ಸಾರಾಂಶ
ರಾಷ್ರ್ಟೀಯ ಹೆದ್ದಾರಿ 218ರಲ್ಲಿ ಸಮೀಪದ ಹೊಲಗೇರಿ ಗ್ರಾಮದ ಭಾರತ ಪೆಟ್ರೋಲ್ ಪಂಪ್ ಬಳಿ ಇಳಿಜಾರು ಪ್ರದೇಶದಲ್ಲಿ ರಸ್ತೆ ಅಪಘಾತ ಸಂಭವಿಸಿ ಮೂವರು ಮೃತಪಟ್ಟ ಘಟನೆ ಗುರುವಾರ ರಾತ್ರಿ ನಡೆದಿದೆ.
ಕನ್ನಡಪ್ರಭ ವಾರ್ತೆ ಕೆರೂರ
ರಾಷ್ರ್ಟೀಯ ಹೆದ್ದಾರಿ 218ರಲ್ಲಿ ಸಮೀಪದ ಹೊಲಗೇರಿ ಗ್ರಾಮದ ಭಾರತ ಪೆಟ್ರೋಲ್ ಪಂಪ್ ಬಳಿ ಇಳಿಜಾರು ಪ್ರದೇಶದಲ್ಲಿ ರಸ್ತೆ ಅಪಘಾತ ಸಂಭವಿಸಿ ಮೂವರು ಮೃತಪಟ್ಟ ಘಟನೆ ಗುರುವಾರ ರಾತ್ರಿ ನಡೆದಿದೆ. ಮೃತರು ಬಾಗಲಕೋಟೆಯಿಂದ ಕುಳಗೇರಿ ಕಡೆಗೆ ಬೈಕ್‌ನಲ್ಲಿ ಹೋಗುತ್ತಿರುವಾಗ ಎದುರಿಗೆ ಬಂದ ಲಾರಿ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟರೆ. ಗಂಭೀರ ಗಾಯಗೊಂಡ ಓರ್ವನನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಸಾಗಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾನೆ. ಬಾದಾಮಿ ತಾಲೂಕಿನ ವಡವಟ್ಟಿ ಗ್ರಾಮದ ನವೀನ ಪಾಂಡಪ್ಪ ಕುಂಬಾರ (22), ರಮೇಶ ಭೀಮಪ್ಪ ಕಂಬಳಿ (19) ಹಾಗೂ ಕುಳಗೇರಿ ಗ್ರಾಮದ ಮುತ್ತಣ್ಣ ಯಂಕಪ್ಪ ದಾಸರ ಮೃತರು. ಲಾರಿ ಚಾಲಕ ಸ್ಥಳದಲ್ಲೇ ಲಾರಿ ಬಿಟ್ಟು ಪರಾರಿಯಾಗಿದ್ದಾನೆ.ಮೃತರು ಟ್ರ್ಯಾಕ್ಟರ್ ರೇಡಿಯೇಟರ್ ದುರಸ್ತಿ ಸಲುವಾಗಿ ಬಾಗಲಕೋಟೆಗೆ ಹೋಗಿದ್ದು, ಸ್ವಗ್ರಾಮಕ್ಕೆ ಮರಳುವ ವೇಳೆ ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಎಸ್‌ಪಿ ಅಮರನಾಥ ರೆಡ್ಡಿ,ಹೆಚ್ಚುವರಿ ಎಸ್ಪಿಗಳಾದ ಪ್ರಸನ್ನಕುಮಾರ ದೇಸಾಯಿ, ಮಹಾಂತೇಶ್ವರ ಜಿದ್ದಿ, ಡಿಎಸ್ಪಿ ವಿಶ್ವನಾಥರಾವ್ ಕುಲಕರ್ಣಿ, ಸಿಪಿಐ ಕರಿಯಪ್ಪ ಬನ್ನೆ, ಪಿಎಸ್‌ಐ ಭೀಮಪ್ಪ ರಭಕವಿ ಭೇಟಿ ನೀಡಿದ್ದಾರೆ. ಕೆರೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.;Resize=(128,128))
;Resize=(128,128))
;Resize=(128,128))