ಸಾರಾಂಶ
ಹಿರಣ್ಯಕೇಶಿ ನದಿಯಿಂದ ಘಟಪ್ರಭಾ ನದಿಗೆ ಸುಮಾರು 16 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿರುವುದರಿಂದ ಮೂಡಲಗಿ ತಾಲೂಕಿನ ಐದು ಸೇತುವೆಗಳು (ಬ್ರೀಡ್ಜ್ ಕಂ ಬ್ಯಾರೇಜ್) ಭಾನುವಾರ ಮುಳುಗಡೆಗೊಂಡು, ಸಂಚಾರ ಸ್ಥಗಿತಗೊಂಡಿದೆ.
ಮೂಡಲಗಿ : ಹಿರಣ್ಯಕೇಶಿ ನದಿಯಿಂದ ಘಟಪ್ರಭಾ ನದಿಗೆ ಸುಮಾರು 16 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿರುವುದರಿಂದ ಮೂಡಲಗಿ ತಾಲೂಕಿನ ಐದು ಸೇತುವೆಗಳು (ಬ್ರೀಡ್ಜ್ ಕಂ ಬ್ಯಾರೇಜ್) ಭಾನುವಾರ ಮುಳುಗಡೆಗೊಂಡು, ಸಂಚಾರ ಸ್ಥಗಿತಗೊಂಡಿದೆ.
ತಾಲೂಕಿನ ವಡೇರಹಟ್ಟಿ-ಉದಗಟ್ಟಿ, ಸುಣಧೋಳಿ-ಮೂಡಲಗಿ, ಹುಣಶ್ಯಾಳ-ಕಮಲದಿನ್ನಿ, ಹುಣಶ್ಯಾಳ ಪಿವೈ-ಮುನ್ಯಾಳ, ಡವಳೇಶ್ವರ- ಮಹಾಲಿಂಗಪುರ, ಅವರಾದಿ-ನಂದಗಾವ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಬಂದ್ ಆಗಿದ್ದು, ಜನರು ಪರದಾಡುವಂತಾಗಿದೆ.
ನದಿ ತೀರದ ಗ್ರಾಮಗಳ ಜನರಲ್ಲಿ ನದಿ ದಡದಕ್ಕೆ ತೇರಳದಂತೆ ಮೂಡಲಗಿ ತಾಲೂಕು ಆಡಳಿತ ಡಂಗೂರ ಸಾರಿಸಿದೆ. ಸುಣಧೋಳಿ ಸೇತುವೆಗೆ ಮೂಡಲಗಿ ತಹಸೀಲ್ದಾರ್ ಮಹಾದೇವ ಸನಮುರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮುಜಾಂಗ್ರತೆಯಾಗಿ ಸೇತುವೆಯ ದಡದ ಎರಡು ಬದಿಯಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ.