ಕಂದಾಯ ಇಲಾಖೆಯ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವರಿಕೆ । ಇ-ಸ್ವತ್ತು, ಸಾರಿಗೆ, ಮೂಲಸೌಕರ್ಯಗಳ ಕುರಿತು ಜನರಿಂದ ಇಂಗಿತ
ಕನ್ನಡಪ್ರಭ ವಾರ್ತೆ ಚಾಮರಾಜನಗರಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ನೇರ ಪೋನ್ ಇನ್ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ದೂರುಗಳು ಹೆಚ್ಚಾಗಿ ದಾಖಲಾಗಿದ್ದು, ಒಟ್ಟಾರೆಯಾಗಿ 31 ದೂರು ದಾಖಲಾಗಿದೆ.ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಬೆಳಗ್ಗೆ 11 ಗಂಟೆಯಿಂದ 12ರವರಗೆ ಜಿಲ್ಲಾಧಿಕಾರಿ ಶ್ರೀರೂಪಾ ಅವರು ನಡೆಸಿದ ನೇರ ಪೋನ್ ಕಾರ್ಯಕ್ರಮದಲ್ಲಿ ಕರೆ ಮಾಡಿದ ಸಾರ್ವಜನಿಕರು ದೂರುಗಳ ಸುರಿಮಳೆಗೈದಿದ್ದಾರೆ.ಚಾಮರಾಜನಗರ ನಗರಸಭೆ ಸೇರಿದಂತೆ ಹೊಮ್ಮ, ಬೊಮ್ಮನಹಳ್ಳಿ, ಬದನಗುಪ್ಪೆ, ಸಪ್ಪಯ್ಯನಪುರ, ಅಜ್ಜಿಪುರ, ಯಣಗುಂಬ, ಹೊಂಗನೂರು, ಹನೂರು, ಕಗ್ಗಲಿಪುರ, ದಡದಹಳ್ಳಿ, ಯಳಂದೂರು ಗ್ರಾಮಗಳಲ್ಲಿ ಕಂದಾಯ ಇಲಾಖೆಯಿಂದ ಕೆಲಸಗಳು ವಿಳಂಬ, ಹಣ ವಸೂಲಿ ಮಾಡುತ್ತಿರುವುದರ ಕುರಿತು ದೂರು ದಾಖಲಾಗಿದೆ.ನಗರಸಭೆ ವ್ಯಾಪ್ತಿಯ 15ನೇ ವಾರ್ಡ್ ಹಾಗೂ 23ನೇ ವಾರ್ಡ್, 1ನೇ ವಾರ್ಡ್‌ನಲ್ಲಿ ಹಾಗೂ ಮೂಡ್ಲುಪುರ ಗ್ರಾಮದಲ್ಲಿರುವ ಬಸ್ ನಿಲ್ದಾಣದಲ್ಲಿ ರಸ್ತೆ ಹಳ್ಳಕೊಳ್ಳಗಳಿಂದ ಕೂಡಿದೆ ಸಾರ್ವಜನಿಕರು ಓಡಾಡುವುದು ಕಷ್ಠಕರವಾಗಿದೆ. ಸತ್ಯಮಂಗಲ ರಸ್ತೆಯಲ್ಲಿ ಯುಜಿಡಿ ಸಮಸ್ಯೆಯಿಂದಾಗಿ ರಸ್ತೆ ಮೇಲೆ ಯುಜಿಡಿ ನೀರು ಹರಿದಾಡುತ್ತಿದೆ ಸರಿಪಡಿಸುವಂತೆ ಸಾರ್ವಜನಿಕರು ಮನವಿ ಮಾಡಿದರು.ಯಳಂದೂರು ತಾಲೂಕಿನ ಕೆಸ್ತೂರು ರಸ್ತೆ ಹಾಗೂ ಚರಂಡಿ ಇಲ್ಲ ದೂರು ನೀಡಿದ್ದರೂ, ಪ್ರಯೋಜನವಾಗಿಲ್ಲ. ಸಿದ್ದಯ್ಯನಪುರ ಗ್ರಾಮದಲ್ಲಿ ಕಳಪೆ ಕಾಮಗಾರಿ ನಡೆಸಲಾಗಿದೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ದೂರು ದಾಖಲಿಸಿದ್ದಾರೆ.ಚಾಮರಾಜನಗರದಿಂದ ಅರಕಲವಾಡಿ-ಯರಗನಹಳ್ಳಿ ಮಾರ್ಗಕ್ಕೆ ಸಂಜೆ 5ರ ನಂತರ ಬಸ್ ವ್ಯವಸ್ಥೆ ಇಲ್ಲದೇ ತೊಂದರೆಯಾಗುತ್ತಿದೆ. ಗುಂಡ್ಲುಪೇಟೆಯಿಂದ ಬೇಗೂರು ಮಾರ್ಗದಲ್ಲಿ ಕಗ್ಗಲೂರಿನಲ್ಲಿ ಬಸ್ ನಿಲ್ಲಿಸುತ್ತಿಲ್ಲ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಹೋಗಲು ತೊಂದರೆಯಾಗುತ್ತಿದ್ದು, ಬಸ್ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.ಮುಳ್ಳೂರು ಹಾಗೂ ಸಿದ್ದಯ್ಯನಪುರ ಗ್ರಾಮದಲ್ಲಿ ವೈನ್‌ಸ್ಟೋರ್‌ಗಳಿಂದ ಮದ್ಯ ಖರೀದಿಸಿ ಕಿರಾಣಿ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.
ರೈತ ಸಂಪರ್ಕ ಕೇಂದ್ರದಲ್ಲಿ ಎಫ್‌ಐಡಿ ಇಲ್ಲ ಎಂದು ರೈತರಿಗೆ ರಸಗೊಬ್ಬರ ನೀಡಲಾಗುತ್ತಿಲ್ಲ, ಕುರಿ ಸಾವಿಗೆ ಪರಿಹಾರ ನೀಡಲು ವಿಳಂಬವಾಗಿದೆ. ಮಾಂಬಳ್ಳಿಯಲ್ಲಿ ರೇಷ್ಮೇ ಕಾರ್ಖಾನೆ ಸ್ಥಗೀತವಾಗಿದೆ ಪುನಶ್ಚೇತನಗೊಳಿಸಲು ಕಾವೇರಿ ನೀರಾವರಿ ನಿಗಮದಲ್ಲಿ ಭ್ರಷ್ಟಚಾರ ನಡೆಯುತ್ತಿದೆ ಎಂದು ದೂರಿದರು.ಹನೂರು ತಾಲೂಕಿನ ಬಂಡಳ್ಳಿ ಗ್ರಾಮದಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ವೈದ್ಯರನ್ನು ತಾಲೂಕು ವೈದ್ಯಾಧಿಕಾರಿಯಾಗಿ ನೇಮಕವಾಗಿದ್ದು ಎರಡು ಜವಾಬ್ದಾರಿ ನಿರ್ವಹಿಸುತ್ತಿರುವುದರಿಂದ ಆಸ್ಪತ್ರೆ ವ್ಯಾಪ್ತಿಯಲ್ಲಿರುವ 20 ಗ್ರಾಮದ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ. ಆದ್ದರಿಂದ ವೈದ್ಯರ ವ್ಯವಸ್ಥೆಯನ್ನು ಮಾಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜ್, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಶೃತಿ ಇದ್ದರು.
--
ಗಂಭೀರವಾಗಿ ಪರಿಗಣನೆಜಿಲ್ಲೆಯ ಕೆಲವು ಭಾಗಗಳಿಗೆ ಭೇಟಿ ನೀಡಲು ಸಾಧ್ಯವಾಗದ ಕಾರಣ ಅವರಿಗೆ ಸಮಸ್ಯೆ ಹೇಳಿಕೊಳ್ಳಲು ಅವಕಾಶ ಸಿಗಬೇಕೆಂಬ ನಿಟ್ಟಿನಲ್ಲಿ ನೇರ ಫೋನ್ ಇನ್ ಕಾರ್ಯಕ್ರಮ ಆಯೋಜಿಸಲಾಗಿತ್ತು. 31 ದೂರುಗಳು ಬಂದಿವೆ. ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಪರಿಕಾರಕ್ಕೆ ಕ್ರಮ ವಹಿಸಲಾಗುವುದು.
ಶ್ರೀರೂಪಾ ಜಿಲ್ಲಾಧಿಕಾರಿ---
23ಸಿಎಚ್‌ಎನ್51ಜಿಲ್ಲಾಧಿಕಾರಿ ಶ್ರೀರೂಪಾ ಅವರು ನೇರ ಫೋನ್ ಇನ್ ಕಾರ್ಯಕ್ರಮವನ್ನು ನಡೆಸಿದರು.