ಮಹಿಳಾ ಕಳಜಿಯಂನಿಂದ 30.86 ಕೋಟಿ ವಹಿವಾಟು

| Published : Jul 26 2025, 12:00 AM IST

ಸಾರಾಂಶ

ಮಹಿಳಾ ಕಳಂಜಿಯಂ ಒಕ್ಕೂಟ (ರಿ) ಧಾನ್ ಪೌಂಡೇಷನ್‌ ವತಿಯಿಂದ ಗುರುವಾರ 21ನೇ ವರ್ಷದ ಸರ್ವ ಸದಸ್ಯರ ಸಭೆಯನ್ನು ಪಟ್ಟಣದ ಬನಶಂಕರಿ ಬಡಾವಣೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭವಾರ್ತೆ ಪಾವಗಡ

ಮಹಿಳಾ ಕಳಂಜಿಯಂ ಒಕ್ಕೂಟ (ರಿ) ಧಾನ್ ಪೌಂಡೇಷನ್‌ ವತಿಯಿಂದ ಗುರುವಾರ 21ನೇ ವರ್ಷದ ಸರ್ವ ಸದಸ್ಯರ ಸಭೆಯನ್ನು ಪಟ್ಟಣದ ಬನಶಂಕರಿ ಬಡಾವಣೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಮಹಿಳಾ ಕಳಂಜಿಯಂ ಒಕ್ಕೂಟದ ವ್ಯವಸ್ಥಾಪಕರಾದ ಎ.ಅಲ್ಕೂರಪ್ಪ ಸಭೆಯನ್ನುದ್ದೇಶಿಸಿ ಉದ್ದೇಶಿಸಿ ಮಾತನಾಡಿ, ಒಕ್ಕೂಟದಲ್ಲಿ 410 ಸ್ವಸಹಾಯ ಸಂಘಗಳಿದ್ದು 6500 ಸದಸ್ಯರನ್ನ ಹೊಂದಿದೆ. 10 ಕೋಟಿಯಷ್ಟು ಉಳಿತಾಯ ಹೊಂದಿದ್ದು ನಿರಂತರವಾಗಿ ಬ್ಯಾಂಕ್‌ಗಳ ಸಂಪರ್ಕ ಸಾಧಿಸಿ 24-25ನೇ ಸಾಲಿನಲ್ಲಿ 13.76ಕೋಟಿಯಷ್ಟು ಸಾಲ ಪಡೆದಿದೆ. ಕೆನರಾ, ಬ್ಯಾಂಕ್ ಆಫ್‌ ಬರೋಡ, ಯೂನಿಯನ್ ಬ್ಯಾಂಕ್‌ ಗಳಲ್ಲಿ ಸಾಲ ಪಡೆಯುವಲ್ಲಿ ಯಶಸ್ವಿಯಾಗಿ ಬಡ ಮಹಿಳೆಯರ ಸಾಮಾಜಿಕ-ಆರ್ಥಿಕ ಅಭಿವೃದ್ದಿಗೆ ಸಹಕಾರಿಯಾಗಿದೆ. ಮಹಿಳಾ ಕಳಂಜಿಯಂ ಒಕ್ಕೂಟ ವಿವಿಧ ಬ್ಯಾಂಕ್‌ ಗಳ ಮೂಲಕ 30.86 ಕೋಟಿ ವ್ಯವಹಾರ ನಡೆಸುತ್ತಿರುವುದಾಗಿ ತಿಳಿಸಿದರು.21ನೇ ಸರ್ವ ಸದಸ್ಯರ ಸಭೆಯಲ್ಲಿ 1.09 ಕೋಟಿ ಕಳಂಜಿಯಂ ಒಕ್ಕೂಟದ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯದ ಚೆಕ್ ವಿತರಣೆ ಮಾಡಲಾಗಿದ್ದು ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಯಲಕ್ಷ್ಮಿ, ಮಹಿಳಾ ಸ್ವಾಂತನ ಕೇಂದ್ರದ ಜಯಮ್ಮ, ಬ್ಯಾಂಕ್ ಆಫ್‌ ಬರೋಡ ವ್ಯವಸ್ಥಾಪಕರಾದ ರಾಜಶೇಖರ್, ಯೂನಿಯನ್ ಬ್ಯಾಂಕ್ ವ್ಯವಸ್ಥಾಪಕರಾದ ಮನು, ರಾಮಚಂದ್ರಪ್ಪ, ಕೆನರಾ ಬ್ಯಾಂಕ್ ಶ್ರೀರಾಜ್, ಸರಕಾರಿ ಆಸ್ಪತ್ರೆಯ ರಾಜಣ್ಣ, ಇಂದಿರಾ,ಪ್ರಭಾಮಣಿ, ರಂಗಪ್ಪ, ಅಶ್ವತ್ತನಾರಾಯಣ, ಮಂಜುನಾಥ, ರಮೇಶ್ ಹಾಗೂ ಒಕ್ಕೂಟದ ನಿರ್ದೇಶಕ ಮಂಡಳಿ ಹಾಗೂ ಸಿಬ್ಬಂದಿ ಸೇರಿದಂತೆ ಸರ್ವ ಸದಸ್ಯರು ಉಪಸ್ಥಿತರಿದ್ದರು.