ಕುಂದಗೋಳದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿ ನೇತೃತ್ವದಲ್ಲಿ ಡಿ.13ರಂದು ಸಾಮೂಹಿಕ ವಿವಾಹ ನಡೆಯಲಿದ್ದು ಸಿಎಂ, ಡಿಸಿಎಂ ಭಾಗಿಯಾಗಲಿದ್ದಾರೆ.

ಕುಂದಗೋಳ:

ಪಟ್ಟಣದಲ್ಲಿ ಡಿ. 13ರಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿ ನೇತೃತ್ವದಲ್ಲಿ ನಡೆಯುತ್ತಿರುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಶಾಸಕರು ಪಾಲ್ಗೊಳ್ಳಲಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾಂಗ್ರೆಸ್‌ ಹಿರಿಯ ಮುಖಂಡ ಅರವಿಂದ ಕಟಗಿ, ಅಂದು ಪ್ರವಾಸಿ ಮಂದಿರದ ಹತ್ತಿರದ ಖಾಸಗಿ ಜಮೀನಿನಲ್ಲಿ ಸಾಮೂಹಿಕ ವಿವಾಹ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ, ಸಭಾಧ್ಯಕ್ಷ ಯು.ಟಿ. ಖಾದರ್, ಸಚಿವರಾದ ಜಮೀರ ಅಹ್ಮದ್‌ ಖಾನ್‌, ಸಂತೋಷ ಲಾಡ್, ಶಾಸಕ ಎಂ.ಅರ್. ಪಾಟೀಲ ಸರಿದಂತೆ ಹಲವರು ಪಾಲ್ಗೊಳ್ಳುವರು. ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿ ಅಧ್ಯಕ್ಷತೆ ವಹಿಸಲಿದ್ದು 20 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದ ಯಶಸ್ಸಿಗೆ ಬೇಕಾದ ಎಲ್ಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದರು.

​ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿ ಮಾತನಾಡಿ, ಎಲ್ಲ ಸಮಾಜ ಬಾಂಧವರ ಸಲಹೆ-ಸೂಚನೆ ಪಡೆದು ಈ ಕಾರ್ಯಕ್ರಮ ಕೈಗೊಳ್ಳಲಾಗಿದೆ ಎಂದರು.

ಈ ವೇಳೆ ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ಸತೀಶ ಕೊಬ್ಬಯ್ಯನವರ, ಶಾದಿ ಕಮಿಟಿ ಅಧ್ಯಕ್ಷ ಜಾಫರ ಕ್ಯಾಲಕೊಂಡ, ಅಂಜುಮನ್ ಕಮಿಟಿ ಅಧ್ಯಕ್ಷ ಕಹಿಂ ನಾಲಬಂದ, ಸಲೀಂ ಕ್ಯಾಲಕೊಂಡ, ಎನ್.ಎಫ್. ನದಾಫ, ರಾಯಸಾಬ್‌ ಕಳ್ಳಿಮನಿ, ಜಾಫರಸಾಬ್‌ ಕ್ಯಾಲಕೊಂಡ, ಬಾಬುಸಾಬ್‌ ಹಾಜೇಸಾಬನವರ, ಬಾಬಾಜಾನ ಮುಲ್ಲಾ, ಶೌಕತಲಿ ಮುಲ್ಲಾ, ಹುಸೇನ್ ಹುಬ್ಬಳ್ಳಿ, ಈರಪ್ಪ ರಾಟಿ, ಸಲೀಂ ಕಡ್ಲಿ, ಗುರು ಚಲವಾದಿ ಸೇರಿದಂತೆ ಹಲವರಿದ್ದರು.