ರಾಮನಗರ: ದಿ ಭಾರತಿ ಕೋ ಆಪರೇಟಿವ್ ಸೊಸೈಟಿ 2025-26 ನೇ ಸಾಲಿಗೆ ಆಡಳಿತಾತ್ಮಕ ಖರ್ಚು ಕಳೆದು 44 ಲಕ್ಷದ 37 ಸಾವಿರ ನಿವ್ವಳ‌ ಲಾಭ ಗಳಿಸಿದೆ ಎಂದು ಸೊಸೈಟಿ ಅಧ್ಯಕ್ಷ ಕೆ‌.ಚಂದ್ರಯ್ಯ ಸಂತಸ ವ್ಯಕ್ತಪಡಿಸಿದರು

ರಾಮನಗರ: ದಿ ಭಾರತಿ ಕೋ ಆಪರೇಟಿವ್ ಸೊಸೈಟಿ 2025-26 ನೇ ಸಾಲಿಗೆ ಆಡಳಿತಾತ್ಮಕ ಖರ್ಚು ಕಳೆದು 44 ಲಕ್ಷದ 37 ಸಾವಿರ ನಿವ್ವಳ‌ ಲಾಭ ಗಳಿಸಿದೆ ಎಂದು ಸೊಸೈಟಿ ಅಧ್ಯಕ್ಷ ಕೆ‌.ಚಂದ್ರಯ್ಯ ಸಂತಸ ವ್ಯಕ್ತಪಡಿಸಿದರು.

ನಗರದದಲ್ಲಿ ದಿ ಭಾರತಿ ಕೋ‌-ಆಪರೇಟಿವ್ ಕ್ರೆಡಿಟ್ ಸೊಸೈಟಿಯ 2025-26 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಸೊಸೈಟಿಯಲ್ಲಿ 4779 ಸದಸ್ಯರಿದ್ದು, 1 ಕೋಟಿ 38 ಲಕ್ಷ ರು. ಷೇರು ಬಂಡವಾಳವಿದೆ. 18 ಕೋಟಿ 89 ಲಕ್ಷದ 67 ಸಾವಿರ ರು. ಠೇವಣಿ, 23 ಕೋಟಿ 15 ಲಕ್ಷ ದುಡಿಯುವ ಬಂಡವಾಳವಿದೆ. ಸೊಸೈಟಿಗೆ 19 ಕೋಟಿ 63 ಲಕ್ಷ 75 ಸಾವಿರ ರುಪಾಯಿ ಸಾಲ ಬರಬೇಕಿದೆ ಎಂದರು.

ಸೊಸೈಟಿಯ ನಿರ್ದೇಶಕರು, ಸಿಬ್ಬಂದಿ ವರ್ಗದವರ ಸಹಕಾರ ಸೇವಾ ಮನೋಭಾವದಿಂದ ಸೊಸೈಟಿ ಈ ವರ್ಷವೂ ಸಹ ಲಾಭದಲ್ಲಿದ್ದು, ಸಾಲಗಾರರಿಂದ ಬರಬೇಕಿರುವ ಬಡ್ಡಿ ಹಣ ಪೂರ್ತಿ ಬಂದಿದ್ದರೆ ಸದರಿ ಸಾಲಿನ ನಿವ್ವಳ ಲಾಭ ಹೆಚ್ಚಾಗುತ್ತಿತ್ತು‌. ನಮ್ಮ‌ ಸೊಸೈಟಿ ಸಾಲ ರೈತಾಪಿ ವರ್ಗದ ಸಾಲವಾಗದಿದ್ದರೂ ಸಹ ಸರ್ಕಾರದ ಸಾಲ ಬಡ್ಡಿ ಮನ್ನಾ ಅನುಕೂಲತೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸಾಲ ಮತ್ತು ಬಡ್ಡಿ ಮರುಪಾವತಿ ಮಾಡದಿರುವುದರಿಂದ ಬಡ್ಡಿ ಲಾಭಕ್ಕೆ ಕುಂಠಿತವಾಗಿದೆ ಎಂದು ಚಂದ್ರಯ್ಯ ಹೇಳಿದರು.

ಸೊಸೈಟಿ ಸಿಇಒ ಬಿ.ಎಸ್.ಸುರೇಶ್ ಮಾತನಾಡಿ, ವಾರ್ಷಿಕ ವರದಿ ಮಂಡಿಸಿ ನಿವ್ವಳ ಲಾಭವನ್ನು ರಿಸರ್ವ್ ಫಂಡ್ ಗೆ ಶೇ.25, ಸಹಕಾರ ಶಿಕ್ಷಣ ನಿಧಿಗೆ ಶೇ.2, ಸದಸ್ಯರ ಷೇರು ಡಿವಿಡೆಂಡ್ ಗೆ ಶೇ.14, ಕರಡು ಸಾಲ ಶೇ.5, ಕಟ್ಟಡ ನಿಧಿಗೆ ಶೇ.10 ವಿಲೇವಾರಿ ಮಾಡಲಾಗಿದೆ. 23 ಸದಸ್ಯರ ಮಕ್ಕಳ ವಿದ್ಯಾಭ್ಯಾಸ ಪ್ರೋತ್ಸಾಹ ಧನ, ಮರಣೋತ್ತರ ಪರಿಹಾರ ವಿತರಣೆಗೆ ಕ್ರಮ ವಹಿಸಲಾಗಿದೆ ಎಂದು ಪ್ರಗತಿಯ ಪಕ್ಷಿನೋಟ ವಿವರಿಸಿದರು.

2025-26 ನೇ ಸಾಲಿನ ಆಡಿಟ್ ವರದಿ ಮತ್ತು ಖರ್ಚು ವೆಚ್ಚಗಳಿಗೆ ಒಪ್ಪಿಗೆ ಹಾಗೂ 2026-27 ನೇ ಸಾಲಿಗೆ ಬೇಕಾಗುವ ಬಜೆಟ್ ಗೆ ಅನುಮೋದನೆ‌ ನೀಡುವಂತೆ ವಿಷಯ ಗಳನ್ನು ಮಂಡಿಸಿದರು‌. ಸದಸ್ಯರು ಸೊಸೈಟಿಯ ಪ್ರಗತಿಗೆ ಮೆಚ್ಚುಗೆ ವ್ಯಕ್ತಪಡಿಸಿ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದರು.

ಸೊಸೈಟಿ ಉಪಾಧ್ಯಕ್ಷ ಸಿ.ಸೋಮೇಗೌಡ, ನಿರ್ದೇಶಕರಾದ ಕೆ.ಪಿ.ಉಮೇಶ್, ಜಿ.ಎಲ್.ಆಂಜನೇಯ, ಎ.ಆರ್.ಚಂದ್ರಶೇಖರ್, ಸಿದ್ದರಾಜು, ನಾರಾಯಣಪ್ಪ, ಉಮಾಶಂಕರ್, ದೊರೆಸ್ವಾಮಿ, ಗಂಗಾಧರಗೌಡ, ಹೆಚ್.ಕೆ.ರುಕ್ಮಿಣಿ, ಭಾರತಿ, ಎಸ್. ಕೃಷ್ಣಪ್ಪ, ಸಿಇಒ ಬಿ‌ಎಸ್.ಸುರೇಶ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

20ಕೆಆರ್ ಎಂಎನ್ 2.ಜೆಪಿಜಿ

ರಾಮನಗರದಲ್ಲಿ ದಿ ಭಾರತಿ ಕೋ‌-ಆಪರೇಟಿವ್ ಕ್ರೆಡಿಟ್ ಸೊಸೈಟಿಯ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಅಧ್ಯಕ್ಷ ಕೆ.ಚಂದ್ರಯ್ಯ ಹಾಗೂ ನಿರ್ದೇಶಕರು ಉದ್ಘಾಟಿಸಿದರು.