ಸಾರಾಂಶ
ಬ್ಯಾರೇಜ್‌ನ 10 ಗೇಟ್‌ಗಳ ಮೂಲಕ 45732 ಕ್ಯೂಸೆಕ್ ನೀರನ್ನು ಹೊಸಪೇಟೆ ತುಂಗಭದ್ರ ಡ್ಯಾಂಗೆ ಹರಿಸಲಾಗುತ್ತಿದೆ.
ಹೂವಿನಹಡಗಲಿ: ಮಲೆನಾಡು ಪ್ರದೇಶದ ವಿವಿಧೆಡೆ ಅಪಾರ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಇದರಿಂದ ತುಂಗಭದ್ರೆ ನದಿ ತುಂಬಿ ಹರಿಯುತ್ತಿದೆ.
ಕಳೆದೊಂದು ತಿಂಗಳ ಹಿಂದೆ ಸಂಪೂರ್ಣ ಬರಿದಾಗಿದ್ದ ತುಂಗಭದ್ರೆ, ಈಗ ಮೈದುಂಬಿ ಹರಿಯುತ್ತಿದೆ. ಇಲ್ಲಿನ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜ್‌ಗೆ 45,732 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಬ್ಯಾರೇಜ್‌ನ 10 ಗೇಟ್‌ಗಳ ಮೂಲಕ 45732 ಕ್ಯೂಸೆಕ್ ನೀರನ್ನು ಹೊಸಪೇಟೆ ತುಂಗಭದ್ರ ಡ್ಯಾಂಗೆ ಹರಿಸಲಾಗುತ್ತಿದೆ.ತುಂಗಭದ್ರಾ ನದಿ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ರಾಜವಾಳ ಬಳಿ ನಿರ್ಮಿಸಿರುವ ಮಾಲ್ವಿಂ ಡ್ಯಾಂಗೆ ನೀರು ತುಂಬಿಸುವ ಜಾಕ್ವೆಲ್‌ನಿಂದ 2 ದಿನಗಳಲ್ಲಿ ಮಾಲ್ವಿ ಡ್ಯಾಂಗೆ ನೀರು ಹರಿಸಲಾಗುತ್ತಿದೆ. ಜತೆಗೆ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಅಚ್ಚುಕಟ್ಟು ಪ್ರದೇಶದ ರೈತರ ಜಮೀನುಗಳಿಗೆ ನೀರುಣಿಸಲು, ಕಾಲುವೆಗಳಿಗೆ ಸೋಮವಾರದಿಂದ ಕಾಲುವೆಗಳ ಮೂಲಕ ನೀರು ಹರಿಸಲಾಗುತ್ತಿದೆ.
ಮಲೆನಾಡು ಪ್ರದೇಶದಲ್ಲಿ ಮಳೆಯಾಗುತ್ತಿದ್ದು, ತುಂಗಭದ್ರ ನದಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಸಿಂಗಟಾಲೂರು ಬ್ಯಾರೇಜ್‌ಗೆ 45732 ಕ್ಯೂಸೆಕ್ ನೀರು ಒಳ ಹರಿವು ಇದ್ದು, ಅಷ್ಟೇ ಪ್ರಮಾಣದ ನೀರನ್ನು ಬ್ಯಾರೇಜ್‌ನ 10 ಗೇಟ್ ಮೂಲಕ ಹೊರಗೆ ಹರಿಸಲಾಗುತ್ತಿದೆ ಎನ್ನುತ್ತಾರೆ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಎಇಇ ರಾಘವೇಂದ್ರ.