ನಾಲ್ಕು ಜಿಲ್ಲೆಗಳಲ್ಲಿ ೪೧೭೦೦ ಪೋಡಿ ದುರಸ್ತಿ ಪ್ರಕರಣ ಬಾಕಿ: ಸಚಿವ ಕೃಷ್ಣ ಭೈರೇಗೌಡ

| Published : Jul 29 2024, 12:46 AM IST

ಸಾರಾಂಶ

ಮಂಡ್ಯ ಜಿಲ್ಲೆಯ ೩೯೮೭೭ ರೈತರಿಗೆ ೮೩೦೩೪ ಎಕರೆ, ಮೈಸೂರು ಜಿಲ್ಲೆಯ ೩೦೧೬೩ ರೈತರಿಗೆ ೧೧೩೫೯೫ ಎಕರೆ, ಚಾಮರಾಜನಗರ ಜಿಲ್ಲೆಯ ೩೪೨೬೦ ರೈತರಿಗೆ ೭೯೮೦೪ ಹಾಗೂ ಹಾಸನ ಜಿಲ್ಲೆಯ ೬೧೫೮೨ ರೈತರಿಗೆ ೧೩೬೫೬೨ ಎಕರೆ ಜಮೀನನ್ನು ಮಂಜೂರು ಮಾಡಲಾಗಿದ್ದು, ಇದರಲ್ಲಿ ಮಂಡ್ಯ ಜಿಲ್ಲೆಯಲ್ಲಿ ೧೫೯೬೬ ಪ್ರಕರಣಗಳಲ್ಲಿ ಪೋಡಿ ದುರಸ್ತಿ ಆಗಿದ್ದರೆ ೮೩೩ ಪ್ರಕರಣಗಳು ಬಾಕಿ ಉಳಿದಿವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಜಿಲ್ಲೆಗಳಲ್ಲಿರುವ ೧೬೫೮೨೨ ರೈತರಿಗೆ ೪,೧೨,೯೯೫ ಎಕರೆ ಸರ್ಕಾರಿ ಜಮೀನನ್ನು ಮಂಜೂರು ಮಾಡಲಾಗಿದ್ದು, ಈ ಪೈಕಿ ೩೭೪೬೬ ರೈತರ ೪೧೭೦೦ ಆರ್‌ಟಿಸಿಗಳನ್ನು ಪೋಡಿ ಮಾಡಬೇಕಿದೆ.

ಮಂಡ್ಯ ಜಿಲ್ಲೆಯ ೩೯೮೭೭ ರೈತರಿಗೆ ೮೩೦೩೪ ಎಕರೆ, ಮೈಸೂರು ಜಿಲ್ಲೆಯ ೩೦೧೬೩ ರೈತರಿಗೆ ೧೧೩೫೯೫ ಎಕರೆ, ಚಾಮರಾಜನಗರ ಜಿಲ್ಲೆಯ ೩೪೨೬೦ ರೈತರಿಗೆ ೭೯೮೦೪ ಹಾಗೂ ಹಾಸನ ಜಿಲ್ಲೆಯ ೬೧೫೮೨ ರೈತರಿಗೆ ೧೩೬೫೬೨ ಎಕರೆ ಜಮೀನನ್ನು ಮಂಜೂರು ಮಾಡಲಾಗಿದ್ದು, ಇದರಲ್ಲಿ ಮಂಡ್ಯ ಜಿಲ್ಲೆಯಲ್ಲಿ ೧೫೯೬೬ ಪ್ರಕರಣಗಳಲ್ಲಿ ಪೋಡಿ ದುರಸ್ತಿ ಆಗಿದ್ದರೆ ೮೩೩ ಪ್ರಕರಣಗಳು ಬಾಕಿ ಉಳಿದಿವೆ. ಮೈಸೂರು ಜಿಲ್ಲೆಯಲ್ಲಿ ೨೨೭ ಪ್ರಕರಣಗಳಲ್ಲಿ ಪೋಡಿ ದುರಸ್ತಿಯಾಗಿದ್ದು, ೩೩೫ ಪ್ರಕರಣಗಳು ಬಾಕಿ ಉಳಿದಿವೆ. ಚಾಮರಾಜನಗರ ಜಿಲ್ಲೆಯಲ್ಲಿ ಕೇವಲ ೧೯ ಪ್ರಕರಣಗಳು ಪೋಡಿ ದುರಸ್ತಿಯಾಗಿ ೪೮೯ ಪ್ರಕರಣಗಳು ವಿಲೇವಾರಿಯಾಗಬೇಕಿದೆ. ಹಾಸನ ಜಿಲ್ಲೆಯಲ್ಲಿ ೨೧೨೫೪ ಪೋಡಿ ದುರಸ್ತಿಯಾಗಿದ್ದರೆ ೪೦೦೪೩ ಪ್ರಕರಣಗಳು ಪೋಡಿ ದುರಸ್ತಿಯಾಗಬೇಕಿದೆ.

ಸರ್ಕಾರಿ ಜಮೀನನ್ನು ಹಿಡುವಳಿದಾರರಿಗೆ ಮಂಜೂರು ಮಾಡಿದ ಸಮಯದಲ್ಲೇ ಜಮೀನಿನ ವಿಸ್ತೀರ್ಣ, ಹಿಡುವಳಿದಾರರ ಹೆಸರನ್ನು ಪಹಣಿಯಲ್ಲಿ ದಾಖಲಿಸಲಾಗಿದೆ. ಆ ಸಮಯದಲ್ಲೇ ಪೋಡಿ ಮಾಡಿ ಹೊಸ ನಂಬರ್ ನೀಡುವ ಜೊತೆಗೆ ಪ್ರತ್ಯೇಕ ಆರ್‌ಟಿಸಿಗಳನ್ನು ನೀಡಿದ್ದರೆ ಈ ಸಮಸ್ಯೆಯೇ ಇರುತ್ತಿರಲಿಲ್ಲ. ಒಂದೇ ಸರ್ವೇ ನಂಬರ್‌ನಲ್ಲಿರುವ ಎಲ್ಲಾ ಹಿಡುವಳಿದಾರರಿಗೆ ಏಕಕಾಲಕ್ಕೆ ಪೋಡಿ ಮಾಡಿಕೊಡದೇ ಅರ್ಜಿ ಸಲ್ಲಿಸಿದ ಹಿಡುವಳಿದಾರರಿಗೆ ಮಾತ್ರ ಪೋಡಿ ಮಾಡಿಕೊಡಲಾಗುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಮಧು ಜಿ.ಮಾದೇಗೌಡರ ಪ್ರಶ್ನೆಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ಉತ್ತರಿಸಿದ್ದಾರೆ.

ಪ್ರಸ್ತುತ ಸರ್ಕಾರವು ಗೋಮಾಳ ಅಥವಾ ಸರ್ಕಾರಿ ಜಮೀನಿನಲ್ಲಿ ಮಂಜೂರು ಮಾಡಲ್ಪಟ್ಟಿರುವ ಎಲ್ಲಾ ಮಂಜೂರುದಾರರಿಗೆ ಏಕಕಾಲಕ್ಕೆ ಪೋಡಿ ಮಾಡಿಕೊಡುವುದನ್ನು ಕಡ್ಡಾಯವಾಗಿ ಖಾತ್ರಿಪಡಿಸುವಂತೆ ಸೂಚಿಸಲಾಗಿದೆ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಅಗತ್ಯ ಹಾಗೂ ತುರ್ತು ಸಂದರ್ಭಗಳಲ್ಲಿ ಮಾತ್ರ ಏಕವ್ಯಕ್ತಿ ಪೋಡಿ ಕೆಲಸವನ್ನು ನಿರ್ವಹಿಸುವಂತೆ ಕಟ್ಟುನಿಟ್ಟಾಗಿ ಇಲಾಖಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದರ ಜೊತೆಗೆ ಸರ್ವೇ ನಂಬರ್‌ಗಳಲ್ಲಿ ಆಕಾರ್‌ ಬಂದ್‌ನಲ್ಲಿರುವಂತೆ ಲಭ್ಯವಿರುವ ವಿಸ್ತೀರ್ಣಕ್ಕಿಂತ ಹೆಚ್ಚು ವಿಸ್ತೀರ್ಣವನ್ನು ಮಂಜೂರು ಮಾಡಿರುವುದು ಸಮಸ್ಯೆಯನ್ನು ಇನ್ನಷ್ಟು ಉಲ್ಬಣಿಸುವಂತೆ ಮಾಡಿದೆ. ದರಕಾಸ್ತು ಪೋಡಿ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ಚುರುಕುಗೊಳಿಸಿ ರೈತರಿಗೆ ಶೀಘ್ರ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸಿರುವುದಾಗಿ ಹೇಳಿದ್ದಾರೆ.

ಎಲ್ಲಾ ರೀತಿಯ ಪೋಡಿ ಪ್ರಕ್ರಿಯೆಯನ್ನು ಮೋಜಿಣಿ ತಂತ್ರಾಂಶದ ಮೂಲಕ ನಿರ್ವಹಿಸುತ್ತಿರುವಂತೆಯೇ ದರಖಾಸ್ತು ಪೋಡಿ ಪ್ರಕ್ರಿಯೆಯನ್ನೂ ಸಹ ತಂತ್ರಾಂಶದ ಮೂಲಕ ನಿರ್ವಹಿಸಿಲು ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಈ ಪ್ರಕ್ರಿಯೆಯನ್ನು ಪ್ರಾಯೋಗಿಕವಾಗಿ ಹಾಸನ ತಾಲೂಕಿನಲ್ಲಿ ನಮೂನೆ-೧ ರಿಂದ ೫ನ್ನು ಭರ್ತಿ ಮಾಡುವ ಬಗ್ಗೆ ಅಳವಡಿಸಿ ಜಾರಿಗೊಳಿಸಲಾಗಿದೆ. ಇದರಲ್ಲಿ ಗಮನಿಸಲ್ಪಡುವ ಅಂಶಗಳನ್ನು ಆಧರಿಸಿ ರಾಜ್ಯದ ಉಳಿದ ಭಾಗಗಳಿಗೂ ವಿಸ್ತರಿಸಲಾಗುವುದು. ತ್ವರಿತವಾಗಿ ದರಖಾಸ್ತು ಪೋಡಿ ಕೆಲಸ ನಿರ್ವಹಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದಿದ್ದಾರೆ.

ಮಂಡ್ಯ ಜಿಲ್ಲೆ,, ಮೈಸೂರು ಜಿಲ್ಲೆತಾಲೂಕು, ಪೋಡಿ ದುರಸ್ತಿ, ಬಾಕಿ,, ತಾಲೂಕು, ಪೋಡಿ ದುರಸ್ತಿ, ಬಾಕಿ

ಮಂಡ್ಯ, ೩೮೩೭, ೧೨೨,, ಮೈಸೂರು, ೪೭, ೮೯

ಮದ್ದೂರು, ೧೮೧೮, ೧೭೨,, ಪಿರಿಯಾಪಟ್ಟಣ, ೨೬, ೩೫

ಮಳವಳ್ಳಿ ,೯೩೦, ೧೩೬,, ಕೆ.ಆರ್.ನಗರ, ೦೩, ೧೩

ಶ್ರೀರಂಗಪಟ್ಟಣ, ೬೪೨, ೩೦,, ಹುಣಸೂರು, ೬೦, ೮೩

ನಾಗಮಂಗಲ, ೩೦೭೯, ೧೭೫,, ಹೆಗ್ಗಡದೇವನಕೋಟೆ, ೮೩, ೧೦೮

ಪಾಂಡವಪುರ, ೩೪೩೬, ೯೫,, ನಂಜನಗೂಡು, ೦೮, ೦೭

ಕೆ.ಆರ್.ನಗರ, ೨೨೨೪, ೧೦೩,, ಟಿ.ನರಸೀಪುರ, ೦೦, ೦೦

ಒಟ್ಟು, ೧೫೯೬೬, ೮೩೩,, ಒಟ್ಟು, ೨೨೭, ೩೩೫,ಹಾಸನ ಜಿಲ್ಲೆ, ಚಾಮರಾಜನಗರ ಜಿಲ್ಲೆ

ತಾಲೂಕು, ಪೋಡಿ ದುರಸ್ತಿ, ಬಾಕಿ,, ತಾಲೂಕು, ಪೋಡಿ ದುರಸ್ತಿ, ಬಾಕಿ,

ಹಾಸನ, ೧೮೬೬, ೧೧೦೬೮,, ಚಾಮರಾಜನಗರ ೧೭, ೪೪,

ಆಲೂರು, ೧೬೩೧, ೨೧೯೫,, ಗುಂಡ್ಲುಪೇಟೆ, ೦೨, ೩೬,

ಅರಕಲಗೂಡು, ೨೩೬೦, ೬೮೬,, ಯಳಂದೂರು, ೦೦, ೧೦

ಅರಸೀಕೆರೆ, ೪೭೯೮, ೬೨೭೨,, ಕೊಳ್ಳೇಗಾಲ, ೦೦, ೭೨,

ಬೇಲೂರು, ೩೯೭೭, ೪೦೨೨,, ಹನೂರು, ೦೦, ೩೨೭,

ಚನ್ನರಾಯಪಟ್ಟಣ, ೧೯೦೬, ೧೧೬೬೯,,

ಹೊಳೆನರಸೀಪುರ, ೨೯೭೧, ೩೧೧೫

ಸಕಲೇಶಪುರ, ೨೬೪೫, ೧೦೧೬,

ಒಟ್ಟು, ೨೧೨೫೪, ೪೦೦೪೩,, ಒಟ್ಟು ೧೯ ೪೮೯