ಕನ್ನಡಪ್ರಭ ವಾರ್ತೆ ವಿಜಯಪುರ
ಕೇಂದ್ರ ಜಾರಿಗೆ ತಂದಿರುವ 4 ಕರಾಳ ಕಾರ್ಮಿಕ ಸಂಹಿತೆ (ಲೇಬರ್ ಕೋಡ್) ಹಿಂಪಡೆಯುವಂತೆ ಆಗ್ರಹಿಸಿ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನೆಡಸಿ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಸಿ.ಐ.ಟಿ.ಯು ಮತ್ತು ಜೆ.ಸಿ.ಟಿ.ಯು ಜಿಲ್ಲಾ ಸಂಚಾಲಕ ಲಕ್ಷ್ಮಣ ಹಂದ್ರಾಳ ಮಾತನಾಡಿ, ಕೇಂದ್ರ ಸರ್ಕಾರದ ಕಡು ದುಡಿಯುವ ವರ್ಗದ ವಿರೋಧಿ 4 ಕರಾಳ ಕಾರ್ಮಿಕ ಸಂಹಿತೆ (ಲೇಬರ್ ಕೋಡ್) ಗಳ ವಿರುದ್ಧ ಮತ್ತು ದುಡಿಯುವ ಜನರು ಸೇರಿದಂತೆ ಎಲ್ಲಾ ಜನರ ಹಕ್ಕುಗಳು ಮತ್ತು ಬದುಕಿನ ಮೇಲೆ ನಡೆಸುತ್ತಿರುವ ದೌರ್ಜನ್ಯವಾಗಿದೆ. ಇದು ಅತ್ಯಂತ ನಿರ್ದಯವಾದ ಸರ್ವಾಂಗೀಣ ದಾಳಿಯ ಮಾಡುತ್ತಿರುವ ಸರ್ಕಾರಗಳ ವಿರುದ್ಧ ಪ್ರಬಲವಾದಂತಹ ಹೋರಾಟ ಕಟ್ಟುವ ಅವಶ್ಯಕತೆ ಇದೆ ಎಂದರು.
ಎ.ಐ.ಯು.ಟಿ.ಯು.ಸಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ.ಎಚ್.ಟಿ ಮಾತನಾಡಿ, 1991 ರಿಂದ ಇಲ್ಲಿಯ ವರೆಗೆ ಆಳ್ವಿಕೆ ಮಾಡುತ್ತಿರುವ ಎಲ್ಲ ಸರ್ಕಾರಗಳು ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಸಾರ್ವಜನಿಕ ಸೇವೆಗಳನ್ನು ಖಾಸಗೀಕರಿಸುತ್ತ ದೊಡ್ಡ ಕಾರ್ಪೊರೇಟ್ ಕಂಪನಿಗಳಿಗೆ ಮಾರಾಟ ಮಾಡುವುದನ್ನು ಮುಂದುವರೆಸಿರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಇದರ ಮಧ್ಯೆ ನರೇಗಾ ಯೋಜನೆಯನ್ನು ವಿಬಿ-ಜಿ-ರಾಮ್ ಎಂದು ಬದಲಿಸಿ ಉದ್ಯೋಗ ಖಾತ್ರಿಯ ಹಕ್ಕನ್ನೇ ಕಸಿದುಕೊಂಡು, ಹಳ್ಳಿಯ ಬಡ ಜನರ ಆಸರೆಯನ್ನು ಕಿತ್ತುಕೊಂಡಿದೆ. ವಿದ್ಯುತ್ ತಿದ್ದುಪಡಿ ಮಸೂದೆ- 2025ನ್ನು ಕಾಯ್ದೆ ಮಾಡಿ, ವಿದ್ಯುತ್ ಸರಬರಾಜು ಖಾಸಗೀಕರಣಗೊಳಿಸಲು ಮುಂದಾಗಿರುವುದನ್ನು ಖಂಡಿಸಿದರು.ಎಸ್.ಕೆ.ಎಂ ಮುಖಂಡ ಮತ್ತು ಎ.ಐ.ಕೆ.ಕೆ.ಎಂ.ಎಸ್ ರೈತ ಸಂಘಟನೆಯ ರಾಜ್ಯ ಕಾರ್ಯದರ್ಶಿ ಭಗವಾನ ರೆಡ್ಡಿ, ಸಿ.ಐ.ಟಿ.ಯು ಜಿಲ್ಲಾ ಸಹ ಸಂಚಾಲಕ ಸುರೇಶ ಜೀಬಿ, ಕರ್ನಾಟಕ ರಾಜ್ಯ ರೈತದ ಯುವ ಘಟಕದ ಸಂಚಾಲಕ ಸಿದ್ದನಗೌಡ ಪಾಟೀಲ, ಸುನಂದಾ ನಾಯಕ, ಲಕ್ಷ್ಮೀ ಲಕ್ಷಟ್ಟಿ, ಅಪ್ಪಾಸಾಹೇಬ ಯರನಾಳ, ಚಂದ್ರಶೇಖರ ಲೆಂಡಿ, ಭರತಕುಮಾರ.ಎಚ್.ಟಿ, ಬೋಗೇಶ ಸೋಲಾಪುರ, ಆನಂದ ಶೆಟ್ಟಿ, ಸುವರ್ಣ ರಾಠೋಡ ಮಾತನಾಡಿದರು.
ಸುರೇಖಾ ರಜಪೂತ, ಸಾವಿತ್ರಿ ನಾಗರತ್ತಿ, ಕಾಶಿಬಾಯಿ ಜನಗೊಂಡ, ಶಶಿಕಲಾ ಮ್ಯಾಗೇರಿ, ಪರಶುರಾಮ ಬೆನಕಟ್ಟಿ, ನಿಂಗಮ್ಮ ಮಠ, ಈರಣ್ಣ ಬೆಳ್ಳುಂಡಗಿ, ಮಹಾದೇವಿ ಧರ್ಮಶೆಟ್ಟಿ, ದ್ಯಾಮಣ್ಣ ಬಿರಾದಾರ, ಮಲ್ಲಿಕಾರ್ಜುನ ಹಿರೇಮಠ, ಸುಮಂಗಲಾ ಪಡಸಲಗಿ, ರೂಪಾ ಆಲಮೇಲ, ತುಳಸಿ ಹತ್ತರಕಿಹಾಳ, ರೇಣುಕಾ ಹಡಪದ, ರಶ್ಮಿ ಗುತ್ತೆದಾರ, ಗಾಯತ್ರಿ ಜೆಡಿಮಠ, ಸತ್ಯಮ್ಮ ಹಡಪದ, ಫಾತೀಮಾ ಹಂಗರಗಿ, ಸುರೇಖಾ ವಾಗಮೋರೆ ಭಾಗವಹಿಸಿದ್ದರು.