4ನೇ ಸೋಮವಾರ ಐತಿಹಾಸಿಕ ಕಲ್ಮೇಶ್ವರ ಜಾತ್ರೆ

| Published : Aug 15 2024, 01:52 AM IST

ಸಾರಾಂಶ

ದೇವರಹಿಪ್ಪರಗಿ: ಪಟ್ಟಣದ ಆರಾಧ್ಯ ದೈವ ಕಲ್ಮೇಶ್ವರ ದೇವರ ಜಾತ್ರಾ ಮಹೋತ್ಸವ 4ನೇ ಸೋಮವಾರ ಸಡಗರ-ಸಂಭ್ರಮದಿಂದ ನಡೆಯಲಿದೆ ಎಂದು ಕಲ್ಮೇಶ್ವರ ದೇವಸ್ಥಾನದ ಮುಖ್ಯ ಅರ್ಚಕರಾದ ಜಗದೇವಪ್ಪ ಕೋಟಿನ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆಯಲ್ಲಿ ವಿಷಯ ತಿಳಿಸಿದ ಅವರು, ಪ್ರತಿ ವರ್ಷದಂತೆ ಶ್ರಾವಣ ಮಾಸದಂದು ನಡೆಯಲಿರುವ ಐತಿಹಾಸಿಕ ಕಲ್ಮೇಶ್ವರ (ರಾಮತೀರ್ಥ) ಜಾತ್ರಾ ಮಹೋತ್ಸವ ಆ.26 ರಂದು ಕಲ್ಮೇಶ್ವರ ದೇವಸ್ಥಾನದಿಂದ ಸಕಲ ವಾದ್ಯಮೇಳಗಳೊಂದಿಗೆ ಪಲ್ಲಕ್ಕಿ ಮಹೋತ್ಸವ ರಾಮತೀರ್ಥದವರೆಗೆ ಭಕ್ತರು ಭಾಗವಹಿಸುವ ಮೂಲಕ ಅಂದು ದೇವಸ್ಥಾನದಲ್ಲಿ ರುದ್ರಾಭಿಷೇಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ದೇವರಹಿಪ್ಪರಗಿ: ಪಟ್ಟಣದ ಆರಾಧ್ಯ ದೈವ ಕಲ್ಮೇಶ್ವರ ದೇವರ ಜಾತ್ರಾ ಮಹೋತ್ಸವ 4ನೇ ಸೋಮವಾರ ಸಡಗರ-ಸಂಭ್ರಮದಿಂದ ನಡೆಯಲಿದೆ ಎಂದು ಕಲ್ಮೇಶ್ವರ ದೇವಸ್ಥಾನದ ಮುಖ್ಯ ಅರ್ಚಕರಾದ ಜಗದೇವಪ್ಪ ಕೋಟಿನ ತಿಳಿಸಿದ್ದಾರೆ.ಪತ್ರಿಕಾ ಪ್ರಕಟಣೆಯಲ್ಲಿ ವಿಷಯ ತಿಳಿಸಿದ ಅವರು, ಪ್ರತಿ ವರ್ಷದಂತೆ ಶ್ರಾವಣ ಮಾಸದಂದು ನಡೆಯಲಿರುವ ಐತಿಹಾಸಿಕ ಕಲ್ಮೇಶ್ವರ (ರಾಮತೀರ್ಥ) ಜಾತ್ರಾ ಮಹೋತ್ಸವ ಆ.26 ರಂದು ಕಲ್ಮೇಶ್ವರ ದೇವಸ್ಥಾನದಿಂದ ಸಕಲ ವಾದ್ಯಮೇಳಗಳೊಂದಿಗೆ ಪಲ್ಲಕ್ಕಿ ಮಹೋತ್ಸವ ರಾಮತೀರ್ಥದವರೆಗೆ ಭಕ್ತರು ಭಾಗವಹಿಸುವ ಮೂಲಕ ಅಂದು ದೇವಸ್ಥಾನದಲ್ಲಿ ರುದ್ರಾಭಿಷೇಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಅಂದು ರಾಮತೀರ್ಥ ಜಾತ್ರಾ ಮಹೋತ್ಸವದಲ್ಲಿ ಸುಮಾರು 7 ಗ್ರಾಮಗಳ ಪಲ್ಲಕ್ಕಿ ಉತ್ಸವ ಸಡಗರ ಸಂಭ್ರಮದಿಂದ ನಡೆಯಲಿದೆ ನಂತರ ಸಂಜೆ ಹೊತ್ತು ಮರಳಿ ಕಲ್ಮೇಶ್ವರ ದೇವಸ್ಥಾನಕ್ಕೆ ಪಾಲಕಿ ಬರುವ ಮೂಲಕ ಜಾತ್ರೆ ಸಂಪನ್ನಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.

ಐತಿಹಾಸಿಕ ಹಿನ್ನೆಲೆ ಹೊಂದಿರುವ ಕಲ್ಮೇಶ್ವರ ದೇವಸ್ಥಾನ ಶಕ್ತಿಕೇಂದ್ರವಾಗಿ ಗುರುತಿಸಿಕೊಂಡಿದೆ. ನಂಬಿದ ಭಕ್ತರ ಇಷ್ಟಾರ್ಥ ಈಡೇರಿಸುವ ಜತೆಗೆ ಸಂಕಷ್ಟದ ಸಮಯದಲ್ಲಿ ಹಲವರು ಕಲ್ಮೇಶ್ವರನಲ್ಲಿ ಹರಕೆ ಹೊತ್ತು ಒಳಿತನ್ನು ಕಂಡಿದ್ದಾರೆ. ಸಾವು-ಬದುಕಿನ ನಡುವೆ ಹೋರಾಟಡುತ್ತಿದ್ದ ಹಲವರು ಪವಾಡ ರೀತಿ ಗುಣಮುಖರಾದ ಉದಾಹರಣೆಗಳಿವೆ ಎನ್ನುತ್ತಾರೆ ಭಕ್ತರು. ಹಾಗಾಗಿ, ಪ್ರತಿವರ್ಷ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ಕಲ್ಮೇಶ್ವರನ ಕೃಪೆಗೆ ಪಾತ್ರರಾಗುತ್ತಾರೆ. ಕೋಟ್‌...

ಜಾತ್ರಾ ಕಾರ್ಯಕ್ರಮಗಳ ವಿವರ: ಜಾತ್ರಾ ಮಹೋತ್ಸವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಹಾಗೂ ಈ ಬಾರಿ ಗೆಳೆಯರ ಬಳಗದ ವತಿಯಿಂದ ಟ್ರ್ಯಾಕ್ಟರ್ ಜಗ್ಗುವ ಸ್ಪರ್ಧೆ ನಡೆಯಲಿದೆ.

-ವೀರೇಶ ಕುದುರಿ, ಯುವ ಮುಖಂಡರು.