ಅಕ್ರಮವಾಗಿ ದಾಸ್ತಾನು ಮಾಡಿದ್ದ 4 ಟನ್ ಪಡಿತರ ಜಪ್ತಿ

| Published : Mar 26 2025, 01:39 AM IST

ಸಾರಾಂಶ

ಮೆಳೆಕೋಟೆಯ ಸಿದ್ದರಾಮಯ್ಯ ಬೀದಿಯಲ್ಲಿ ಪಡಿತರ ಚೀಟಿ ಫಲಾನುಭವಿಗಳಿಗೆ ವಿತರಣೆ ಮಾಡುವ ಪಡಿತರವನ್ನು ಅಕ್ರಮವಾಗಿ ಸಂಗ್ರಹ ಮಾಡಿ ಬೇರೆ ಕಡೆ ಸಾಗಣೆ ಮಾಡಲು ಬೊಲೆರೋ ವಾಹನದಲ್ಲಿ ನೂರಕ್ಕೂ ಹೆಚ್ಚು ಪ್ಲಾಸ್ಟಿಕ್ ಹಾಗೂ ನ್ಯಾಯಬೆಲೆ ಅಂಗಡಿಗಳಿಗೆ ಸರಬರಾಜು ಮಾಡುವ ಸರ್ಕಾರಿ ಚೀಲಗಳಲ್ಲಿ ದಾಸ್ತಾನು ಮಾಡಿದ್ದರು.

ಕನಕಪುರ: ಅಕ್ರಮವಾಗಿ ಬೊಲೆರೋ ವಾಹನದಲ್ಲಿ ದಾಸ್ತಾನು ಮಾಡಿದ್ದ ನಾಲ್ಕು ಟನ್ ಪಡಿತರ ಅಕ್ಕಿಯನ್ನು ಆಹಾರ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಗರದ ಮೆಳೆಕೋಟೆಯ ಸಿದ್ದರಾಮಯ್ಯ ಬೀದಿಯಲ್ಲಿ ಪಡಿತರ ಚೀಟಿ ಫಲಾನುಭವಿಗಳಿಗೆ ವಿತರಣೆ ಮಾಡುವ ಪಡಿತರವನ್ನು ಅಕ್ರಮವಾಗಿ ಸಂಗ್ರಹ ಮಾಡಿ ಬೇರೆ ಕಡೆ ಸಾಗಣೆ ಮಾಡಲು ಬೊಲೆರೋ ವಾಹನದಲ್ಲಿ ನೂರಕ್ಕೂ ಹೆಚ್ಚು ಪ್ಲಾಸ್ಟಿಕ್ ಹಾಗೂ ನ್ಯಾಯಬೆಲೆ ಅಂಗಡಿಗಳಿಗೆ ಸರಬರಾಜು ಮಾಡುವ ಸರ್ಕಾರಿ ಚೀಲಗಳಲ್ಲಿ ದಾಸ್ತಾನು ಮಾಡಿದ್ದರು. ಮಾನವ ಹಕ್ಕು ಹೋರಾಟಗಾರ ಕೆ.ಆರ್. ಸುರೇಶ್ ನೀಡಿದ ಮಾಹಿತಿ ಮೇರೆಗೆ ಆಹಾರ ಇಲಾಖೆ ಅಧಿಕಾರಿ ಮನೋಹರ್ ಮತ್ತು ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಅಕ್ರಮ ದಾಸ್ತಾನು ಮಾಡಿದ್ದ ನಾಲ್ಕು ಟನ್ ಪಡಿತರ ಅಕ್ಕಿ ಮತ್ತು ಬೊಲೆರೋ ವಾಹನವನ್ನು ವಶಕ್ಕೆ ಪಡೆದು ಆಹಾರ ಇಲಾಖೆ ಅಧಿಕಾರಿ ಮನೋಹರ ನೀಡಿದ ದೂರಿನ ಮೇರೆಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿದು ಬಂದಿದೆ.