ರಾಜೀ ಸಂಧಾನದ ಮೂಲಕ 2990 ಪ್ರಕರಣ ಇತ್ಯರ್ಥ

| Published : Sep 15 2024, 01:59 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಪಟ್ಟಣದ ನ್ಯಾಯಾಲಯಗಳ ಸಂಕೀರ್ಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿಯಿಂದ ಶನಿವಾರ ರಾಷ್ಟ್ರೀಯ ಲೋಕ ಅದಾಲತ್‌ ನಡೆಯಿತು. ಲೋಕ ಅದಾಲತ್‌ನಲ್ಲಿ ಎರಡು ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಒಟ್ಟು 6291 ಬಾಕಿ ಇರುವ ಪ್ರಕರಣಗಳಲ್ಲಿ 1866 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಆ ಪೈಕಿ ಒಟ್ಟು 1265 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಪಟ್ಟಣದ ನ್ಯಾಯಾಲಯಗಳ ಸಂಕೀರ್ಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿಯಿಂದ ಶನಿವಾರ ರಾಷ್ಟ್ರೀಯ ಲೋಕ ಅದಾಲತ್‌ ನಡೆಯಿತು. ಲೋಕ ಅದಾಲತ್‌ನಲ್ಲಿ ಎರಡು ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಒಟ್ಟು 6291 ಬಾಕಿ ಇರುವ ಪ್ರಕರಣಗಳಲ್ಲಿ 1866 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಆ ಪೈಕಿ ಒಟ್ಟು 1265 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. ಅದರಲ್ಲಿ ಅಪರಾಧ ಪ್ರಕರಣಗಳು, ಎಂವಿಸಿ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಮೆಂಟೆನೆನ್ಸ್ ಪ್ರಕರಣಗಳು, ಪಾಲು ವಾಟ್ನಿ ದಾವೆಗಳು, ಎಲ್‌ಎಸಿಇಪಿ ಪ್ರಕರಣಗಳು, ಎಮ್‌ವಿಸಿ, ಇಪಿ ಪ್ರಕರಣಗಳು, ಅಬಕಾರಿ ಇಲಾಖೆಯ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥ ಪಡಿಸಲಾಯಿತು. ಪೂರ್ವದಾವೆ (ಪಿಎಲ್‌ಸಿ) ಪ್ರಕರಣಗಳಲ್ಲಿ, ಟ್ರಾಫಿಕ್ ಚಲನ್ ಪ್ರಕರಣಗಳು, ಕಂದಾಯ ಇಲಾಖೆಯ ಕಂದಾಯ ಅದಾಲತ್ ಪ್ರಕರಣಗಳು, ಬ್ಯಾಂಕ್‌ ಪ್ರಕರಣಗಳು ಸೇರಿ ಒಟ್ಟು 4501 ಪ್ರಕರಣಗಳಲ್ಲಿ 2990 ಪ್ರಕರಣಗಳು ರಾಜೀ ಸಂಧಾನದ ಮೂಲಕ ಇತ್ಯರ್ಥಗೊಂಡಿವೆ. ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ರವೀಂದ್ರ ಕುಮಾರ ಕಟ್ಟಿಮನಿ ಹಾಗೂ ಸದಸ್ಯ ಕಾರ್ಯದರ್ಶಿ ಸಂಪತಕುಮಾರ ಬಳೂಲಗಿಡದ ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿದ್ದಾರೆ.ಲೋಕ ಅದಾಲತ್‌ನಲ್ಲಿ ನ್ಯಾಯಾಂಗ ಸಂಧಾನಕಾರರಾಗಿ ವಕೀಲರಾದ ಬಿ.ಪಿ.ಮ್ಯಾಗೇರಿ ಹಾಗೂ ಎನ್‌.ಬಿ.ಮುದ್ನಾಳ, ಸರ್ಕಾರಿ ವಕೀಲರಾದ ಬಸವರಾಜ ಆಹೇರಿ ಹಾಗೂ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಶಶಿಕಾಂತ ಮಾಲಗತ್ತಿ ಮತ್ತು ತಾಲೂಕು ಕಾನೂನು ಸೇವಾ ಸಮಿತಿಯ ಆಡಳಿತ ಸಹಾಯಕ ಹಾಗೂ ನ್ಯಾಯಾಲಯ ಸಿಬ್ಬಂದಿ ಅರವಿಂದ ಕುಂಬಾರ, ಎ.ಎಸ್.ಮುಜಾವರ, ಆರ್.ಎಸ್. ಕಮ್ಮಾರ್, ಬಸವರಾಜ ಬೂದಿಹಾಳ, ನರ್ಮದಾ ಮರೋಳ, ಗೀತಾ ರಾಂಪುರ್, ಸುಮಿತ್ರಾ, ರೇಣುಕಾ ಜಾನಮಟ್ಟಿ, ಜ್ಯೋತಿ ಹೆಬ್ಬಾಳ,ನಾಗಮ್ಮ ಹೂಗಾರ, ಪೂಜಾರಿ,ಮಂಜುಳಾ ಹೊಸಮನಿ, ಎನ್.ಬಿ.ಮದಿಹಳ್ಳಿ, ಆರ್.ಎಸ್.ಮನಗೂಳಿ, ಇಸಾಕ್ ಒಂಟಿ, ನಾಗರೆಡ್ಡಿ ಪೊಲೀಸ್, ಚಪ್ಪರಬಂಧ ಪೊಲೀಸ್ ಹಾಜರಿದ್ದರು.ಶಿರಸ್ತೇದಾರರಾದ ಎಸ್.ಎಸ್.ಚಕ್ರಮನಿ,ಸುರೇಶ ಬಳಗಾನೂರ, ಮಹಾಂತೇಶ್ ಹಚ್ಚರೆಡ್ಡಿ, ನ್ಯಾಯವಾದಿಗಳಾದ ವಿ.ಎಂ.ನಾಗಠಾಣ, ಜೆ.ಎ.ಚಿನಿವಾರ, ಎಸ್. ಆರ್.ಸಜ್ಜನ. ಎನ್‌.ಜಿ.ಕುಲಕರ್ಣಿ. ಎನ್.ಆರ್.ಮೊಕಾಶಿ,ಎಂ.ಆರ್.ಪಾಟೀಲ. ಚೇತನ್ ಶಿವಶಿಂಪಿ, ಬಿ.ಎಂ.ಮುಂದಿನಮನಿ. ಐ.ಎಸ್.ಹಗಟಗಿ. ಎಂ.ಎ.ಲಿಂಗಸೂರ. ಎಲ್.ಆರ್.ನಾಲತವಾಡ, ಚಿಲ್ಲಾಳಶೆಟ್ಟರ್ ಇತರರು ಇದ್ದರು.