ಜ.16, 17 ಹಾಗೂ 18 ರಂದು 22ನೇ ಸತೀಶ ಶುಗರ್ಸ್‌ ಅವಾರ್ಡ್ಸ್‌ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 19ರಂದು ಸತೀಶ ಶುಗರ್ಸ್‌ ಕ್ಲಾಸಿಕ್ ದೇಹದಾರ್ಢ್ಯ ಸ್ಪರ್ಧೆ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಿರ್ಮಿಸಿರುವ ಭವ್ಯ ವೇದಿಕೆಯಲ್ಲಿ ಸಂಜೆ 5ರಿಂದ 10 ಗಂಟೆಯವರೆಗೆ ಜರುಗಲಿವೆ ಎಂದು ಸತೀಶ್ ಶುಗರ್ಸ್‌ ಅವಾರ್ಡ್ಸ್‌ ಸಂಘಟಕ ರಿಯಾಜ ಚೌಗಲಾ ಹೇಳಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ಜ.16, 17 ಹಾಗೂ 18 ರಂದು 22ನೇ ಸತೀಶ ಶುಗರ್ಸ್‌ ಅವಾರ್ಡ್ಸ್‌ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 19ರಂದು ಸತೀಶ ಶುಗರ್ಸ್‌ ಕ್ಲಾಸಿಕ್ ದೇಹದಾರ್ಢ್ಯ ಸ್ಪರ್ಧೆ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಿರ್ಮಿಸಿರುವ ಭವ್ಯ ವೇದಿಕೆಯಲ್ಲಿ ಸಂಜೆ 5ರಿಂದ 10 ಗಂಟೆಯವರೆಗೆ ಜರುಗಲಿವೆ ಎಂದು ಸತೀಶ್ ಶುಗರ್ಸ್‌ ಅವಾರ್ಡ್ಸ್‌ ಸಂಘಟಕ ರಿಯಾಜ ಚೌಗಲಾ ಹೇಳಿದರು.

ನಗರದ ಶ್ರೀ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 22ನೇ ಸತೀಶ ಶುಗರ್ಸ್‌ ಅವಾರ್ಡ್ಸ್‌ ಕಾರ್ಯಕ್ರಮವನ್ನು ಕಳೆದ ವರ್ಷ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು ಕಾರ್ಯಕ್ರಮ ಉದ್ಘಾಟಿಸುವರು. ಮೂರು ದಿನಗಳ ಕಾಲ ನಡೆಯುವ ಸತೀಶ್ ಶುಗರ್ಸ್‌ ಅವಾರ್ಡ್ಸ್‌ನಲ್ಲಿ 1200 ವಿದ್ಯಾರ್ಥಿಗಳು ಭಾಗವಹಿಸುವರು ಎಂದರು.ಜ.16 ರಂದು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಜಾನಪದ ಗಾಯನ ಸ್ಪರ್ಧೆ, ಪ್ರಾಥಮಿಕ ಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಗಾಯನ ಸ್ವರ್ಧೆ, ಪ್ರಾಥಮಿಕ ಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಸಮೂಹ ನೃತ್ಯ ಸ್ಪರ್ಧೆ ಹಾಗೂ ಕಾಲೇಜು ವಿಭಾಗಕ್ಕೆ ಸಮೂಹ ನೃತ್ಯ ಸ್ಪರ್ಧೆ ಜರುಗಲಿದೆ. ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಕಾಲೇಜು ವಿಭಾಗದ ಭಾಷಣ ಸ್ಪರ್ಧಾ ವಿಜೇತರಿಗೆ ಹಾಗೂ ಸಾಂಸ್ಕೃತಿಕ ಸ್ಫರ್ಧಾ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ ಎಂದು ವಿವರಿಸಿದರು.ಜ.17 ರಂದು ಕಾಲೇಜು ವಿಭಾಗದ ಜಾನಪದ, ಗಾಯನ ಸ್ಪರ್ಧೆ, ಮುಕ್ತ ವಿಭಾಗದ ಏಕಾಂಗಿ ನೃತ್ಯ, ಪ್ರಾಥಮಿಕ ಶಾಲಾ ವಿಭಾಗದ ಜನಪದ ನೃತ್ಯ. ಪ್ರೌಢಶಾಲಾ ವಿಭಾಗದ ಸಮೂಹ ನೃತ್ಯ ನಡೆಯಲಿದೆ. ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಪ್ರತಿಭಾವಂತರಿಗೆ ಸನ್ಮಾನ, ಬಹುಮಾನ ವಿತರಣೆ ನಡೆಯಲಿದೆ. ಜ.18 ಕೊನೆಯ ದಿನ ಮುಕ್ತ ವಿಭಾಗದ ಜಾನಪದ ಹಾಗೂ ಗಾಯನ ಸ್ಪರ್ಧೆ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಗಾಯನ ಸ್ಪರ್ಧೆ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಾನಪದ ನೃತ್ಯ ಸ್ಪರ್ಧೆ, ಮುಕ್ತ ವಿಭಾಗದ ಸಮೂಹ ನೃತ್ಯ ಸ್ಪರ್ಧೆ ನಡೆಯಲಿದೆ. ವಿಜೇತರಿಗೆ ಸಚಿವ ಸತೀಶ್ ಜಾರಕಿಹೊಳಿ ಮತ್ತು ಗಣ್ಯರು ಬಹುಮಾನ ವಿತರಿಸುವರು. ಪ್ರತಿಭಾವಂತ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ತಲಾ ₹15 ಸಾವಿರ ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಮಾಹಿತಿ ನೀಡಿದರು. ಭಾಷಣ, ಗಾಯನ, ಜನಪದ ಗಾಯನ, ಸ್ಫರ್ಧೆಗಳಲ್ಲಿ ಪ್ರಥಮ ₹15 ಸಾವಿರ, ದ್ವಿತೀಯ ₹10 ಸಾವಿರ, ತೃತೀಯ ₹7 ಸಾವಿರ ಹಾಗೂ ಸಮೂಹ ನೃತ್ಯ ಮತ್ತು ಜನಪದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ₹50 ಸಾವಿರ, ದ್ವಿತೀಯ ₹30 ಸಾವಿರ, ತೃತೀಯ ₹20 ಸಾವಿರ ಹಾಗೂ ಸೊಲೊ ಡ್ಯಾನ್ಸ್‌ನಲ್ಲಿ ಪ್ರಥಮ ₹25 ಸಾವಿರ, ದ್ವಿತೀಯ ₹20 ಸಾವಿರ, ತೃತೀಯ ₹15 ಸಾವಿರ ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಟ್ರೋಫಿ ನೀಡಿ ಗೌರವಿಸಲಾಗುವುದು ಎಂದರು.ಜ.19ರಂದು ಬೆಳಗ್ಗೆ 11 ಗಂಟೆಗೆ ತಾಲೂಕು ಮಟ್ಟ, ಸಂಜೆ 4 ಗಂಟೆಗೆ ಜಿಲ್ಲೆ ಮತ್ತು ರಾಜ್ಯಮಟ್ಟದ ದೇಹದಾರ್ಢ್ಯ ಸ್ಫರ್ಧೆ ಜರುಗಲಿವೆ. ತಾಲೂಕು ಮಟ್ಟದ ಚಾಂಪಿಯನ್ ಆಫ್ ಚಾಂಪಿಯನ್ ₹50 ಸಾವಿರ, ಜಿಲ್ಲಾಮಟ್ಟದ ಟೈಟಲ್ ವಿನ್ನರ್ ₹1.50 ಸಾವಿರ, ರಾಜ್ಯಮಟ್ಟದ ಟೈಟಲ್ ವಿನ್ನರ್ ₹2 ಲಕ್ಷ ಬಹುಮಾನದೊಂದಿಗೆ ಟ್ರೋಫಿ ನೀಡಲಾಗುವುದು ಎಂದು ತಿಳಿಸಿದರು.ಈ ವೇಳೆ ಎಸ್‌ಎಸ್‌ಎ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರಕಾಶ ಲಕ್ಷಟ್ಟಿ, ಸುರೇಶ್ ಜೋರಾಪೂರ, ಕಾಟೇಶ ಗೋಕಾವಿ, ರಮೇಶ ಕಳ್ಳಿಮನಿ, ಐ.ಎಸ್.ನಗಾರಿ ಉಪಸ್ಥಿತರಿದ್ದರು.