ದಸರಾದಲ್ಲಿ 3000 ಡ್ರೋನ್‌:ಗಿನ್ನೆಸ್‌ ದಾಖಲೆಗೆ ಪ್ರಯತ್ನ

| Published : Sep 24 2025, 01:00 AM IST

ದಸರಾದಲ್ಲಿ 3000 ಡ್ರೋನ್‌:ಗಿನ್ನೆಸ್‌ ದಾಖಲೆಗೆ ಪ್ರಯತ್ನ
Share this Article
  • FB
  • TW
  • Linkdin
  • Email

ಸಾರಾಂಶ

ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸೆ.28, 29, ಅ.1 ಮತ್ತು 2ರಂದು ಡ್ರೋನ್ ಪ್ರದರ್ಶನ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸೆ.28, 29, ಅ.1 ಮತ್ತು 2ರಂದು ಡ್ರೋನ್ ಪ್ರದರ್ಶನ ನಡೆಯಲಿದ್ದು, ಇದಕ್ಕಾಗಿ ಈ ಬಾರಿ 3,000 ಡ್ರೋನ್ ಬಳಸಿಕೊಳ್ಳಲಾಗುತ್ತಿದೆ. ಆ ಮೂಲಕ ಗಿನ್ನಿಸ್ ರೆಕಾರ್ಡ್‌ ಗೆ ಸೇರಲು ಸಿದ್ಧತೆ ನಡೆದಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ನಗರದ ಸಯ್ಯಾಜಿರಾವ್ ರಸ್ತೆಯಲ್ಲಿರುವ ಹಸಿರು ಚಪ್ಪರದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ದಸರಾ ವಿದ್ಯುತ್ ದೀಪಾಲಂಕಾರಕ್ಕೆ ವಿದ್ಯುಕ್ತ ಚಾಲನೆ ನೀಡಿ ಅವರು ಮಾತನಾಡಿದರು. ದಸರಾ ಮಹೋತ್ಸವದಲ್ಲಿ ಡ್ರೋನ್ ಪ್ರದರ್ಶನ ಹೊಸ ಆಕರ್ಷಣೆಯಾಗಿದೆ. ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸೆ.28, 29, ಅ.1 ಮತ್ತು 2ರಂದು ಡ್ರೋನ್ ಪ್ರದರ್ಶನ ನಡೆಯಲಿದೆ. ಕಳೆದ ಬಾರಿ 1,500 ಡ್ರೋನ್ ಬಳಸಿಕೊಂಡು ಪ್ರದರ್ಶನ ನಡೆಸಲಾಗಿತ್ತು. ಈ ಬಾರಿಯ ಪ್ರದರ್ಶನದಲ್ಲಿ 3,000 ಡ್ರೋನ್ ಬಳಸಿಕೊಳ್ಳಲಾಗುವುದು. ಆ ಮೂಲಕ ಗಿನ್ನಿಸ್ ರೆಕಾರ್ಡ್‌ಗೆ ಸೇರಲು ಸಿದ್ಧತೆ ನಡೆದಿದೆ ಎಂದು ತಿಳಿಸಿದರು.

136 ಕಿ.ಮೀ. ದೀಪಾಲಂಕಾರ:

ದಸರಾ ದೀಪಾಲಂಕಾರದ ಆಕರ್ಷಣೆ ಹೆಚ್ಚಿಸುವ ನಿಟ್ಟಿನಲ್ಲಿ ಈ ಬಾರಿ ಕೊಲ್ಕತ್ತಾ ಮಾದರಿಯ ಲೈಟಿಂಗ್ ಅಳವಡಿಸಲಾಗಿದೆ. ಈ ಬಾರಿ ನಗರದ 136 ಕಿ.ಮೀ. ವ್ಯಾಪ್ತಿಯ ರಸ್ತೆಗಳು ಹಾಗೂ 118 ವೃತ್ತಗಳಲ್ಲಿ ದೀಪಾಲಂಕಾರ ಮಾಡಲಾಗಿದೆ. ಇದರೊಂದಿಗೆ ನಗರದ ಪ್ರಮುಖ ಕಡೆಗಳಲ್ಲಿ ಎಲ್ಇಡಿ ಬಲ್ಬ್ ಗಳಿಂದ ನಿರ್ಮಿಸಲಾದ 80 ವಿವಿಧ ಪ್ರತಿಕೃತಿಗಳನ್ನು ಇರಿಸಲಾಗಿದೆ. ಸೆ.22 ರಿಂದ 21 ದಿನಗಳ ಕಾಲ ವಿದ್ಯುತ್ ದೀಪಾಲಂಕಾರ ಇರಲಿದೆ. ಇದಕ್ಕಾಗಿ 300 ಕಿ.ಲೋ ವ್ಯಾಟ್ ಗಳ, 2,57,520 ಯೂನಿಟ್ ವಿದ್ಯುತ್ ಬಳಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.