ಚಿಕ್ಕಬಳ್ಳಾಪುರದಲ್ಲಿ 4 ನಾಟಿ ಕೋಳಿಗಳು ಅನುಮಾನಾಸ್ಪದ ಸಾವು : ಮತ್ತೆ ಹಕ್ಕಿ ಜ್ವರದ ಭೀತಿ

| N/A | Published : Mar 13 2025, 12:52 AM IST / Updated: Mar 13 2025, 10:47 AM IST

ಚಿಕ್ಕಬಳ್ಳಾಪುರದಲ್ಲಿ 4 ನಾಟಿ ಕೋಳಿಗಳು ಅನುಮಾನಾಸ್ಪದ ಸಾವು : ಮತ್ತೆ ಹಕ್ಕಿ ಜ್ವರದ ಭೀತಿ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಎಚ್. ಎಸ್. ಗಾರ್ಡನ್ ನಲ್ಲಿ ಅನುಮಾನಾಸ್ಪದವಾಗಿ ನಾಲ್ಕು ನಾಟಿ ಕೋಳಿಗಳು ಸಾವನ್ನಪ್ಪಿದ್ದು, ಚಿಕ್ಕಬಳ್ಳಾಪುರದಲ್ಲಿ ಮತ್ತೆ ಹಕ್ಕಿ ಜ್ವರದ ಭೀತಿ ಎದುರಾಗಿದೆ. ನಗರದ 21ನೇ ವಾರ್ಡ್ ನ ಎಚ್. ಎಸ್. ಗಾರ್ಡನ್ ನ ಸ್ಮಶಾನದ ಬಳಿ ವಾಸವಾಗಿರುವ ಫಾರುಕ್ ಎಂಬುವವರಿಗೆ ಸೇರಿದ  ಕೋಳಿಗಳು ಸಾವನ್ನಪ್ಪಿವೆ. 

 ಚಿಕ್ಕಬಳ್ಳಾಪುರ : ನಗರದ ಎಚ್. ಎಸ್. ಗಾರ್ಡನ್ ನಲ್ಲಿ ಅನುಮಾನಾಸ್ಪದವಾಗಿ ನಾಲ್ಕು ನಾಟಿ ಕೋಳಿಗಳು ಸಾವನ್ನಪ್ಪಿದ್ದು, ಚಿಕ್ಕಬಳ್ಳಾಪುರದಲ್ಲಿ ಮತ್ತೆ ಹಕ್ಕಿ ಜ್ವರದ ಭೀತಿ ಎದುರಾಗಿದೆ. 

ನಗರದ 21ನೇ ವಾರ್ಡ್ ನ ಎಚ್. ಎಸ್. ಗಾರ್ಡನ್ ನ ಸ್ಮಶಾನದ ಬಳಿ ವಾಸವಾಗಿರುವ ಫಾರುಕ್ ಎಂಬುವವರಿಗೆ ಸೇರಿದ ನಾಲ್ಕು ನಾಟಿ ಕೋಳಿಗಳು ಸಾವನ್ನಪ್ಪಿವೆ. ಇದರಿಂದ ಚಿಕ್ಕಬಳ್ಳಾಪುರದ ಜನತೆ ಮತ್ತು ಕೋಳಿ ಸಾಕಾಣಿಕೆದಾರರಲ್ಲಿ ಹಕ್ಕಿ ಜ್ವರದ ಭೀತಿ ಎದುರಾಗಿದೆ.

ಕಳೆದ ಫೆಬ್ರವರಿ 27ರಂದು ತಾಲೂಕಿನ ವರದಹಳ್ಳಿ ಗ್ರಾಮದಲ್ಲಿ ಸಾಕಿದ್ದ ನಾಟಿ ಕೋಳಿಗಳಲ್ಲಿ ಹಕ್ಕಿಜ್ವರ ಪತ್ತೆಯಾಗಿ ವರದಹಳ್ಳಿ ಗ್ರಾಮದಲ್ಲಿ ದ್ಯಾವಪ್ಪ ಎಂಬುವರಿಗೆ ಸೇರಿದ 28 ಕೋಳಿಗಳು ಹಾಗೂ ರತ್ನಮ್ಮ ಎಂಬುವರಿಗೆ ಸೇರಿದ 5 ಕೋಳಿಗಳು ಪ್ರಾಣಬಿಟ್ಟಿದ್ದವು. 

ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಈ ಸತ್ತ ಕೋಳಿಗಳ ಮಾದರಿಗಳನ್ನು ಪರೀಕ್ಷೆಗಾಗಿ ಬೆಂಗಳೂರಿನ ಪಶುಪಾಲನೆ ಹಾಗೂ ಜೈವಿಕ ವಿಜ್ಞಾನ ವಿಭಾಗದ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಎರಡು ಕೋಳಿಗಳಲ್ಲಿ ಹಕ್ಕಿಜ್ವರದ ಎಚ್5 ಎನ್1 ವೈರಸ್ ಪತ್ತೆಯಾಗಿರುವುದು ದೃಢಪಟ್ಟಿತ್ತು. ಜನರು ಹೆಚ್ಚಿನ ಆತಂಕಕ್ಕೆ ಒಳಗಾಗದೆ ಆರೋಗ್ಯ ಇಲಾಖೆಯ ಮಾರ್ಗಸೂಚಿ ಕ್ರಮಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದರು. ಈಗ ನಗರದ ಎಚ್. ಎಸ್. ಗಾರ್ಡನ್ ನ ಸ್ಮಶಾನದ ಬಳಿ ಕೋಳಿಗಳು ನಿಗೂಢವಾಗಿ ಸಾವನ್ನಪ್ಪಿರುವುದು ಜಿಲ್ಲೆಯ ಜನತೆಯಲ್ಲಿ ಆತಂಕ ಮೂಡಿಸಿದೆ.