ನಾಲತವಾಡ: ಹಾಡುಹಗಲೇ ಬೈಕ್‌ನಲ್ಲಿದ್ದ ಸುಮಾರು ₹ 3 ಲಕ್ಷ ನಗದು ಹಣವನ್ನು ದುಷ್ಕರ್ಮಿಗಳು ಕಳ್ಳತನ ಮಾಡಿರುವ ಘಟನೆ ನಾಲತವಾಡ ಪಟ್ಟಣ ಬಸ್‌ ನಿಲ್ದಾಣದ ಬಳಿ ಶುಕ್ರವಾರ ನಡೆದಿದೆ. ಘಾಳಪೂಜಿ ಗ್ರಾಮದ ಭೀರಪ್ಪ ಬಿರಾದಾರ ಎಂಬ ಯುವಕ ಹಣ ಕಳೆದುಕೊಂಡಿರುವ ವ್ಯಕ್ತಿ. ಈ ಬ್ಯಾಂಕ್‌ನಿಂದ ಹಣ ಡ್ರಾ ಮಾಡಿಕೊಂಡು ಬಂದಿದ್ದ ಭೀರಪ್ಪ ಬಸ್‌ ನಿಲ್ದಾಣದ ಬಳಿಯ ಬೇಕರಿಯಲ್ಲಿ ಖರೀದಿಗಾಗಿ ಹಣವಿದ್ದ ಬೈಕ್‌ ನ್ನು ರಸ್ತೆಯಲ್ಲಿ ನಿಲ್ಲಿಸಿ ಹೋಗಿದ್ದು, ಬೇಕರಿಯಿಂದ ವಾಪಸ್‌ ಬಂದು ಹಣ ಪರಿಶೀಲಿಸಿದಾಗ ಹಣ ಕಳ್ಳತನವಾಗಿರುವುದು ಗೊತ್ತಾಗಿದೆ.

ನಾಲತವಾಡ: ಹಾಡುಹಗಲೇ ಬೈಕ್‌ನಲ್ಲಿದ್ದ ಸುಮಾರು ₹ 3 ಲಕ್ಷ ನಗದು ಹಣವನ್ನು ದುಷ್ಕರ್ಮಿಗಳು ಕಳ್ಳತನ ಮಾಡಿರುವ ಘಟನೆ ನಾಲತವಾಡ ಪಟ್ಟಣ ಬಸ್‌ ನಿಲ್ದಾಣದ ಬಳಿ ಶುಕ್ರವಾರ ನಡೆದಿದೆ. ಘಾಳಪೂಜಿ ಗ್ರಾಮದ ಭೀರಪ್ಪ ಬಿರಾದಾರ ಎಂಬ ಯುವಕ ಹಣ ಕಳೆದುಕೊಂಡಿರುವ ವ್ಯಕ್ತಿ. ಈ ಬ್ಯಾಂಕ್‌ನಿಂದ ಹಣ ಡ್ರಾ ಮಾಡಿಕೊಂಡು ಬಂದಿದ್ದ ಭೀರಪ್ಪ ಬಸ್‌ ನಿಲ್ದಾಣದ ಬಳಿಯ ಬೇಕರಿಯಲ್ಲಿ ಖರೀದಿಗಾಗಿ ಹಣವಿದ್ದ ಬೈಕ್‌ ನ್ನು ರಸ್ತೆಯಲ್ಲಿ ನಿಲ್ಲಿಸಿ ಹೋಗಿದ್ದು, ಬೇಕರಿಯಿಂದ ವಾಪಸ್‌ ಬಂದು ಹಣ ಪರಿಶೀಲಿಸಿದಾಗ ಹಣ ಕಳ್ಳತನವಾಗಿರುವುದು ಗೊತ್ತಾಗಿದೆ.ವಿಷಯ ತಿಳಿದು ಘಟನಾ ಸ್ಥಳಕ್ಕೆ ಮುದ್ದೇಬಿಹಾಳ ಠಾಣೆ ಪಿಎಸ್‌ಐ ಸಂಜೀವ ತಿಪ್ಪಾರಡ್ಡಿ ಆಗಮಿಸಿ ಹಣ ಕಳೆದುಕೊಂಡ ಯುವಕನಿಂದ ಸಂಪೂರ್ಣ ಮಾಹಿತಿ ಪಡೆದರು. ನಂತರ ಬೇಕರಿ ಸೇರಿದಂತೆ ಸುತ್ತಮುತ್ತ ಇರುವ ಅಂಗಡಿಗಳ ಸಿ.ಸಿ ಕ್ಯಾಮರಾಗಳನ್ನು ಪರಿಶೀಲನೆ ಮಾಡಿದ್ದಾರೆ. ಕಳ್ಳತನ ಮಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ, ಆದರೆ, ಕಳ್ಳನ ಮುಖ ಸ್ಪಷ್ಟವಾಗಿ ಕಾಣುತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮುದ್ದೇಬಿಹಾಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.