ಉ.ಕರ್ನಾಟಕಕ್ಕೆ ಹರಿದುಬಂದ ಶೇ.45ರಷ್ಟು ಬಂಡವಾಳ

| Published : Feb 20 2025, 12:46 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಬೆಂಗಳೂರಿನಲ್ಲಿ ನಡೆದ ಇನ್ವೆಸ್ಟ್‌ ಕರ್ನಾಟಕ-೨೦೨೫ ಜಾಗತಿಕ ಹೂಡಿಕೆದಾರರ ಸಮಾವೇಶ ಅತ್ಯಂತ ಫಲಪ್ರದವಾಗಿದ್ದು, ಬೆಂಗಳೂರನ್ನು ಹೊರತುಪಡಿಸಿ ಉತ್ತರ ಕರ್ನಾಟಕ ಭಾಗಕ್ಕೆ ಅತೀ ಹೆಚ್ಚು ಬಂಡವಾಳ ಹೂಡಿಕೆಗೆ ಆದ್ಯತೆ ನೀಡಲಾಗಿದೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಒಟ್ಟು ₹10.27 ಲಕ್ಷ ಕೋಟಿ ಬಂಡವಾಳ ಹೂಡಿಕೆಗೆ ವಿವಿಧ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ವಿಜಯಪುರಬೆಂಗಳೂರಿನಲ್ಲಿ ನಡೆದ ಇನ್ವೆಸ್ಟ್‌ ಕರ್ನಾಟಕ-೨೦೨೫ ಜಾಗತಿಕ ಹೂಡಿಕೆದಾರರ ಸಮಾವೇಶ ಅತ್ಯಂತ ಫಲಪ್ರದವಾಗಿದ್ದು, ಬೆಂಗಳೂರನ್ನು ಹೊರತುಪಡಿಸಿ ಉತ್ತರ ಕರ್ನಾಟಕ ಭಾಗಕ್ಕೆ ಅತೀ ಹೆಚ್ಚು ಬಂಡವಾಳ ಹೂಡಿಕೆಗೆ ಆದ್ಯತೆ ನೀಡಲಾಗಿದೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಒಟ್ಟು ₹10.27 ಲಕ್ಷ ಕೋಟಿ ಬಂಡವಾಳ ಹೂಡಿಕೆಗೆ ವಿವಿಧ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ 6 ಲಕ್ಷ ಉದ್ಯೋಗ ಸೃಷ್ಟಿಯಾಗಲಿವೆ. ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗಕ್ಕೆ ಶೇ.45 ರಷ್ಟು ಬಂಡವಾಳ ಹರಿದು ಬಂದಿದೆ ಎಂದರು.

ಪ್ರಗತಿಯ ಮರು ಪರಿಕಲ್ಪನೆ, ಹಸಿರೀಕರಣ, ಸರ್ವರ ಸಹಭಾಗಿತ್ವ ಹಾಗೂ ಕ್ಷಿಪ್ರಗತಿಯ ಬದಲಾವಣೆ ಎದುರಿಸುವ ಸಾಮರ್ಥ್ಯ ಹೊಂದುವ ಮಹತ್ತರ ಉದ್ದೇಶಗಳೊಂದಿಗೆ ಐತಿಹಾಸಕ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಇನ್ವೆಸ್ಟ್‌ ಕರ್ನಾಟಕ-2025 ಯಶಸ್ವಿಯಾಗಿದೆ. ಪ್ರಪ್ರಥಮ ಬಾರಿಗೆ ಪ್ರಪಂಚದ 60ಕ್ಕೂ ಅಧಿಕ ಪರಿಣಿತರು, ಉದ್ದಿಮೆದಾರರು ಭಾಗವಹಿಸಿದ್ದರು. ಉತ್ತರ ಕರ್ನಾಟಕದಲ್ಲಿ ಬಂಡವಾಳ ಹೂಡಲು ಅನೇಕರು ಮುಂದೆ ಬಂದಿದ್ದಾರೆ. ಒಟ್ಟು ₹10.27 ಲಕ್ಷ ಕೋಟಿ ಬಂಡವಾಳ ಹೂಡಿಕೆ ಒಪ್ಪಂದವಾಗಿದ್ದು ಆರು ಲಕ್ಷ ಜನರಿಗೆ ಉದ್ಯೋಗವಕಾಶ ಸಿಗಲಿದೆ. ಅದರಲ್ಲಿ ಶೇ.75 ರಷ್ಟು ಬೆಂಗಳೂರು ಹೊರತುಪಡಿಸಿ ಮತ್ತು ಶೇ. 45 ರಷ್ಟು ಉತ್ತರ ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಯಾಗಲಿದೆ. ಕಲ್ಯಾಣ ಕರ್ನಾಟಕ ಹಾಗೂ ಮುಂಬೈ ಕರ್ನಾಟಕದ ಪಾಲಿಗೆ ಇದೊಂದು ಆಶಾದಾಯಕ ಬೆಳವಣಿಗೆ ಎಂದು ಹೇಳಿದರು.ಹೂಡಿಕೆದಾರರಿಗೆ ಅನುಕೂಲ ಕಲ್ಪಿಸಲು ಸಿಂಗಲ್ ವಿಂಡೋ ವ್ಯವಸ್ಥೆ ಮಾಡಲಾಗಿದ್ದು, ಭೂಮಿ, ವಿದ್ಯುತ್, ಪರಿಸರ ಇಲಾಖೆ ಸೇರಿದಂತೆ ಸರ್ಕಾರದ ಎಲ್ಲ ಇಲಾಖೆಗಳ ಅನುಮತಿ ಸುಲಭವಾಗುವಂತೆ ಕೈಗಾರಿಕಾ ನೀತಿ ರೂಪಿಸಲಾಗಿದೆ. 2000 ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಹೂಡಿಕೆಗೆ ಅನುಕೂಲ ಕಲ್ಪಿಸಿದ್ದೇವೆ. ಡಾ.ನಂಜುಂಡಪ್ಪ ವರದಿ ಆಧರಿಸಿ ಮೋರ್ ಬ್ಯಾಕ್‌ವರ್ಡ್ (ಹೆಚ್ಚು ಹಿಂದುಳಿದ) ತಾಲೂಕಿಗೆ ಶೇ.3 ರಷ್ಟು ಹಾಗೂ ಮೋಸ್ಟ್ ಬ್ಯಾಕ್‌ವರ್ಡ್ ಶೇ.5 ರಷ್ಟು ರಿಯಾಯಿತಿ ನೀಡುತ್ತಿದ್ದೇವೆ. ಆ ಮೂಲಕ ಉದ್ಯಮ ಸ್ನೇಹಿ ವಾತಾವರಣ ನಿರ್ಮಾಣ ಮಾಡಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ತವರು ಜಿಲ್ಲೆಗೆ ಮಹತ್ವದ ಕಾಣಿಕೆ:

ವಿಜಯಪುರದಲ್ಲಿ ಸರಿಸುಮಾರು 42 ಸಾವಿರ ಕೋಟಿ ಬಂಡವಾಳ ಹೂಡಿಕೆ ನಿರೀಕ್ಷೆ ಇದೆ. ಶೇ. 80ರಷ್ಟು ವಿಜಯಪುರದಲ್ಲಿಯೇ ಸ್ಥಳ

ಗುರುತಿಸಲಾಗಿದೆ. ಸುಜ್ಞಾನ್ ಎನರ್ಜಿ ಲಿಮಿಟೆಡ್‌ನಿಂದ 21950 ಕೋಟಿ ವೆಚ್ಚದಲ್ಲಿ 3000 ಮೆಗಾ ವ್ಯಾಟ್‌ನ ಪವನ ವಿದ್ಯುತ್ಘ ಟಕ ಸ್ಥಾಪಿಸಲಾಗುತ್ತಿದ್ದು, ಇದರಿಂದ 4200 ಜನರಿಗೆ ಉದ್ಯೋಗ ಸಿಗಲಿದೆ ಎಂದರು.

ವಿಂಗ್ಸ್ ಅಗ್ರಿಕಲ್ಟರ್ ಪ್ರೈವೆಟ್ ಲಿಮಿಟೆಡ್‌ನವರು 350 ಕೋಟಿ ವೆಚ್ಚದಲ್ಲಿ ಕಷಿ ಸಂಸ್ಕರಣೆ ಘಟಕ ಸ್ಥಾಪಿಸು ೧೦.೨೭ ಲಕ್ಷ ಕೋಟಿ ಬಂಡವಾಳದಲ್ಲಿ ಬೆಂಗಳೂರು ಹೊರತುಪಡಿಸಿ (ಬಿಹಾಂಡ್ ಬೆಂಗಳೂರು) ಇತರೇ ಜಿಲ್ಲೆಗಳಲ್ಲಿ ಶೇ.೭೫ ರಷ್ಟು ಬಂಡವಾಳ ಹೂಡಿಕೆಯಾಗಲಿದೆ. ಸುಮಾರು ೪೨ ಸಾವಿರ ಕೋಟಿ ಬಂಡವಾಳದ ಕೈಗಾರಿಕೆಗಳು ವಿಜಯಪುರ ಜಿಲ್ಲೆಯಲ್ಲಿಯೇ ಸ್ಥಾಪನೆಯಾಗಲಿವೆ. ಅದರಲ್ಲಿ ೩೪ ಸಾವಿರ ಕೋಟಿ ಬಂಡವಾಳ ಹೂಡಿಕೆಗೆ ಈಗಾಗಲೇ ಸ್ಥಳ ಕೂಡ ಗುರುತಿಸಲಾಗಿದೆ. ಇದರಿಂದ ಸುಮಾರು ೧೫ ಸಾವಿರ ಯುವಕರಿಗೆ ವಿಜಯಪುರದಲ್ಲಿ ಉದ್ಯೋಗ ದೊರೆಯಲಿದೆ. ಕೇವಲ ಟ್ರೈಲರ್‌ ಆಗಿದೆ ಎನ್ನುವ ಮೂಲಕ ಜಿಲ್ಲೆಗೆ ದೊಡ್ಡ ಹೂಡಿಕೆದಾರರನ್ನು ಕರೆತರುವ ಮುನ್ಸೂಚನೆ ನೀಡಿದರು.

ನನ್ನ ಅವಧಿಯಲ್ಲಿಯೇ ವಿಜಯಪುರ ಜಿಲ್ಲೆಯಲ್ಲಿ ಕನಿಷ್ಠ ೧ ಲಕ್ಷ ಕೋಟಿ ಬಂಡವಾಳ ಹೂಡಿಕೆ ಮಾಡುವ ಗುರಿ ಹಾಕಿಕೊಂಡಿದ್ದೇನೆ. ಜಿಲ್ಲೆಯಲ್ಲಿ ನೀರು, ಭೂಮಿ, ವಿದ್ಯುತ್ ಹಾಗೂ ಮಾನವ ಸಂಪನ್ಮೂಲ ಎಲ್ಲವೂ ಇದೆ. ಹಾಗಾಗಿ ಇಲ್ಲೇ ಹೂಡಿಕೆ ಮಾಡಲು ವಿವಿಧ ಕಂಪನಿಗಳ ಜೊತೆಗೆ ಮಾತುಕತೆ ನಡೆಸಿ ಹೆಚ್ಚಿನ ಉದ್ಯೋಗ ಸೃಷ್ಟಿ ಮಾಡುವ ಎಲ್ಲ ಪ್ರಯತ್ನಗಳು ನಡೆಯುತ್ತಿದೆ ಎಂದರು.