೧೦ರಿಂದ ರಾಘವೇಂದ್ರ ಶ್ರೀಗಳ ೩೫೪ನೆಯ ಆರಾಧನಾ ಮಹೋತ್ಸವ

| Published : Aug 05 2025, 12:30 AM IST

೧೦ರಿಂದ ರಾಘವೇಂದ್ರ ಶ್ರೀಗಳ ೩೫೪ನೆಯ ಆರಾಧನಾ ಮಹೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಹರಿಹರ ನಗರದ ರಾಘವೇಂದ್ರ ಸ್ವಾಮಿ ಮಠದಲ್ಲಿ ಆ.೧೦ರಿಂದ ಆ.೧೨ ರವರೆಗೆ ಆಯೋಜಿಸಿರುವ ರಾಘವೇಂದ್ರ ಸ್ವಾಮಿಗಳ ೩೫೪ನೇ ಆರಾಧನಾ ಮಹೋತ್ಸವ ನಿಮಿತ್ತ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.

- ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ

- - -

ಹರಿಹರ: ನಗರದ ರಾಘವೇಂದ್ರ ಸ್ವಾಮಿ ಮಠದಲ್ಲಿ ಆ.೧೦ರಿಂದ ಆ.೧೨ ರವರೆಗೆ ಆಯೋಜಿಸಿರುವ ರಾಘವೇಂದ್ರ ಸ್ವಾಮಿಗಳ ೩೫೪ನೇ ಆರಾಧನಾ ಮಹೋತ್ಸವ ನಿಮಿತ್ತ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.

ಆ.೧೦ರಂದು ಬೆಳಗ್ಗೆ ೭ರಿಂದ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಬೆಳಗ್ಗೆ ೯ ಗಂಟೆಗೆ ಪ್ರವಚನ, ೧೦ಕ್ಕೆ ಭಜನೆ, ೧೧ಕ್ಕೆ ಪ್ರಹ್ಲಾದ ರಾಜರಿಗೆ ಕನಕಾಭಿಷೇಕ ಅಲಂಕಾರ, ನೈವೇದ್ಯ, ಹಸ್ತೋದಕ, ಮಧ್ಯಾಹ್ನ ೧೨ಕ್ಕೆ ಮಹಾಮಂಗಳಾರತಿ, ಸಂಜೆ ೬ ಗಂಟೆಗೆ ಗುರು ಸಾರ್ವಭೌಮ ದಾಸಾ ಸಾಹಿತ್ಯ ಪ್ರಾಜೆಕ್ಟ್ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಆ.೧೧ರಂದು ಬೆಳಗ್ಗೆ ೮ ಗಂಟೆಗೆ ಮಠದ ಪ್ರಾಂಗಣದಲ್ಲಿ ಫಲ, ಪುಷ್ಪಗಳ ಮೆರವಣಿಗೆ ಹಾಗೂ ಗುರುಗಳಿಗೆ ಫಲ-ಪಂಚಾಮೃತ ಅಭಿಷೇಕ, ೧೦ಕ್ಕೆ ರಾಯರ ತುಲಾಭಾರ, ೧೧.೩೦ಕ್ಕೆ ಪಲ್ಲಕ್ಕಿ ಉತ್ಸವ, ಬೆಳ್ಳಿ ರಥೋತ್ಸವ, ಸಂಜೆ ೬ಕ್ಕೆ ಸಂಗೀತ ಕಾರ್ಯಕ್ರಮ, ಸಭಾಭವನದಲ್ಲಿ ವಿಶೇಷ ದೀಪ ಅಲಂಕಾರ ಸೇವೆ ನಡೆಯಲಿದೆ.

ಆ.೧೨ರಂದು ಉತ್ತರಾಧನೆ ನಿಮಿತ್ತ ಬೆಳಗ್ಗೆ ೯.೩೦ ಗಂಟೆಗೆ ಸತ್ಯನಾರಾಯಣ ಸ್ವಾಮಿ ಪೂಜೆ, ೧೦ಕ್ಕೆ ಪಲ್ಲಕ್ಕಿ ಉತ್ಸವ, ಮಧ್ಯಾಹ್ನ ೧೨ ಗಂಟೆಗೆ ಮಹಾರಥೋತ್ಸವ, ಮಧ್ಯಾಹ್ನ ೧ ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿತರಣೆ ರಾತ್ರಿ ೮.೩೦ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ. ಭಕ್ತರು ಭಾಗವಹಿಸಲು ರಾಘವೇಂದ್ರ ಸ್ವಾಮಿ ವೃಂದಾವನ ಟ್ರಸ್ಟ್ ಅಧ್ಯಕ್ಷ ಎ.ಬಿ. ಬಸವರಾಜ್, ಕಾರ್ಯದರ್ಶಿ ಸುಕುಮಾರ್ ಕೋರಿದ್ದಾರೆ.

- - -

-04HRR01.ಜೆಪಿಜಿ: ಹರಿಹರದ ರಾಘವೇಂದ್ರ ಸ್ವಾಮಿ ಮಠ.