ಎಲ್ಲವೂ ಅಂದುಕೊಂಡಂತೆ ನಡೆದದ್ದೇ ಆದಲ್ಲಿ ಇನ್ನೆರಡು ವರ್ಷದಲ್ಲಿ ಕಲ್ಯಾಣ ಕರ್ನಾಟಕದ 41 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 3ರಿಂದ 4ರಂತೆ ಒಟ್ಟು 350 ಹೊಸ ಕೆಪಿಎಸ್‌ ಶಾಲೆಗಳು ಆರಂಭವಾಗಲಿದ್ದು, ಇಲ್ಲಿನ ಶಿಕ್ಷಣ ರಂಗಕ್ಕೆ ಆನೆಬಲ ದೊರೆಯುವ ನಿರೀಕ್ಷೆಗಳಿವೆ.

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ

ಎಲ್ಲವೂ ಅಂದುಕೊಂಡಂತೆ ನಡೆದದ್ದೇ ಆದಲ್ಲಿ ಇನ್ನೆರಡು ವರ್ಷದಲ್ಲಿ ಕಲ್ಯಾಣ ಕರ್ನಾಟಕದ 41 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 3ರಿಂದ 4ರಂತೆ ಒಟ್ಟು 350 ಹೊಸ ಕೆಪಿಎಸ್‌ ಶಾಲೆಗಳು ಆರಂಭವಾಗಲಿದ್ದು, ಇಲ್ಲಿನ ಶಿಕ್ಷಣ ರಂಗಕ್ಕೆ ಆನೆಬಲ ದೊರೆಯುವ ನಿರೀಕ್ಷೆಗಳಿವೆ.

ಶಿಕ್ಷಣದಲ್ಲಿ ಅಭಿವೃದ್ಧಿಯಾದರೆ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸುಲಭ ಎಂದು ಕೆಕೆಆರ್‌ಡಿಬಿ ಮಂಡಳಿ ಕಳೆದ 2 ವರ್ಷದಿಂದ ತನ್ನ ಒಟ್ಟಾರೆ ಅನುದಾನದಲ್ಲಿ ಶೇ.25ರಷ್ಟು ಹಣ ಮೀಸಲಿಟ್ಟು ಆರಂಭಿಸಿರುವ ಅಕ್ಷರ ಆವಿಷ್ಕಾರ ಯೋಜನೆ ಕ್ರಮೇಣ ಕಲ್ಯಾಣ ಭಾಗದಲ್ಲಿ ಶಿಕ್ಷಣ ಕ್ರಾಂತಿಗೆ ನಾಂದಿ ಹಾಡುತ್ತಿದೆ.

ಹಿದೆಂದಿಗಿಂತಲೂ ಈಗ ಮಂಡಳಿ ಅಧ್ಯಕ್ಷ ಡಾ। ಅಜಯ್ ಸಿಂಗ್ ನೇತ್ವದಲ್ಲಿ ಶಿಕ್ಷಣಕ್ಕೆ ಒತ್ತು ಕೊಟ್ಟಿದ್ದು ಅನುದಾನದ ಶೇ.25 ಮೀಸಲಿಟ್ಟಿದೆ. ಇದರಡಿಯಲ್ಲಿಯೇ ಕಲ್ಯಾಣದ ಸಪ್ತ ಜಿಲ್ಲೆಗಳಲ್ಲಿ ಶಿಕ್ಷಣ, ಮೂಲ ಸವಲತ್ತು, ಹೊಸ ಹಾಗೂ ಸೋರುತ್ತಿರುವ ಕೋಣೆಗಳಿಗೆ ಪರಿಹಾರ ಸೇರಿದಂತೆ ಹತ್ತು ಹಲವು ಕೆಲಸಗಳಾಗತ್ತಿವೆ. ಇದೀಗ ಕರ್ನಾಟಕ ಪಬ್ಲಿಕ್‌ ಶಾಲೆಗಳ ನಿರ್ಮಾಣ ಆಗಲಿದ್ದು, ಶಿಕ್ಷಣ ಕ್ರಾಂತಿ ಆಗಲಿದೆ. ಬರುವ 2 ವರ್ಷದಲ್ಲಿ ಕೆಕೆಆರ್‌ಡಿಬಿಯಿಂದ 200, ಶಾಲಾ ಶಿಕ್ಷಣ ಇಲಾಖೆಯಿಂದ 150 ಶಾಲೆಗಳು ಸೇರಿದಂತೆ 350 ಕೆಪಿಎಸ್‌ ಶಾಲೆಗಳು ತಲೆ ಎತ್ತಲಿವೆ.

ಕೆಪಿಎಸ್‌ ಶಾಲೆಗಳು- ಎಲ್ಲಿ, ಎಷ್ಟು?:

ಈಗಾಗಲೇ ರಾಜ್ಯದಲ್ಲಿ 240 ಕೆಪಿಎಸ್‌ ಶಾಲೆಗಳಿದ್ದು ಈ ಪೈಕಿ ಕಲ್ಯಾಣ ಭಾಗದಲ್ಲಿ ಕೇವಲ 60 ಮಾತ್ರ ಇರೋದು ಗಮನಾರ್ಹ. ಬೆಳಗಾವಿ 79, ಬೆಂಗಳೂರು 98, ಮೈಸೂರಲ್ಲಿ 70 ಶಾಲೆಗಳಿದ್ದರೆ ಕಕ ಭಾಗದಲ್ಲಿ ತುಂಬ ಕಮ್ಮಿ. ಹೀಗಾಗಿ ಶಾಲೆಗಳಿಗೆ ಬಲ ನೀಡಲೆಂದೇ ಕೆಕೆಆರ್‌ಡಿಬಿ 200 ಶಾಲೆಗಳ ನಿರ್ಮಾಣ ಯೋಜನೆಗೆ ಕೈ ಜೋಡಿಸಿದೆ. 2 ವರ್ಷದ ನಂತರ ಕಲ್ಯಾಣ ನಾಡಲ್ಲಿ ಒಟ್ಟು 410 ಕೆಪಿಎಸ್‌ ಶಾಲೆಗಳು ಕಾರ್ಯರಂಭಿಸಿದಲ್ಲಿ ಶೈಕ್ಷಣಿಕ ಕ್ರಾಂತಿಯೇ ನಡೆಯಲಿದೆ ಕೆಪಿಎಸ್‌ ಶಾಲೆಗಳ ವೈಶಿಷ್ಟ್ಯ:

- 2 ಗ್ರಾಪಂಗೆ ಒಂದರಂತೆ ಕೆಪಿಎಸ್‌ ಶಾಲೆ ನಿರ್ಮಾಣ

- ಸುಸಜ್ಜಿತ ಕೊಠಡಿ, ಪೀಠೋಪಕರಣ, ಪ್ರಯೋಗಾಲಯ

- ಎಲ್‌ಕೆಜಿಯಿಂದ ಪದವಿ ಪೂರ್ವ ಹಂತದವರೆಗೂ ಒಂದೇ ಸೂರಿನಡಿ ಅಭ್ಯಾಸ

- ತರಬೇತಿ ಪಡೆದ ಸಿಬ್ಬಂದಿ ನೇಮಕ

- ಬಸ್‌ ವ್ಯವಸ್ಥೆ , ಮೈದಾನ, ದೈಹಿಕ ಶಿಕ್ಷಕರು

ಕೋಟ್‌..))))

ಶಿಕ್ಷಣಕ್ಕೆ ಆದ್ಯತೆ ಕೊಡಲೆಂದೇ ಕೆಕೆಆರ್‌ಡಿಬಿ ಶಿಕ್ಷಣ ವರ್ಷವೆಂದು ಘೋಷಿಸಿ ಅಕ್ಷರ ಅವಿಷ್ಕಾರ ಯೋಜನೆಯಡಿ ಶೇ. 25 ರಷ್ಟು ಅನುದಾನ ಮೀಸಲಿಟ್ಟು ಕೆಲಸ ಮಾಡುತ್ತಿದೆ. ಎಸ್ಸೆಸ್ಸೆಲ್ಸಿ ಫಲಿತಾಶ ಸುದಾರಣೆ, ಮಕ್ಕಳಿಗೆ ಸಮಗ್ರ ಗುಣಮಟ್ಟದ ಶಿಕ್ಷಣ ನಮ್ಮ ಆದ್ಯತೆ. ಶಾಲೆಗಳಲ್ಲಿ ಮೂಲ ಸವಲತ್ತು ಸೃಷ್ಟಿ ಮಾಡಲಾಗುತ್ತಿದೆ. 2 ವರ್ಷಗಳಲ್ಲಿ 350 ಕೆಪಿಎಸ್‌ ಶಾಲೆಗಳು ಕಲ್ಯಾಣ ನಾಡಿನ 7 ಜಿಲ್ಲೆಗಳ 41 ತಾಲೂಕುಗಳಲ್ಲಿ ಕೆಲಸ ಶುರು ಮಾಡಿದಲ್ಲಿ ಈ ಭಾಗದಲ್ಲಿ ಶಿಕ್ಷಣ ಕ್ರಾಂತಿಯೇ ನಡೆಯಲಿದೆ.

-ಡಾ। ಅಜಯ್‌ ಧರ್ಮಸಿಂಗ್‌, ಅಧ್ಯಕ್ಷರು, ಕೆಕೆಆರ್‌ಡಿಬಿ, ಕಲಬುರಗಿ.----

ಶಿಕ್ಷಣಕ್ಕೆ ಕೆಕೆಆರ್‌ಡಿಬಿ ಕೊಡುಗೆ:

- ಒಟ್ಟು ಅನುದಾನದ ಶೇ. 25 ಶಿಕ್ಷಣಕ್ಕೆ ವೆಚ್ಚ ನಿರ್ಧಾರ

- ಅಕ್ಷರ ಅವಿಷ್ಕಾರ ಯೋಜನೆ ಅನುಷ್ಠಾನ

- ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಒತ್ತು, ಕಲಿಕಾಸರೆ ಪುಸ್ತಕ ವಿತರಣೆ

- ತಾಲುಕುವಾರು 25 ಲಕ್ಷ ರು ಅನುದಾನ ನೀಡಿ ಫಲಿತಾಂಶ ಸುಧಾರಣೆಗೆ ವಿನೂತನ ಯೋಜನೆ

- ಶಿಕ್ಷಣ ತಜ್ಞರ ಕಮೀಟಿ ರಚಿಸಿ ಶಿಕ್ಷಣ ರಂಗಕ್ಕೆ ಹೊಸತನ ನೀಡುವ ಕೆಲಸ

- ಶಾಲೆಯಿಂದ ಹೊರಗೆ ಉಳಿಯುವ ಮಕ್ಕಳ ಸಂಖ್ಯೆ ತಗ್ಗಿಸಲು ಸರ್ವ ಕ್ರಮ

- ಕಲ್ಯಾಣ ನಾಡಲ್ಲಿ 4,548 ಪ್ರಾಥಮಿಕ ಶಾಲೆಗಳು

- 7,953 ಹಿರಿಯ ಪ್ರಾಥಮಿಕ ಶಾಲೆಗಳು

- 3,625 ಹೈಸ್ಕೂಲ್‌ಗಳು

- ಒಟ್ಟು 16,125 ಶಾಲೆಗಳು.