ಜಗಳೂರಲ್ಲಿ 220 ಟನ್‌ ಗೊಬ್ಬರ ವಿತರಣೆ

| Published : Aug 01 2025, 12:00 AM IST

ಸಾರಾಂಶ

ಜಗಳೂರು ಪಟ್ಟಣದ ಎಪಿಎಂಸಿ ಆವರಣದಲ್ಲಿ ಗುರುವಾರ 60 ಟನ್ ಯೂರಿಯಾ ಗೊಬ್ಬರ ಬಂದಿದ್ದು, ಪೊಲೀಸ್ ಭದ್ರತೆಯಲ್ಲಿ ಗೊಬ್ಬರದ ಪ್ಯಾಕೆಟ್ ವಿತರಿಸಲಾಯಿತು. ರೈತರ ಸರತಿ ಸಾಲು 1 ಕಿಮೀವರೆಗೂ ಇತ್ತು. ಸಾಲಿನಲ್ಲಿ ನಿಂತು ಆಧಾರ್ ಕಾರ್ಡ್ ತೋರಿಸಿ, ಪಿಒಎಸ್ (ಹೆಬ್ಬೆಟ್ಟು ಸ್ಕ್ಯಾನ್) ಪಡೆದು ಗೊಬ್ಬರ ಪಡೆದುಕೊಂಡರು. ಒಟ್ಟಾರೆ ಗುರುವಾರ 220 ಟನ್ ಗೊಬ್ಬರ ವಿತರಣೆಯಾಗಿದೆ.

ಜಗಳೂರು: ಪಟ್ಟಣದ ಎಪಿಎಂಸಿ ಆವರಣದಲ್ಲಿ ಗುರುವಾರ 60 ಟನ್ ಯೂರಿಯಾ ಗೊಬ್ಬರ ಬಂದಿದ್ದು, ಪೊಲೀಸ್ ಭದ್ರತೆಯಲ್ಲಿ ಗೊಬ್ಬರದ ಪ್ಯಾಕೆಟ್ ವಿತರಿಸಲಾಯಿತು. ರೈತರ ಸರತಿ ಸಾಲು 1 ಕಿಮೀವರೆಗೂ ಇತ್ತು. ಸಾಲಿನಲ್ಲಿ ನಿಂತು ಆಧಾರ್ ಕಾರ್ಡ್ ತೋರಿಸಿ, ಪಿಒಎಸ್ (ಹೆಬ್ಬೆಟ್ಟು ಸ್ಕ್ಯಾನ್) ಪಡೆದು ಗೊಬ್ಬರ ಪಡೆದುಕೊಂಡರು. ಒಟ್ಟಾರೆ ಗುರುವಾರ 220 ಟನ್ ಗೊಬ್ಬರ ವಿತರಣೆಯಾಗಿದೆ.

ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದು, ಪೊಲೀಸರು ಎಲ್ಲರನ್ನೂ ಸರತಿ ಸಾಲಿನಲ್ಲಿ ನಿಲ್ಲಿಸಿ, ಪ್ರತಿಯೊಬ್ಬರಿಗೂ ಒಂದೊಂದೇ ಪ್ಯಾಕೆಟ್‌ ಯೂರಿಯಾ ಖರೀದಿಗೆ ಅವಕಾಶ ಕಲ್ಪಿಸಿದರು. ಇನ್‌ಸ್ಪೆಕ್ಟರ್‌ ಸಿದ್ದರಾಮಯ್ಯ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಸಿಬ್ಬಂದಿ 60 ಟನ್ ಗೊಬ್ಬರ ವಿತರಿಸಲು ಕ್ರಮ ಕೈಗೊಂಡಿದ್ದರು.

ಕಳೆದ ಮಂಗಳವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದ ರೈತರನ್ನು ಸಮಾಧಾನ ಮಾಡಿದ್ದ ಕೃಷಿ ಇಲಾಖೆ ಜೆಡಿ ಕೆ.ಜಿಯಾವುಲ್ಲಾ ಅವು ಗುರುವಾರ ಎಪಿಎಂಸಿ ಆವರಣದಲ್ಲಿ ರಸಗೊಬ್ಬರ ವಿತರಿಸಲಾಗುವುದು ಎಂದು ಭರವಸೆ ನೀಡಿದ್ದರು. ಅದರಂತೆ ಎಪಿಎಂಸಿ ಆವರಣದಲ್ಲಿ 60 ಟನ್ ಮತ್ತು ನಾನಾ ವಿಎಸ್ಎಸ್ಎನ್, ಎಫ್‌ಪಿಒಗಳ ಮುಖೇನ ಗುರುವಾರ ಒಟ್ಟು 220 ಟನ್ ಗೊಬ್ಬರ ವಿತರಿಸಲಾಗಿದೆ ಎಂದು ಕೃಷಿ ಇಲಾಖೆ ಎಡಿಎ ಎಚ್.ಶ್ವೇತಾ ತಿಳಿಸಿದರು.

ರಾಜ್ಯ ರೈತ ಸಂಘ ಚಿರಂಜೀವಿ, ರಾಜು, ಗುರುಸಿದ್ದಪ್ಪ, ಬಸಣ್ಣ, ತಿಪ್ಪಣ್ಣ, ಸತೀಶ್, ನಾಗರಾಜು, ತಿಪ್ಪಣ್ಣ, ಶರಣಪ್ಪ, ಸೇರಿದಂತೆ ವಿವಿಧ ರೈತ ಸಂಘದ ಕುಮಾರ ಸೇರಿದಂತೆ ಇತರೇ ಮುಖಂಡರುಗಳು ಗೊಬ್ಬರ ವಿತರಿಸುವಾಗ ಇದ್ದರು.

- - -

-31ಜೆಎಲ್ಆರ್ಚಿತ್ರ3: ಜಗಳೂರು ಪಟ್ಟಣದ ಎಪಿಎಂಸಿ ಆವರಣದಲ್ಲಿ ಯೂರಿಯಾ ಗೊಬ್ಬರಕ್ಕಾಗಿ ರೈತರು ಸರತಿ ಸಾಲಿನಲ್ಲಿ ನಿಂತಿರುವುದು.