ಶಿಗ್ಗಾಂವಿ ಕ್ಷೇತ್ರಕ್ಕೆ ನಾನು ಮಂಜೂರು ಮಾಡಿದ್ದ ₹300 ಕೋಟಿ ವಾಪಸ್ - ಸಂಸದ ಬೊಮ್ಮಾಯಿ

| Published : Nov 10 2024, 01:59 AM IST / Updated: Nov 10 2024, 12:08 PM IST

ಶಿಗ್ಗಾಂವಿ ಕ್ಷೇತ್ರಕ್ಕೆ ನಾನು ಮಂಜೂರು ಮಾಡಿದ್ದ ₹300 ಕೋಟಿ ವಾಪಸ್ - ಸಂಸದ ಬೊಮ್ಮಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿಗ್ಗಾಂವಿ ಸವಣೂರು ಕ್ಷೇತ್ರಕ್ಕೆ ನಾನು ಮಂಜೂರು ಮಾಡಿದ್ದ ₹300 ಕೋಟಿ ಸಿಎಂ ಸಿದ್ದರಾಮಯ್ಯ ವಾಪಸ್ ಪಡೆದಿದ್ದು, ಅದನ್ನು ನಮ್ಮ ಕ್ಷೇತ್ರಕ್ಕೆ ಬಿಡುಗಡೆ ಮಾಡಿ ಇಲ್ಲಿ ಬಂದು ಮತ ಕೇಳಿ ಎಂದು ಸಂಸದ ಬಸವರಾಜ ಬೊಮ್ಮಾಯಿ ಸಿಎಂ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು.

ಹಾವೇರಿ (ಶಿಗ್ಗಾಂವಿ): ಶಿಗ್ಗಾಂವಿ ಸವಣೂರು ಕ್ಷೇತ್ರಕ್ಕೆ ನಾನು ಮಂಜೂರು ಮಾಡಿದ್ದ ₹300 ಕೋಟಿ ಸಿಎಂ ಸಿದ್ದರಾಮಯ್ಯ ವಾಪಸ್ ಪಡೆದಿದ್ದು, ಅದನ್ನು ನಮ್ಮ ಕ್ಷೇತ್ರಕ್ಕೆ ಬಿಡುಗಡೆ ಮಾಡಿ ಇಲ್ಲಿ ಬಂದು ಮತ ಕೇಳಿ ಎಂದು ಸಂಸದ ಬಸವರಾಜ ಬೊಮ್ಮಾಯಿ ಸಿಎಂ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು.

ಶಿಗ್ಗಾಂವಿ ತಾಲೂಕಿನ ದುಂಢಸಿ, ಶ್ಯಾಬಾಳ, ಕೋಣನಕೇರಿ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರವಾಗಿ ಪ್ರಚಾರ ಮಾಡಿ ಮಾತನಾಡಿದ ಅವರು, ದುಂಢಸಿ ಒಂದೇ ಊರಲ್ಲಿ 118, ಸೋಮಾಪುರ 58, ದುಂಢಸಿ ತಾಂಡಾದಲ್ಲಿ 17 ಮನೆ, ಶ್ಯಾಬಾಳದಲ್ಲಿ 80 ಮನೆ ನಿರ್ಮಾಣ ಮಾಡಿದ್ದೇನೆ. ಕ್ಷೇತ್ರದ ಪ್ರತಿ ಊರಿನಲ್ಲೂ ಐದು ಲಕ್ಷದ ಮನೆಗಳನ್ನು ನಿರ್ಮಾಣ ಮಾಡಿದ್ದೇನೆ. ದುಂಢಸಿಯಲ್ಲಿ ಹಿಂದುಗಳಷ್ಟೇ ಅಲ್ಲ, ಬಾಬಾಸಾಬ್, ಮೌಲಾಲಿ ಸಿರಬೋಳ, ಸೈಯದ್ ಸಾಬ್ ನದಾಫ್, ಫಾತಿಮಾ ಹುಲಗೂರು ಇವರಿಗೂ ಮನೆ ಕಟ್ಟಿಸಿಕೊಟ್ಟಿದ್ದೇನೆ. ವಸತಿ ಸಚಿವ ಜಮೀರ್ ಇವರ ಮನೆಗಾದರೂ ಹೋಗಿ ನೋಡಿಕೊಂಡು ಬನ್ನಿ.

 ನಾನು ಯಾವುದೇ ಜಾತಿ, ಧರ್ಮ ನೋಡದೇ ಅಭಿವೃದ್ಧಿ ಮಾಡಿದ್ದೇನೆ ಎಂದರು.ಗ್ಯಾರಂಟಿ ಯೋಜನೆ ಅಡಿ ಶಕ್ತಿ ಯೋಜನೆ ಬಂದಿದೆ. ಬಸ್‌ಗಳ ಟೈರ್ ಕೆಟ್ಟು ನಿಂತಿವೆ. ಮಂತ್ರಿಗಳು ಸಾರಿಗೆ ಇಲಾಖೆ ಲಾಭದಲ್ಲಿದೆ ಅಂತ ಹೇಳುತ್ತಾರೆ. ಮಕ್ಕಳಿಗೆ ಶಾಲಾ ಬಸ್ ಬರದೆ ವಾರಕ್ಕೆ ಮೂರು ದಿನ ಶಾಲೆ ಬಿಡುವಂತಾಗಿದೆ. ಈ ದರಿದ್ರ ಸರ್ಕಾರ ಇರುವವರೆಗೂ ಮನೆ ಸಿಗುವುದಿಲ್ಲ. ಪ್ರವಾಹಕ್ಕೆ ಪರಿಹಾರ ಸಿಗುವುದಿಲ್ಲ. ಹಾಲಿನ ದರ, ಡೀಸೆಲ್‌ ದರ, ಕರೆಂಟ್ ದರ ಹೆಚ್ಚಳ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಬೊಮ್ಮಾಯಿ ವರ್ಸಸ್ ಕಾಂಗ್ರೆಸ್ ಸರ್ಕಾರದ ಚುನಾವಣೆ: ಇದು ಈ ಚುನಾವಣೆ ಬಸವರಾಜ ಬೊಮ್ಮಾಯಿ ವರ್ಸಸ್ ಕಾಂಗ್ರೆಸ್ ಸರ್ಕಾರದ ಚುನಾವಣೆ. ಶಿಗ್ಗಾಂವಿಯಲ್ಲಿ ಬಿಜೆಪಿ ಬಂದರೆ ಈ ಸರ್ಕಾರ ಪತನವಾಗುತ್ತದೆ. ಮತ್ತೆ ಬಿಜೆಪಿ ಸರ್ಕಾರ ಬರುತ್ತದೆ. ಜಗತ್ತಿನ ಯಾವುದೇ ಶಕ್ತಿ ಬಂದರೂ ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ತಡೆಯಲು ಸಾಧ್ಯವಿಲ್ಲ. ನಾನು ಪ್ರಾಮಾಣಿಕವಾಗಿ ಅಭಿವೃದ್ಧಿ ಮಾಡಿದ್ದೇನೆ. ಕ್ಷೇತ್ರದಲ್ಲಿ ಶಾಂತಿ ಕಾಪಾಡಿದ್ದೇನೆ. ಪ್ರಧಾನಿ ಮೋದಿಯವರು ಹೇಳಿದ್ದಕ್ಕೆ ನಾನು ಸಂಸದ ಸ್ಥಾನಕ್ಕೆ ಚುನಾವಣೆಗೆ ಸ್ಪರ್ಧಿಸಿದೆ. ಈ ಉಪ ಚುನಾವಣೆಯಲ್ಲಿ ಭರತ್ ಬೊಮ್ಮಾಯಿ ಸ್ಪರ್ಧೆ ಮಾಡಿದ್ದಾರೆ ಅವರನ್ನು ಆಯ್ಕೆ ಮಾಡಿ ಕಳುಹಿಸಿ, ಇಬ್ಬರು ಶಾಸಕರಾಗಿ ಕೆಲಸ ಮಾಡುತ್ತೇವೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.