ಸಾರಾಂಶ
31 km in Wadagera. Human chain construction
-ಮಾನವ ಸರಪಳಿ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಶ್ರೀನಿವಾಸ ಚಾಪೆಲ್
------ಕನ್ನಡಪ್ರಭ ವಾರ್ತೆ ವಡಗೇರಾ
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.ವಾಲ್ಮೀಕಿ ವೃತ್ತದಲ್ಲಿ ವಿಶ್ವ ಪ್ರಜಾಪ್ರಭುತ್ವ ಹಬ್ಬದ ಪ್ರಯುಕ್ತ ಮಾನವ ಸರಪಳಿ ಕಾರ್ಯಕ್ರಮದಲ್ಲಿ ವಡಗೇರಾ ತಹಸೀಲ್ದಾರ್ ಶ್ರೀನಿವಾಸ ಚಾಪೆಲ್ ಭಾಗವಹಿಸಿದ್ದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ವಡಗೇರಾ ಕ್ರಾಸ್‌ನಿಂದ ಗೂಗಲ್ ಬ್ರಿಡ್ಜ್‌ವರೆಗೆ 31 ಕಿ.ಮೀ. ವರೆಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಒಬ್ಬರಿಗೊಬ್ಬರು ಕೈ ಕೈ ಸೇರಿಸಿ ಮಾನವ ಸರಪಳಿ ನಿರ್ಮಿಸಿದರು.ಸರ್ಕಾರ ನಿಗದಿಪಡಿಸಿದ ಸಮಯದಲ್ಲಿ ಏಕಕಾಲದಲ್ಲಿಯೇ ನಾಡಗೀತೆ ಹಾಡಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅತಿಥಿಗಳಾದ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಸಿದ್ದಣ್ಣಗೌಡ ಕಾಡಂನೋರ್, ಡಾ.ಸುಭಾಷ ಕರಣಿಗಿ, ಬಾಷುಮಿಯ ನಾಯ್ಕೋಡಿ ಅವರಿಂದ ಸಂವಿಧಾನದ ಕುರಿತು ಭಾಷಣ ಮಾಡಲಾಯಿತು. ನಂತರ ಭಾರತ ಸಂವಿಧಾನದ ಪೀಠಿಕೆಯನ್ನು ಏಕಕಾಲದಲ್ಲಿಯೇ ಪಠಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ತಾ.ಪಂ. ಇಒ ಮಲ್ಲಿಕಾರ್ಜುನ ಸಂಗ್ವಾರ, ಸುರಪುರ ತಾಪಂ ಇಒ ಬಸವರಾಜ ಸಜ್ಜನ್, ಗ್ರೇಡ್-2 ತಹಸೀಲ್ದಾರ್ ಪ್ರಕಾಶ್ ಹೊಸಮನಿ, ಬಿಇಒ ಜಾಹೀದಾ ಬೇಗಂ, ಪಿಐ ಆನಂದ್ ವಾಗ್ಮೊಡೆ, ಪಿಎಸ್ಐ ಮೈಬೂಬ್ ಅಲಿ, ಡಾ. ಜಗನ್ನಾಥ್ ರೆಡ್ಡಿ, ಸಂಜೀವಕುಮಾರ ಕಾವಲಿ, ಕಸಾಪ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಕರಿಕಳ್ಳಿ, ವಿಎ ಸಿದ್ದಣ್ಣಗೌಡ, ಪಿಡಿಒ ಶರಣಗೌಡ ಉಳ್ಳೆಸೂಗೂರು, ಉಪನ್ಯಾಸಕ ಯಲ್ಲಪ್ಪ, ಮುಖ್ಯಗುರು ಅಯ್ಯಪ್ಪ, ಮುಖ್ಯ ಶಿಕ್ಷಕಿ ಲಲಿತ ಬಾಯಿ ನಾಟೇಕಾರ, ಮಾಜಿ ಗ್ರಾಪಂ ಅಧ್ಯಕ್ಷ ಅಶೋಕ ಸಾಹು ಕರಣಿಗಿ, ಉಪಾಧ್ಯಕ್ಷೆ ರಂಗಮ್ಮ ಹುಲಿ ಇದ್ದರು.-----
16ವೈಡಿಆರ್8ವಡಗೇರಾ ತಾಲೂಕಿನ ವ್ಯಾಪ್ತಿಯಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಮಾನವ ಸರಪಳಿ ನಿರ್ಮಿಸುವ ಮೂಲಕ ಆಚರಿಸಲಾಯಿತು.