ಸಾರಾಂಶ
ಸಂಡೂರು: ತಾಲ್ಲೂಕಿನ ಯಶವಂತನಗರ ಗ್ರಾಮದ ಅಭಿನವ ವಿದ್ಯಾಮಂದಿರದಲ್ಲಿ ಶನಿವಾರ ಹಾಗೂ ಭಾನುವಾರ ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಸಂಸ್ಥೆ, ಬಳ್ಳಾರಿ, ತಾಲ್ಲೂಕು ಘಟಕ ಹಾಗೂ ಅಭಿನವ ವಿದ್ಯಾಮಂದಿರದ ಸಹಯೋಗದಲ್ಲಿ ರಾಜ್ಯ ಪುರಸ್ಕಾರಕ್ಕಾಗಿ ಸ್ಕೌಟ್ ಹಾಗೂ ಗೈಡ್ಸ್ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪೂರ್ವ ಸಿದ್ಧತಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಶಿಬಿರದಲ್ಲಿ ರಾಜ್ಯ ಪುರಸ್ಕಾರಕ್ಕಾಗಿ ವಿದ್ಯಾರ್ಥಿಗಳು ಅಗತ್ಯವಾಗಿ ತಿಳಿದಿರಬೇಕಾದ ಸಮವಸ್ತ್ರ, ಸ್ಮಾಟ್ನೆಸ್, ಇತಿಹಾಸ ಮತ್ತು ಬೆಳವಣಿಗೆ, ಪ್ರತಿಜ್ಞೆ ಮತ್ತು ನಿಯಮ, ಫೋರ್ ಬಾಂಡ್ಸ್, ಪ್ರಾಥನಾ ಗೀತೆ, ಧ್ವಜ ಗೀತೆ, ರಾಷ್ಟ್ರಗೀತೆ, ಭಾರತ್ ಸ್ಕೌಟ್ ಅಂಡ್ ಗೈಡ್ ಫ್ಲಾಗ್, ವರ್ಲ್ಡ್ ಸ್ಕೌಟ್ ಫ್ಲಾಗ್, ನ್ಯಾಷನಲ್ ಫ್ಲಾಗ್, ಪ್ರಥಮ ಚಿಕಿತ್ಸೆ, ಬಿಪಿ ವ್ಯಾಯಾಮ, ಓವರ್ ನೈಟ್ ಕ್ಯಾಂಪ್, ಮ್ಯಾಪಿಂಗ್, ಕ್ಯಾಂಪ್ ಕ್ರಾಫ್ಟ್, ಅಂಬುಲೆನ್ಸ್ ಮ್ಯಾನ್ ಬ್ಯಾಡ್ಜ್, ರಾಜ್ಯ ಪುರಸ್ಕಾರ, ಫ್ರೊಫಿಸಿಯನ್ಸಿ ಬ್ಯಾಡ್ಜ್, ಆರು ತಿಂಗಳ ಪ್ರಾಜೆಕ್ಟ್ ಮುಂತಾದ ವಿಷಯಗಳ ಕುರಿತು ಮಾಹಿತಿ ಮತ್ತು ತರಬೇತಿ ನೀಡಲಾಯಿತು. ಶಿಬಿರದಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳ ೨೩೦ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್. ಅಕ್ಕಿ, ಅಭಿನವ ವಿದ್ಯಾಮಂದಿರದ ಅಧ್ಯಕ್ಷ ನಾಗರಾಜ, ಕಾರ್ಯದರ್ಶಿ ಜ್ಯೋತಿ, ಸ್ಕೌಟ್ ಅಂಡ್ ಗೈಡ್ಸ್ ಸಂಸ್ಥೆಯ ತಾಲ್ಲೂಕು ಘಟಕದ ಕಾರ್ಯದರ್ಶಿ ಜಿ.ಎಸ್. ಸೋಮಪ್ಪ, ತರಬೇತಿ ನಾಯಕರಾದ ನಾಗರಾಜ್, ಮಹಮ್ಮದ್ ಬಾಷ, ಸ್ಕೌಟ್ ಅಂಡ್ ಗೈಡ್ ಶಿಕ್ಷಕರಾದ ದಿವಾಕರ್, ರಾಜಶೇಖರ್, ಮೊಹಮ್ಮದ್ ಜಾವೇದ್, ಜ್ಯೋತಿ, ಸುನಿತಾ ಕುಮಾರಿ, ಪದ್ಮಾವತಿ, ಮೇರಿ, ಎ. ಮರಿಸ್ವಾಮಿ, ದೀಪಕುಮಾರಿ, ಗ್ರಾಮ ಪಂಚಾಯ್ತಿ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.