ಸಾರಾಂಶ
ಕನ್ನಡಪ್ರಭ ವಾರ್ತೆ ಮಧುಗಿರಿ
ನಗರದ ರಸ್ತೆ, ಚರಂಡಿಗಳ ಸಮಗ್ರ ಅಭಿವೃದ್ಧಿಗೆ 25 ಕೋಟಿ ರು.ಬಿಡುಗಡೆಯಾಗಿದ್ದು ಅತಿ ಶೀಘ್ರದಲ್ಲೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ರಾಜಣ್ಣ ತಿಳಿಸಿದರು.ಪಟ್ಟದಲ್ಲಿನ ಕೆಲವು ಮುಖ್ಯ ರಸ್ತೆಗಳಿಗೆ ಭೇಟಿ ನೀಡಿ ಪತ್ರಕರ್ತರ ಜೊತೆ ಮಾತನಾಡಿದ ಅವರು,ತುಮಕೂರು ಗೇಟ್ನನಿಂದ - ಶಿರಾ ರಸ್ತೆವರೆಗೂ , ಗೌರಿಬಿದನೂರು ಬೈಪಾಸ್‌ನಿಂದ -ಸಿದ್ದಾಪುರ ಗೇಟ್‌ವರೆಗೂ ಡಬಲ್ ರಸ್ತೆ ಹಾಗೂ ಪಟ್ಟಣದ ಬಹುತೇಕ ಎಲ್ಲ ವಾರ್ಡಿನ ರಸ್ತೆ ಮತ್ತು ಚರಂಡಿಗಳ ಸಮಗ್ರ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.
ಇಲ್ಲಿನ ರಾಜೀವ್‌ಗಾಂಧಿ ಕ್ರೀಡಾಂಗಣದ ಸರ್ವತೋಮುಖ ಅಭಿವೃದ್ಧಿಗೆ 5 ಕೋಟಿ ರು.ಮಂಜೂರಾಗಿದ್ದು ಕ್ರೀಡಾಪಟು ಮತ್ತು ಮಕ್ಕಳಿಗೆ ಅನುಕೂಲವಾಗುವಂತೆ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಲು ಅತಿ ಶೀಘ್ರದಲ್ಲೇ ಕಾಮಗಾರಿ ಕೈಗೆತ್ತಿಕೊಂಡು ಮುಗಿಸುವುದಾಗಿ ತಿಳಿಸಿದರು.ಮಧುಗಿರಿಯ ಇತಿಹಾಸ ಪ್ರಸಿದ್ಧ ದಂಡಿಮಾರಮ್ಮ ದನಗಳ ಜಾತ್ರೆಗೆ ಬರುವ ಗೋಪಾಲಕರಿಗೆ ಪ್ರತಿನಿತ್ಯ ಮಧ್ಯಾಹ್ನದ ಉಪಹಾರ, ಕುಡಿಯುವ ನೀರು ಮತ್ತು ಮಜ್ಜಗೆ ಪ್ಯಾಕೆಟ್‌ಗಳನ್ನು ಉಚಿತವಾಗಿ ವಿತರಿಸಲಾಗುವುದು ಎಂದು ತಿಳಿಸಿದರು.
ಮಧುಗಿರಿ ಕಸಬಾ ವ್ಯಾಪ್ತಿ ಕಾರಮರಡಿ, ಪೆಮ್ಮಯ್ಯನ ಗ್ರಾಮಗಳಲ್ಲಿ ಜನತೆಗೆ ಕುಡಿಯುವ ನೀರು ಯೋಗ್ಯವಲ್ಲದ ಕಾರಣ ಇದನ್ನು ಮನಗಂಡ ಎಂಎಲ್‌ಸಿ ಆರ್.ರಾಜೇಂದ್ರ ತಮ್ಮ ಸ್ವಂತ ಹಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿ ಗ್ರಾಮಸ್ಥರಿಗೆ ನೀರಿನ ವ್ಯವಸ್ಥೆ ಮಾಡಿ ಜನತೆಗೆ ಸಮರ್ಪಿಸಿದರು.ಎಸಿ ಗೋಟೂರು ಶಿವಪ್ಪ.ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡರಾಜು, ಸದಸ್ಯರಾದ ಮಂಜುನಾಥ್ ಆಚಾರ್, ಆಲೀಮ್, ಲೋಕೋಪಯೋಗಿ ಇಲಾಖೆ ಎಇಇ ರಾಜಗೋಪಾಲ್, ತಾಪಂ ಮಧುಸೂದನ್, ಪಶು ಇಲಾಖೆ ಸಿದ್ಧನಗೌಡ, ಡಿವೈಎಸ್‌ಪಿ ಮಂಜುನಾಥ್, ಕೆಆರ್‌ಡಿಎಲ್ ಸಿಂಧೂರಿ, ಪಿಎಸ್‌ಐ ವಿಜಯ್ ಕುಮಾರ್, ಮುಖ್ಯಾಧಿಕಾರಿ ಸುರೇಶ್, ಗುತ್ತಿಗೆದಾರ ಎಸ್‌ಡಿಎಲ್ ಗಣೇಶ್ ಸೇರಿದಂತೆ ಅನೇಕರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))