ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಪಟ್ಟಣ ಪುರಸಭೆಯ 2025-26ರ ಸಾಲಿನ ಅಂದಾಜು ಆಯವ್ಯಯ ಪಟ್ಟಿಯನ್ನು ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ ಸದಸ್ಯರ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಸೋಮವಾರ ಪ್ರಕಟಿಸಿದರು. ಒಟ್ಟು ಅಂದಾಜು ಆರಂಭ ಶುಲ್ಕ ₹ 3.91 ಕೋಟಿ, ಬಂಡವಾಳ ಸ್ವೀಕೃತಿಗಳು ₹ 3.12 ಕೋಟಿ, ಅಸಾಧಾರಣ ಸ್ವೀಕೃತಿಗಳು ₹ 2.09 ಕೋಟಿ ಒಟ್ಟು 16.88 ಕೋಟಿ ವೆಚ್ಚಗಳು ರಾಜಸ್ವ ಪಾವತಿಗಳು ₹ 11.58 ಕೋಟಿ, ಬಂಡವಾಳ ಪಾವತಿಗಳು 3.20 ಕೋಟಿ ಒಟ್ಟು ವೆಚ್ಚ 16.87 ಕೋಟಿ, ಒಟ್ಟು ಶುಲ್ಕ ₹ 13.75 ಕೋಟಿ, ಅಂದಾಜು ಅಂತಿಮ ಶುಲ್ಕ ₹ 3.92 ಕೋಟಿ ಉಳಿಕೆ ಎಂದು ವಿವರಿಸಿದರು.ಈ ವೇಳೆ ಮಾತನಾಡಿದ ಅವರು ಪಟ್ಟಣದ ಮೇಘಾ ಮಾರ್ಕೇಟ್‌ನ ಎಲ್ಲ ವಾರ್ಡ್‌ಗಳಲ್ಲಿ ರಸ್ತೆ, ಚರಂಡಿ, ವಿದ್ಯುದ್ಧೀಪ, ಉದ್ಯಾನವನಗಳ ಅಭಿವೃದ್ಧಿ ಸೇರಿದಂತೆ ಹಲವರು ಅಭಿವೃದ್ಧಿ ಪೂಕರ ಕಾಮಗಾರಿಗಳನ್ನು ಕೈಗೊಳ್ಳಲು ಈಗಾಗಲೇ ಸರ್ಕಾರ ಸುಮಾರು ₹ 15 ಕೋಟಿಗಳ ವಿಶೇಷ ಅನುದಾನ ಬಿಡುಗಡೆಗೊಳಿಸಿದೆ. ಅದರಂತೆ ಈಗಾಗಲೇ ಪಟ್ಟಣದ ಮುಖ್ಯ ಬಜಾರದಲ್ಲಿ ಮೆಘಾ ಮಾರ್ಕೇಟ್ ನಿರ್ಮಾಣಕ್ಕಾಗಿ ಟೆಂಡರ್ ಕರೆದು ಗುತ್ತಿಗೆದಾರರ ನೇಮಕ ಮಾಡಬೇಕಿದೆ. ಆದರೆ, ಸರ್ಕಾರ ನಿಗದಿಪಡಿಸಿದ ದರಕ್ಕೆ ತಕ್ಕಂತೆ ಒಪ್ಪಿ ಗುತ್ತಿಗೆದಾರರಿಗೆ ಕಾಮಗಾರಿ ನಿರ್ವಹಿಸಲು ಅನುಮತಿಗಾಗಿ ಸರ್ವ ಸದಸ್ಯರೆಲ್ಲರು ಒಪ್ಪಿಗೆ ಸೂಚಿಸಿ ಅನುಮೋದಿಸಿದರು.
ಈ ಹಿಂದೆ ಒಳಚಂಡಿ ಮಂಡಳಿಯ ಅಧಿಕಾರಿಗಳು ಪಟ್ಟಣದ ಎಲ್ಲ ವಾರ್ಡ್‌ಗಳಲ್ಲಿ ಅವೈಜ್ಞಾನಿಕ ಮತ್ತು ಕಳಪೆ ಒಳಚರಂಡಿ ಕಾಮಗಾರಿ ನಿರ್ವಹಿಸಿದ್ದರಿಂದ ಸಂಪೂರ್ಣ ಕಾಮಗಾರಿ ಹಳ್ಳ ಹಿಡಿದಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಸಧ್ಯ ಪಟ್ಟಣದ ಜನರಿಗೆ ದಿನದ 24 ಗಂಟೆ ಕುಡಿಯುವ ನೀರು ಪೂರೈಸುವ ಕಾಮಗಾರಿ ಪ್ರಾರಂಭಿಸಿದೆ. ಆಯಾ ವಾರ್ಡ್‌ಗಳ ಸದಸ್ಯರಿಗೆ ತಿಳಿಸದೇ ಕಳಪೆ ಕಾಮಗಾರಿ ನಡೆಸುತ್ತಿದ್ದಾರೆ. ಜನರಿಗೆ ಒಳಿತಾಗುವ ಸರ್ಕಾರದ ಯೋಜನೆ ಶಾಶ್ವತ ಅನುಕೂಲವಾಗುವಂತೆ ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಗುತ್ತಿಗೆದಾರರು ಗುಣಮಟ್ಟ ಕಾಮಗಾರಿ ನಡೆಸುವಂತೆ ಸೂಚಿಸಬೇಕು. ಇಲ್ಲವಾದರೆ ಕಾಮಗಾರಿ ಸ್ಥಗಿತಗೊಳಿಸುವಂತೆ ಹೇಳಬೇಕು ಎಂದು ಪುರಸಭೆ ಸದಸ್ಯ ಸಹನಾ ಬಡಿಗೇರ, ಬಸವರಾಜ ಮೂರಾಳ, ವಿರೇಶ ಹಡಲಗೇರಿ, ರೀಯಾಜಹ್ಮದ ಢವಳಗಿ ಸೇರಿ ಹಲವರು ಪುರಸಭೆ ಮುಖ್ಯಾಧಿಕಾರಿಗೆ ಸಲಹೆ ನೀಡಿದರು. ಈ ವೇಳೆ ಮುಖ್ಯಾಧಿಕಾರಿ ಹಾಗೂ ಅಧ್ಯಕ್ಷ ಮೈಬೂಬ ಗೊಳಸಂಗಿ ಶಾಶ್ವತ ಕುಡಿಯುವ ನೀರು ಪೂರೈಸುವ ಕಾಮಗಾರಿಯೂ ಗುಣಮಟ್ಟ ಕಾಯ್ದುಕೊಳ್ಳುವಂತೆ ವೈಜ್ಞಾನಿಕವಾಗಿ ನಿರ್ಮಿಸುವಂತೆ ನೋಡಿಕೊಳ್ಳುತ್ತೇವೆ. ಆಗುವುದಿಲ್ಲ ಎಂದರೆ ಗುತ್ತಿಗೆದಾರರು ಕೆಲಸ ಬಿಟ್ಟು ಹೋಗಲಿ ಎಂದು ಖಡಕ್ ಆಗಿಯೇ ಹೇಳಿದರು.ಆಗ ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಮಾತನಾಡಿ, ಪಟ್ಟಣದಲ್ಲಿನ ಅನಧಿಕೃತ ಲೇಔಟ್‌ಗಳ ಗುಂಟಾ ಪ್ಲಾಟುಗಳಿಗೆ ಸಧ್ಯ ರಾಜ್ಯ ಸರ್ಕಾರ ಬ ಖಾತಾ ಪರಿವರ್ತನೆ ಮಾಡುವ ಮೂಲಕ ಇ ಖಾತಾದಲ್ಲಿ ಸೇರ್ಪಡೆ ಮಾಡಬೇಕು ಎಂದು ಸುತ್ತೋಲೆ ಹೊರಡಿಸಿದೆ. ಅದರಂತೆ ಈಗಾಗಲೇ ಪಟ್ಟಣದಲ್ಲಿ ಒಟ್ಟು 14,682 ಆಸ್ತಿಗಳು ಈ ಪೈಕಿ ಸುಮಾರು 3780 ಆಸ್ತಿಗಳು ಬ ಖಾತಾಕ್ಕೆ ಒಳಪಡುತ್ತವೆ. ಈ ಯೋಜನೆಗಾಗಿ ಸರ್ಕಾರ ಮೂರು ತಿಂಗಳ ಗಡುವು ನೀಡಿದೆ. ಇದಕ್ಕೆ ಸಂಬಂಧಿಸಿದಂತೆ ಆಸ್ತಿಗಳ ಮಾಲಿಕರು ಸಂಪೂರ್ಣ ದಾಖಲೆಗಳೊಂದಿಗೆ ಪುರಸಭೆ ಕಚೇರಿಗೆ ಆಗಮಿಸಿ ಬ ಖಾತಾಗೆ ಒಳಪಡುವ ಆಸ್ತಿಗಳ ಮಾಲಿಕರು ಸರ್ಕಾರ ನಿಗದಿಪಡಿಸಿದ ತೆರಿಗೆ ಪಾವತಿಸಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ಈ ಬಗ್ಗೆ ಎಲ್ಲ ವಾರ್ಡ್‌ಗಳಲ್ಲಿ ಜನಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸಿದರು.
ನಾಮನಿರ್ದೇಶಿತ ಸದಸ್ಯ ಹರೀಶ್ ಬೇವೂರ ಮಾತನಾಡಿ, ಆಲಮಟ್ಟಿ ಮಾರ್ಗದಲ್ಲಿನ ಹುನಗುಂದವರ ಲೇಔಟ್‌ನ್ನು ಬ ಖಾತಾದಲ್ಲಿ ಸೇರ್ಪಡೆ ಮಾಡಬಾರದು. ಉದ್ಯಾನವನಕ್ಕಾಗಿ ಬಿಟ್ಟ ಜಾಗೆಯನ್ನು ಪ್ಲಾಟ್‌ಗಳನ್ನಾಗಿ ಪರಿವರ್ತಿಸಿ ಉತಾರ ಕೊಟ್ಟು ಅನಧಿಕೃತ ಮಾರಾಟ ಮಾಡಲಾಗಿದೆ ಎಂದು ಆಕ್ಷೇಪಿಸಿದರು. ಇದಕ್ಕೆ ಮುಖ್ಯಾಧಿಕಾರಿ ಅಂತಹ ಯಾವುದೇ ಆಸ್ತಿಗಳಿದ್ದರು ಅದಕ್ಕೊಂದು ವಿಶೇಷ ದಾಖಲೆಗಳ ತನಿಖಾ ತಂಡ ರಚಿಸಿ ಮೇಲಾಧಿಕಾರಿಗಳ ಅಭಿಪ್ರಾಯ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.ಈ ವೇಳೆ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಸದಸ್ಯರಾದ ಸಮೀರ ದ್ರಾಕ್ಷೀ, ಶಾಹಾಜದಬಿ ಹುಣಸಗಿ, ಭಾರತಿ ಪಾಟೀಲ, ಅಶೊಕ ಹೊನ್ನಳ್ಳಿ, ಚನ್ನಪ್ಪ ಕಂಠಿ, ಶಿವು ಶಿವಪುರಿ, ಪ್ರತಿಭಾ ಅಂಗಡಗೇರಿ, ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲಪ್ಪ ನಾಯಕಮಕ್ಕಳ, ನಾಮನಿರ್ದೇಶಿತ ಸದಸ್ಯ ಗೋಪಿ ಮಡಿವಾಳ ಮುಂತಾದವರು ಇದದರು