂತ ಬಂಡವಾಳ, ₹೫೪೪ ಕೋಟಿ ಸಾಲ ಹಾಗೂ ಮುಂಗಡ ಹೊಂದುವ ಮೂಲಕ ಪ್ರಗತಿಯನ್ನು ಮುಂದುವರೆಸಿದೆ ಒಟ್ಟು ₹೧೩೫೫ ಕೋಟಿ ವ್ಯವಹಾರವಾಗಿದೆ ಎಂದರು.ಈಗಾಗಲೇ ಎರಡು ಬ್ಯಾಂಕುಗಳನ್ನು ವಿಲೀನ ಮಾಡಿಕೊಂಡು ಯಶಸ್ವಿಯಾಗಿ ನಡೆಸಿದ ಅನುಭವದ ಆದಾರದ ಮೇಲೆ ಮತ್ತೆರಡು ಅಂದರೆ ಮಂಡ್ಯ ಹಾಗೂ ಆಳಂದ ಬ್ಯಾಂಕ್ ವಿಲೀನನ ಪ್ರಸ್ತಾವನೆಗಳು ಆರ್‌ಬಿಐ ಮುಂದಿದ್ದು ಪರಿಶೀಲಿಸಿ ನೀಡುವ ವರದಿಯ ಆದಾರದ ಮೇಲೆ ವಿಲೀನಕ್ಕೆ ಮುಂದಾಗುವುದಾಗಿ ತಿಳಿಸಿದರು.
ಕಳೆದ ವರ್ಷ ದೊರೆತ ೧೦ ಶಾಖೆಗಳ ಪೈಕಿ ೬ ಶಾಖೆಗಳು ರಾಯಚೂರು, ಲಿಂಗಸೂಗೂರ, ಗಜೇಂದ್ರಗಡ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಕೊಪ್ಪಳ ಆರಂಭವಾಗಿದೆ. ಉಳಿದಂತೆ ದಾವಣಗೇರೆ, ಗದಗ, ಕಲ್ಬುರ್ಗಿ ಹಾಗೂ ಕುಕನೂರ ಶಾಖೆಗಳು ಜೂನ್ ಅಂತ್ಯದೊಳಗಾಗಿ ಆರಂಭವಾಗಲಿವೆ. ವಿಕಾಸ ಬ್ಯಾಂಕ್ ಸ್ವಂತ ಐಎಫ್‌ಎ ಹೊಂದಿದ ರಾಜ್ಯದ ೬ನೇ ಸಹಕಾರಿ ಬ್ಯಾಂಕ್ ಆಗಿ ಏಪ್ರಿಲ್೩ರಿಂದ ಕಾರ್ಯಾರಂಭ ಮಾಡಲಿದೆ ಎಂದರು.ವ್ಯವಸ್ಥಾಪನಾ ಮಂಡಳಿಯ ಅಧ್ಯಕ್ಷ ಬಿ.ಜೆ. ಕುಲಕರ್ಣಿ, ನಿರ್ದೇಶಕರಾದ ಚಂದಾಹುಸೇನ್, ಛಾಯಾ ದಿವಾಕರ, ರಮೇಶ ಪುರೋಹಿತ್, ಎಂ.ವೆಂಕಪ್ಪ, ಕೆ.ವಿಕಾಸ ಹಾಗೂ ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನ ಹಿರೇಮಠ, ಮಾಜಿ ನಿರ್ದೇಶಕರಾದ ಕೆ.ಬಸವರಾಜ್, ಎಂ ವಿಠೋಬಣ್ಣ, ಅನಂತ ಜೋಷಿ ಇತರರಿದ್ದರು.