ಕೆಲವೇ ದಿನಗಳಲ್ಲಿ ಸುಮಾರು 600 ಕೋಟಿಗೂ ಹೆಚ್ಚು ಅನುದಾನದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರೆವೇರಿಸಲಾಗುವುದು. ಗ್ಯಾರಂಟಿ ಯೋಜನೆಗಳಿಂದ ಕುಟುಂಬ ನೆಮ್ಮದಿಯ ಜೀವನ ಮಾಡಲು ಸಾಧ್ಯವಾಗಿದೆ. ನುಡಿದಂತೆ ನಡೆದ ಸರ್ಕಾರ ಎಂಬ ಹೆಗ್ಗಳಿಕೆಗೆ ಕಾಂಗ್ರೆಸ್ ಸರ್ಕಾರ ಪಾತ್ರವಾಗಿದೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ವಿಶ್ವೇಶ್ವರಯ್ಯ ಮುಖ್ಯನಾಲೆಗೆ ಸೇರಿದ ಉಪನಾಲೆ ಮತ್ತು ಸೀಳು ನಾಲೆಗಳ ನಾಲಾ ಆಧುನೀಕರಣಕ್ಕೆ ಸರ್ಕಾರದಿಂದ 400 ಕೋಟಿ ರು. ಬಿಡುಗಡೆಯಾಗಿದೆ. ಸದ್ಯದಲ್ಲಿಯೇ ಕಾಮಗಾರಿಗೆ ಚಾಲನೆ ನೀಡಿ ನೀರಿನ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಲಾಗುವುದು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಭವರಸೆ ನೀಡಿದರು.ತಾಲೂಕಿನ ಚಿಕ್ಕಮೂಲಗೂಡು ಕೆರೆ ಸಮೀಪ ಸೇತುವೆ ಮರು ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಇಂದು 9.7 ಕೋಟಿ ರು. ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಲಾಗಿದೆ. ಕೆಲವೇ ದಿನಗಳಲ್ಲಿ ಸರ್ಕಾರದಿಂದ ವಿಶೇಷ ಅನುದಾನ ತಂದು ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.
ಜೊತೆಗೆ ೪೦೦ ಕೋಟಿ ರು.ವೆಚ್ಚದಲ್ಲಿ ಉಪನಾಲೆಗಳು ಮತ್ತು ಸೀಳು ನಾಲೆಗಳನ್ನು ಅಭಿವೃದ್ಧಿ ಪಡಿಸುವುದರ ಜೊತೆಗೆ ಜಮೀನಿಗೆ ಹೋಗುವ ರಸ್ತೆಗಳನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲಾಗುವುದು. ಕನ್ನಂಬಾಡಿ ನಿರ್ಮಾಣವಾದ ನಂತರ ರೈತರಿಗೆ ಪೂರಕವಾದ ನೀರಾವರಿ ವಿಚಾರದಲ್ಲಿ ಸಮಸ್ಯೆ ಬಗೆಹರಿಸುವ ಪ್ರಮಾಣಿಕ ಪ್ರಯತ್ನ ಮಾಡಲಾಗಿದೆ ಎಂದರು.ಸರ್ಕಾರದಿಂದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳನ್ನು ಒಪ್ಪಿಸಿತಂದ ಯೋಜನೆಗಳಾಗಿದ್ದು, ನಾಲಾ ಬಯಲಿನ ಸಮಸ್ಯೆಗಳನ್ನು ಶುದ್ಧ ಮಾಡುವುದರ ಮೂಲಕ ನೀರಾವರಿಗೆ ಮುಂದಿನ ವರ್ಷದಿಂದ ಶಾಶ್ವತ ಪರಿಹಾರ ನೀಡಲಾಗುವುದು. ಎಸ್‌ಸಿಪಿ ಟಿಎಸ್‌ಪಿ ಅನುದಾನದಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ರಸ್ತೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗಿದೆ ಎಂದರು.
ಕೆಲವೇ ದಿನಗಳಲ್ಲಿ ಸುಮಾರು 600 ಕೋಟಿಗೂ ಹೆಚ್ಚು ಅನುದಾನದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರೆವೇರಿಸಲಾಗುವುದು. ಗ್ಯಾರಂಟಿ ಯೋಜನೆಗಳಿಂದ ಕುಟುಂಬ ನೆಮ್ಮದಿಯ ಜೀವನ ಮಾಡಲು ಸಾಧ್ಯವಾಗಿದೆ. ನುಡಿದಂತೆ ನಡೆದ ಸರ್ಕಾರ ಎಂಬ ಹೆಗ್ಗಳಿಕೆಗೆ ಕಾಂಗ್ರೆಸ್ ಸರ್ಕಾರ ಪಾತ್ರವಾಗಿದೆ ಎಂದರು.ತಾಲೂಕಿನ ಸುಜ್ಜಲ್ಲೂರು ಗ್ರಾಮದಲ್ಲಿ ಸಿಎಸ್‌ಆರ್ ಅನುದಾನದಲ್ಲಿ ನವೀಕರಣಗೊಂಡ ಶಾಲಾ ಕಟ್ಟಡ, ಅಡುಗೆ ಕೋಣೆ, ಮತ್ತು ಗಣಕ ಯಂತ್ರದ ಕೊಠಡಿಗಳನ್ನು ಉದ್ಘಾಟಿಸಲಾಯಿತು. ಬೆಂಡರವಾಡಿ ಗ್ರಾಮದಲ್ಲಿ ಜಿಲ್ಲಾಪಂ ಅನಿರ್ಬಂಧಿತ ಯೋಜನೆಯಡಿ ನೂತನ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರೆವೇರಿಸಲಾಯಿತು.
ಮಿಕ್ಕೆರೆ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ನೆರೆವೇರಿಸಿದರು. ತಾಲೂಕಿನ ಚಿಕ್ಕಮೂಲಗೂಡು ಕೆರೆ ಸಮೀಪ ಸೇತುವೆ ಮರು ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಿದರು.ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ ರಾಜು, ಮನ್ಮುಲ್ ನಿರ್ದೆಶಕ ಕೃಷ್ಣೇಗೌಡ, ಆರ್. ಎನ್ ವಿಶ್ವಾಸ್, ಟಿಎಪಿಸಿಎಂಎಸ್ ನಿರ್ದೇಶಕ ಕೆ.ಜೆ ದೇವರಾಜು, ಮುಖಂಡರಾದ ಸಿದ್ದೇಗೌಡ, ಮಾರ್ಕಾಲು ಮಾಧು, ಮಹೇಶ್, ಮೊಳ್ಳೇಗೌಡ, ರಾಜಣ್ಣ, ಹನುಮಂತಯ್ಯ ಶಿವಮೂರ್ತಿ, ಮಹದೇವಸ್ವಾಮಿ, ಮಧು, ಶಿವಕುಮಾರ್, ಮಂಜು, ರಾಮಲಿಂಗಣ್ಣ, ದೊಡ್ಡಣ್ಣ, ರುದ್ರ, ಶಿವಕುಮಾರ್, ಮಹದೇವಸ್ವಾಮಿ, ಶಿವಮೂರ್ತಿ, ಸಿದ್ದೇಗೌಡ, ರಾಮಚಂದ್ರು, ಮುತ್ತುರಾಯ್, ನಾಗರಾಜು, ಸತೀಶ್, ಜಯರಾಜು ಸೇರಿದಂತೆ ಇತರರು ಇದ್ದರು.