ಇಲಾಹಿ ಸೊಸೈಟಿ ಷೇರುದಾರರಿಗೆ ಶೇ.25 ರಷ್ಟು ಲಾಭಾಂಶ

| Published : Sep 20 2024, 01:40 AM IST

ಇಲಾಹಿ ಸೊಸೈಟಿ ಷೇರುದಾರರಿಗೆ ಶೇ.25 ರಷ್ಟು ಲಾಭಾಂಶ
Share this Article
  • FB
  • TW
  • Linkdin
  • Email

ಸಾರಾಂಶ

ಎಲ್ಲಾ ಸದಸ್ಯರು ಹಾಗೂ ಷೇರುದಾರರ ಸಹಕಾರದಿಂದ ಸೊಸೈಟಿ ಸುರಕ್ಷಿತವಾಗಿದೆ. ಎಲ್ಲ ಷೇರುದಾರರಿಗೆ ಶೇ.25 ರಷ್ಟು ಲಾಭಾಂಶ ನೀಡಲಾಗುತ್ತಿದೆ ಎಂದು ಇಲಾಹಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಮಹಮದ್ ನಿಜಾಮುದ್ದಿನ್ ಹೇಳಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಎಲ್ಲಾ ಸದಸ್ಯರು ಹಾಗೂ ಷೇರುದಾರರ ಸಹಕಾರದಿಂದ ಸೊಸೈಟಿ ಸುರಕ್ಷಿತವಾಗಿದೆ. ಎಲ್ಲ ಷೇರುದಾರರಿಗೆ ಶೇ.25 ರಷ್ಟು ಲಾಭಾಂಶ ನೀಡಲಾಗುತ್ತಿದೆ ಎಂದು ಇಲಾಹಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಮಹಮದ್ ನಿಜಾಮುದ್ದಿನ್ ಹೇಳಿದರು.

ಅಗಸನಕಲ್ಲು ಟಿಎಂಕೆ ಕಾಂಪೌಂಡ್‍ನಲ್ಲಿರುವ ಅಹಮದ್ ಪ್ಯಾಲೇಸ್‍ನಲ್ಲಿ ಗುರುವಾರ ನಡೆದ ಇಲಾಹಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 2023-24 ನೇ ಸಾಲಿನ 60 ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಷೇರು ಪಡೆದುಕೊಳ್ಳಲು ಆಗದಂತಹ ಕಡು ಬಡವರಿದ್ದಾರೆ. ಅಂತಹವರಿಂದ ಕೇವಲು ನೂರು, ಐವತ್ತು ರು ಶುಲ್ಕಸಂಗ್ರಹಿಸಿ ಒಂದು ವರ್ಷಕ್ಕೆ ಹತ್ತು ಸಾವಿರ ರು. ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ನೀಡಿದ್ದೇವೆ. ಎಫ್.ಡಿ, ಎಸ್ ಬಿ ಪಿಗ್ಮಿ ಖಾತೆ ತೆರೆದು ವ್ಯವಹರಿಸಿ ರಾಜ್ಯದಲ್ಲಿಯೇ ನಮ್ಮ ಸೊಸೈಟಿ ಮೊದಲ ಸ್ಥಾನದಲ್ಲಿರುವುದು ಹೆಗ್ಗಳಿಕೆ ಎಂದರು.ಸಾಲ ವಸೂಲಾತಿ ಶೇ.78 ರಷ್ಟಿದೆ. ಮುಂದಿನ ದಿನಗಳಲ್ಲಿ ಸಾಲ ವಸೂಲಾತಿ ಪ್ರಮಾಣವನ್ನು ಶೇ.95 ಕ್ಕೆ ತರುವಲ್ಲಿ ಪ್ರಯತ್ನ ಮಾಡಲಾಗುವುದು. ಇದಕ್ಕೆ ಸಾಲ ತೆಗೆದುಕೊಂಡವರಿಗಿಂತ ಜಾಮೀನುದಾರರ ಜವಾಬ್ದಾರಿ ತುಂಬಾ ಮುಖ್ಯ. ₹14,04,163 ಷೇರು ಬಂಡವಾಳವಿದ್ದು, 1400 ಸದಸ್ಯರಿದ್ದಾರೆ. ₹5.15 ಕೋಟಿ ಸಾಲ ವಿತರಿಸಲಾಗಿದೆ. ಮಾಸಾಂತ್ಯಕ್ಕೆ ₹6.14 ಕೋಟಿ ಸಾಲ ಬಾಕಿ ಇದೆ. ₹7.83 ಲಕ್ಷ ಮಾತ್ರ ಸುಸ್ತಿಯಾಗಿದೆ ಎಂದು ತಿಳಿಸಿದರು.ಸಂಘವು ನೀಡಿದ ಸಾಲಗಳ ಮೇಲೆ ಮಾಸಿಕ ಬಡ್ಡಿಯನ್ನು ನೀಡುತ್ತಿರುವುದರಿಂದ ಸಾಲ ಪಡೆದವರು ತಮ್ಮ ಮಾಸಿಕ ಕಂತು ಹಾಗೂ ಬಡ್ಡಿಯನ್ನು ಕಾಲ ಕಾಲಕ್ಕೆ ಪಾವತಿಸಿ ಶೇ.2 ರಷ್ಟು ರಿಯಾಯಿತಿ ಲಾಭವನ್ನು ಪಡೆದುಕೊಂಡು ಸೊಸೈಟಿ ಇನ್ನು ಹೆಚ್ಚಿನ ಅಭಿವೃದ್ದಿಯಾಗಲು ಸಹಕರಿಸಬೇಕೆಂದು ಮಹಮದ್ ನಿಜಾಮುದ್ದಿನ್ ಮನವಿ ಮಾಡಿದರು.

ಇಲಾಹಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಜಮೀರ್ ಅಹಮದ್, ಗೌರವ ಕಾರ್ಯದರ್ಶಿ ಸೈಯದ್ ದಾದಾಪೀರ್, ನಿರ್ದೇಶಕರುಗಳಾದ ಹಫೀಜ್, ಮಹಮದ್ ಶಫಿ, ನಯಾಜ್ ಅಹಮದ್, ಸಾಧಿಕ್‍ಭಾಷ, ಅಪ್ಸರಭಾನು, ಉಮೈ ತಸ್ಮಿಯಭಾನು, ಅಮ್ಜದ್‍ಭಾಷಾ, ಶಬ್ಬಿರ್‍ಖಾನ್ ವೇದಿಕೆಯಲ್ಲಿದ್ದರು.

ವ್ಯವಸ್ಥಾಪಕ ಎಂಎಐ ಪಾಷ ಸೊಸೈಟಿಯ ವರದಿ ಮಂಡಿಸಿದರು. ಜಾನಪದ ಹಾಡುಗಾರ ಹರೀಶ್ ನಿರೂಪಿಸಿದರು. ಎಸ್ಎಸ್ಎಲ್ ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿರುವ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕರಿಸಲಾಯಿತು.