ಅದಾನಿಯಿಂದ ವಾರ್ಷಿಕ 5 ಕೋಟಿ ರು. ಸಿಎಸ್‌ಆರ್ ನಿಧಿ: ಆಳ್ವ

| Published : Jan 29 2024, 01:33 AM IST

ಅದಾನಿಯಿಂದ ವಾರ್ಷಿಕ 5 ಕೋಟಿ ರು. ಸಿಎಸ್‌ಆರ್ ನಿಧಿ: ಆಳ್ವ
Share this Article
  • FB
  • TW
  • Linkdin
  • Email

ಸಾರಾಂಶ

ಅದಾನಿ ಒಡೆತನದ ಯುಪಿಸಿಎಲ್ ಸಂಸ್ಥೆಯು ತನ್ನ ಸಿಎಸ್‌ಆರ್ ಯೋಜನೆಯಡಿ ತೆಂಕ ಪಂಚಾಯಿತಿ ವಾಪ್ತಿಯಲ್ಲಿ 15 ಲಕ್ಷ ರು. ಮೊತ್ತದ ೩ ಅಭಿವೃದ್ಧಿ ಕಾಮಗಾರಿಗಳಿಗೆ ಅದಾನಿ ಸಮೂಹದ ಅಧ್ಯಕ್ಷ ಕಿಶೋರ್ ಆಳ್ವ ಗುದ್ದಲಿ ಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಕಾಪು

ಅದಾನಿ ಒಡೆತನದ ಯುಪಿಸಿಎಲ್ ಸಂಸ್ಥೆಯು ತನ್ನ ಸಿಎಸ್‌ಆರ್ ಯೋಜನೆಯಡಿ ತೆಂಕ ಪಂಚಾಯಿತಿ ವಾಪ್ತಿಯಲ್ಲಿ 15 ಲಕ್ಷ ರು. ಮೊತ್ತದ ೩ ಅಭಿವೃದ್ಧಿ ಕಾಮಗಾರಿಗಳಿಗೆ ಅದಾನಿ ಸಮೂಹದ ಅಧ್ಯಕ್ಷ ಕಿಶೋರ್ ಆಳ್ವ ಗುದ್ದಲಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಆಳ್ವ, ಯುಪಿಸಿಎಲ್ ಸಂಸ್ಥೆಯು ಅದಾನಿ ತೆಕ್ಕೆಗೆ ಬಂದು ೮ ವರ್ಷಗಳಾಗಿದ್ದು, ಈ ಅವಧಿಯಲ್ಲಿ ಸರಾಸರಿ ಪ್ರತಿವರ್ಷ ೫ ಕೋಟಿ ರು.ಕ್ಕಿಂತ ಹೆಚ್ಚು ಅನುದಾನವನ್ನು ಸಿಎಸ್‌ಆರ್ ಯೋಜನೆಯಡಿಯಲ್ಲಿ ವ್ಯಯಿಸಲಾಗಿದೆ. ಅದರಲ್ಲಿ ಶೇ.೪೩ರಷ್ಟು ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ, ಶೇ.16 ಶಿಕ್ಷಣಕ್ಕೆ ಮತ್ತು ಶೇ.18 ಆರೋಗ್ಯ ಕ್ಷೇತ್ರಕ್ಕೆ ವಿನಿಯೋಗಿಸಲಾಗುತ್ತಿದೆ ಎಂದರು.

ತೆಂಕ ಗ್ರಾ.ಪಂ. ವ್ಯಾಪ್ತಿಯಲ್ಲಿ ೨.೫೬ ಕೋಟಿ ರು.ಗಳಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಅದಾನಿ ಫೌಂಡೇಷನ್ ತನ್ನ ಸಿಎಸ್‌ಆರ್ ಯೋಜನೆಯಡಿ ಹಂತಹಂತವಾಗಿ ನಡೆಸಲಾಗುವುದು. ಅದರಲ್ಲಿ ಈಗಾಗಲೇ ಸುಮಾರು ೧.೬೨ ಕೋಟಿ ರು.ಗಳ ಕಾಮಗಾರಿಯನ್ನು ಈಗಾಗಲೇ ಅನುಷ್ಠಾನಗೊಳಿಸಿದೆ ಎಂದು ಆಳ್ವ ಹೇಳಿದರು.

ತೆಂಕ ಗ್ರಾ.ಪಂ. ಉಪಾಧ್ಯಕ್ಷೆ ಕಸ್ತೂರಿ ಪ್ರವೀಣ್‌, ಪಂಚಾಯಿತಿ ಕಾರ್ಯದರ್ಶಿ ಗಾಯತ್ರಿ, ಮಾಜಿ ಅಧ್ಯಕ್ಷೆ ಅರುಣಾಕುಮಾರಿ, ಸದಸ್ಯರಾದ ಬಾಲಚಂದ್ರ, ದೀಪಕ್ ಎರ್ಮಾಳ್, ಗುತ್ತಿಗೆದಾರರಾದ ಡೇವಿಡ್ ಡಿಸೋಜ, ಅದಾನಿ ಸಂಸ್ಥೆಯ ಎಜಿಎಂ ಆದ ರವಿ ಆರ್. ಜೇರೆ ಮತ್ತು ಅದಾನಿ ಫೌಂಡೇಷನ್‌ನ ಅನುದೀಪ್ ಇದ್ದರು.