ಛತ್ರಪತಿ ಶಿವಾಜಿ ಮಹರಾಜರ 394 ನೇ ಜಯಂತ್ಯೋತ್ಸವ

| Published : Feb 27 2024, 01:31 AM IST

ಸಾರಾಂಶ

ಮಾನ್ವಿ ಪಟ್ಟಣದ ಧ್ಯಾನ ಮಂದಿರದಲ್ಲಿ ಛತ್ರಪತಿ ಶಿವಾಜಿ ಯುವಸೇನೆ ವತಿಯಿಂದ ನಡೆದ ಛತ್ರಪತಿ ಶಿವಾಜಿ ಮಹರಾಜರ 394ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮಾನ್ವಿ: ಪಟ್ಟಣದ ಧ್ಯಾನ ಮಂದಿರದಲ್ಲಿ ಛತ್ರಪತಿ ಶಿವಾಜಿ ಯುವಸೇನೆ ವತಿಯಿಂದ ನಡೆದ ಛತ್ರಪತಿ ಶಿವಾಜಿ ಮಹರಾಜರ 394ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸಮಾರಂಭವನ್ನು ಚೀಕಲಪರ್ವಿಯ ರುದ್ರಮುನೀಶ್ವರ ಮಠದ ಸದಾಶಿವ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿ, 16ನೇ ಶತಮಾನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ನಮ್ಮ ದೇಶದಲ್ಲಿ ಹಿಂದೂ ಧರ್ಮವನ್ನು ಸಂರಕ್ಷಿಸುವ ಸಲುವಾಗಿಯೇ ಜನಿಸಿದರೆ. ಪ್ರತಿಯೊಬ್ಬ ತಾಯಂದಿರು ಕೂಡ ಜೀಜಾಬಾಯಿಯಂತೆ ತಮ್ಮ ಮಕ್ಕಳಲ್ಲಿ ದೇಶ ಪ್ರೇಮ ತುಂಬಿ ಶಿವಾಜಿ ಮಹರಾಜರಂತೆ ವೀರರನ್ನಾಗಿ ಬೆಳೆಸಬೇಕು ಎಂದು ಹೇಳಿದರು.

ಬೆಂಗಳೂರಿನ ಹರಿಕಾ ಮಂಜುನಾಥ ಅವರು ನಮ್ಮ ದೇಶ ನಮ್ಮ ಧರ್ಮ ಕುರಿತು ದಿಕ್ಸೂಚಿ ಭಾಷಣ ನೀಡಿ, ಶಿವಾಜಿ ಮಹರಾಜರು ಹುಟ್ಟದೆ ಇದ್ದಲ್ಲಿ ದೇಶದಲ್ಲಿ ಹಿಂದೂಗಳ ಪರಿಸ್ಥಿತಿ ದಾರುಣವಾಗಿರುತ್ತಿತ್ತು. ತಾಯಿಯಿಂದ ಹಾಗೂ ತಮ್ಮ ಗುರುಗಳಿಂದ ಪ್ರೇರಣೆ ಪಡೆದು ಹಿಂದೂ ಸ್ವಾರಾಜ್ಯವನ್ನು ನಿರ್ಮಾಣಮಾಡಿದ ಕೀರ್ತಿ ಶಿವಾಜಿ ಮಹರಾಜರಿಗೆ ಸಲ್ಲುತ್ತದೆ ಎಂದರು.

ಇದಕ್ಕುಮುನ್ನ ಪಟ್ಟಣದ ಟಿಎಪಿಎಂಸಿ ಬಯಲು ಅವರಣದಿಂದ ಧ್ಯಾನ ಮಂದಿರದವರೆಗೆ ಶಿವಾಜಿ ಮಹರಾಜರ ಮೂರ್ತಿಯ ಭವ್ಯ ಮೆರವಣಿಗೆಯಲ್ಲಿ ಸಾವಿರಾರು ಯುವಕರು ಭಾಗವಹಿಸಿದರು.

ಈ ವೇಳೆ ಕಲ್ಮಠ ವಿರೂಪಾಕ್ಷಿ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಗಳು, ಸುವರ್ಣಗಿರಿ ಮಠದ ಶಂಕ್ರಯ್ಯಸ್ವಾಮಿಗಳು, ಕಲ್ಲಪ್ಪ ಶಿರಕೋಳ, ಛತ್ರಪತಿ ಶಿವಾಜಿ ಯುವಸೇನೆ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಸೇರಿ ಹಲವಾರು ಜನರು ಭಾಗವಹಿಸಿದ್ದರು.