ದೇಶದ ಪ್ರತಿಯೊಬ್ಬರ ತಲೆ ಮೇಲೆ 4.68 ಲಕ್ಷ ಸಾಲ: ಶಿವಲಿಂಗೇಗೌಡ

| Published : Mar 19 2025, 11:45 PM IST

ದೇಶದ ಪ್ರತಿಯೊಬ್ಬರ ತಲೆ ಮೇಲೆ 4.68 ಲಕ್ಷ ಸಾಲ: ಶಿವಲಿಂಗೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರ ದೇಶದ ಜನಸಂಖ್ಯೆಯ ಪ್ರತಿಯೊಬ್ಬರ ತಲೆ ಮೇಲೆ 4.68 ಲಕ್ಷ ರು. ಸಾಲ ಮಾಡಿದೆ. ಮುಂದೆ ಹುಟ್ಟುವ ಮಗುವಿನ ಮೇಲೆಯೂ ಸಾಲ ಮಾಡಿದೆ. ಇವರಿಗೆ ರಾಜ್ಯ ಸರ್ಕಾರದ ಸಾಲದ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಕಾಂಗ್ರೆಸ್‌ ಸದಸ್ಯ ಕೆ.ಎಂ.ಶಿವಲಿಂಗೇಗೌಡ ಪ್ರಶ್ನಿಸಿದ್ದಾರೆ

ಕನ್ನಡಪ್ರಭ ವಾರ್ತೆ ವಿಧಾನಸಭೆ

ಕೇಂದ್ರ ಸರ್ಕಾರ ದೇಶದ ಜನಸಂಖ್ಯೆಯ ಪ್ರತಿಯೊಬ್ಬರ ತಲೆ ಮೇಲೆ 4.68 ಲಕ್ಷ ರು. ಸಾಲ ಮಾಡಿದೆ. ಮುಂದೆ ಹುಟ್ಟುವ ಮಗುವಿನ ಮೇಲೆಯೂ ಸಾಲ ಮಾಡಿದೆ. ಇವರಿಗೆ ರಾಜ್ಯ ಸರ್ಕಾರದ ಸಾಲದ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಕಾಂಗ್ರೆಸ್‌ ಸದಸ್ಯ ಕೆ.ಎಂ.ಶಿವಲಿಂಗೇಗೌಡ ಪ್ರಶ್ನಿಸಿದ್ದಾರೆ.

ಬಜೆಟ್ ಮೇಲಿನ ಚರ್ಚೆ ವೇಳೇ ಮಾತನಾಡಿ, ಕೇಂದ್ರ ಸರ್ಕಾರ ತನ್ನ ಜಿಡಿಪಿಯ ಶೇ.53 ರಷ್ಟು ಸಾಲ ಮಾಡಿದೆ. ರಾಜ್ಯ ಸರ್ಕಾರ ವಿತ್ತೀಯ ಹೊಣೆಗಾರಿಕೆ ನೀತಿಯಡಿ ಶೇ.25ಕ್ಕಿಂತ ಕಡಿಮೆ ಸಾಲ ಮಾಡಿದೆ. ಹೀಗಿದ್ದರೂ ರಾಜ್ಯ ಸರ್ಕಾರ ಸಾಲ ಮಾಡಿದೆ ಎಂದು ಬೊಬ್ಬೆ ಹೊಡೆಯುವ ಬಿಜೆಪಿಯವರಿಗೆ ನೈತಿಕತೆ ಬೇಡವೇ? ರಾಜ್ಯ ದಿವಾಳಿ ಎದ್ದು ಹೋಗಿದೆ ಎನ್ನುವ ಬಿಜೆಪಿಯವರು ಅದಕ್ಕೆ ತಾವೇ ಹೊಣೆ ಎಂಬುದನ್ನು ಮರೆಯಬಾರದು ಎಂದರು.

ರಾಜ್ಯದಿಂದ ಕೇಂದ್ರವು 4.5 ಲಕ್ಷ ಕೋಟಿ ರು. ತೆರಿಗೆ ಸಂಗ್ರಹಿಸುತ್ತದೆ. ಆದರೆ ರಾಜ್ಯಕ್ಕೆ ಕೇವಲ 51 ಸಾವಿರ ಕೋಟಿ ರು. ತೆರಿಗೆ ಪಾಲು ನೀಡುತ್ತದೆ. ಅನುದಾನಗಳ ಮಾರ್ಗದಲ್ಲಿ 16 ಸಾವಿರ ಕೋಟಿ ರು. ನೀಡುತ್ತದೆ. ರಾಜ್ಯದ ಪಾಲು ಶೇ. 4.72 ಇದ್ದದ್ದು, 3.62 ಕ್ಕೆ ಇಳಿಸಲಾಗಿದೆ. ರಾಜ್ಯಕ್ಕೆ ಪಾಲು ನೀಡುವುದನ್ನು ತಪ್ಪಿಸಲು ಸೆಸ್‌ ಹಾಗೂ ಸರ್‌ಚಾರ್ಜ್‌ ಹೆಚ್ಚಳ ಮಾಡಲಾಗಿದೆ. ಕೇಂದ್ರದ ಈ ಅನ್ಯಾಯಗಳಿಂದಲೇ ರಾಜ್ಯದಲ್ಲಿ ಖೋತಾ ಬಜೆಟ್‌ ಮಂಡಿಸುವಂತಾಗಿದೆ ಎಂದು ಟೀಕಿಸಿದರು.

--

ಸಿಎಂ ಯಾಕೆ ಜಿಎಸ್‌ಟಿ ಕೌನ್ಸಿಲ್‌ಗೆ

ಹೋಗಲ್ಲ?: ಬಿಜೆಪಿ ಸದಸ್ಯ ಕಿಡಿ

ಜಿಎಸ್‌ಟಿ ತೆರಿಗೆ ಪಾಲಿನಲ್ಲಿ ಅನ್ಯಾಯವಾಗಿದೆ ಎನ್ನುತ್ತೀರಿ. ಮುಖ್ಯಮಂತ್ರಿಗಳು ಯಾಕೆ ಜಿಎಸ್‌ಟಿ ಕೌನ್ಸಿಲ್‌ಗೆ ಹೋಗಲ್ಲ? ಅವರ ಬದಲಿಗೆ ಕೃಷ್ಣಬೈರೇಗೌಡ ಅವರನ್ನು ಕಳುಹಿಸುತ್ತಾರೆ. ಜಿಎಸ್‌ಟಿ ಕೌನ್ಸಿಲ್‌ಗೆ ಹೋಗುವುದಿಲ್ಲ ಎಂದಾದರೆ ಹಣಕಾಸು ಖಾತೆ ಬಿಟ್ಟುಕೊಡಲಿ ಎಂದು ಬಿಜೆಪಿ ಸದಸ್ಯ ಡಾ.ಸಿ.ಎನ್‌. ಅಶ್ವತ್ಥನಾರಾಯಣ್‌ ಆಗ್ರಹಿಸಿದರು.