ಸಾರಾಂಶ
ಕನ್ನಡಪ್ರಭ ವಾರ್ತೆ ಕೆಜಿಎಫ್
ನರೇಂದ್ರ ಮೋದಿ ಸರ್ಕಾರ ಸಾಂಸ್ಕೃತಿಕ ಸಂಪರ್ಕ ಮತ್ತು ಬೌದ್ದಿಕ ಸಂಪರ್ಕವನ್ನು ಬಲಪಡಿಸುತ್ತಿದೆ, ಯಾವುದೇ ರೂಪದಲ್ಲಿ ಸಂಪರ್ಕವು ದೇಶ ಮತ್ತು ಅದರ ೧೪೦ ಕೋಟಿ ನಾಗರಿಕರನ್ನು ಸಂಪರ್ಕಿಸುವ ಗುರಿ ಹೊಂದಿರಬೇಕೆಂದು ಪ್ರಧಾನಿ ನರೇಂದ್ರ ಮೋದಿ ಆಶಯವಾಗಿದೆ ಎಂದು ಸಂಸದ ಮುನಿಸ್ವಾಮಿ ಹೇಳಿದರು.ಕೆಜಿಎಫ್‌ನಲ್ಲಿ ಆಕಾಶವಾಣಿಯ ೧೦೦ ವ್ಯಾ. ಎಫ್‌ಎಂ ಟ್ರಾನ್ಸ್ಮಿಟರ್ ಕೇಂದ್ರದ ಉದ್ಘಾಟನಾ ಕಾರ್‍ಯಕ್ರಮದಲ್ಲಿ ಅವರು ಮಾತನಾಡಿದರು,
ಸಂಪರ್ಕ ಹೆಚ್ಚಿಸಲು ಟ್ರಾನ್ಸ್ಮೀಟರ್ದೇಶದಲ್ಲಿ ಎಫ್.ಎಂ ಸಂಪರ್ಕ ಹೆಚ್ಚಿಸಲು ೯೧ ಹೊಸ ೧೦೦ ವ್ಯಾ. ಈಒ ಟ್ರಾನ್ಸ್ ಮಿಟರ್‌ಗಳನ್ನು ಜನವರಿ ೧೯ ರಂದು ವರ್ಚವೆಲ್ ವಿಡಿಯೂ ಕಾನ್ಪರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಸರ್ಮಪಿಸಿದ್ದರು, ಅದರಲ್ಲಿ ಕೋಲಾರ ಜಿಲ್ಲೆಯ ಕೆಜಿಎಫ್ ನಗರದಲ್ಲಿ ಸಹ ಒಂದು, ೧೬.ಕಿ.ಮೀಟರ್ ಸುತ್ತಳತೆಯ ಪ್ರಸಾರ ಕೇಂದ್ರವನ್ನು ಪ್ರಧಾನಿ ಮೋಧಜಿಯವರು ಉದ್ಘಾಟಿಸಿ ಸಾರ್ವಜನಿಕರ ಸೇವೆಗೆ ನೀಡಿರುವುದು ಸಂತಸ ತಂದಿದೆ, ಈ ಕೇಂದ್ರವು ೨.೪ ಲಕ್ಷ ಜನರಿಗೆ ಅನುಕೂಲವಾಗಲಿದೆ ಎಂದರು.
ದೇಶದಲ್ಲಿ ೯೧ ಎಫ್‌ಎಂ ಟ್ರಾನ್ಸ್‌ಮಿಟರ್‌ಗಳ ಉದ್ಘಾಟನೆಯು ಭಾರತದಲ್ಲಿ ರೇಡಿಯೋ ಉದ್ಯಮದಲ್ಲಿ ಕ್ರಾಂತಿಯನ್ನುಂಟು ಮಾಡುತ್ತದೆ, ರೇಡಿಯೂ ಮತ್ತು ಮನ್ ಕಿ ಬಾತ್ ಮೂಲಕ ದೇಶದ ಶಕ್ತಿ ಮತ್ತು ದೇಶವಾಸಿಗಳಲ್ಲಿನ ಕರ್ತವ್ಯದ ಸಾಮೂಹಿಕ ಶಕ್ತಿಯೊಂದಿಗೆ ಮೋದಿಜೀರನ್ನು ಸಂಪರ್ಕಿಸಬಹುದೆಂದು ಮೋದಿ ತಿಳಿಸಿದ್ದಾರೆ. ದೇಶದ ಸಮಗ್ರ ಮಾಹಿತಿ ತಿಳಿಯಲು ಒಂದು ರೀತಿಯಲ್ಲಿ ಮೋದಿಜಿ ಆಲ್ ಇಂಡಿಯಾ ರೇಡಿಯೂ ತಂಡದ ಒಂದು ಭಾಗವಾಗಿದ್ದಾರೆ, ದೂರ ಎಂದು ಪರಿಗಣಿಸಲ್ಪಟ್ಟವರಿಗೆ ಈಗ ಹೆಚ್ಚಿನ ಮಟ್ಟದಲ್ಲಿ ಸಂಪರ್ಕ ಸಾಧಿಸಲು ಅವಕಾಶ ಸಿಗುವುದಾಗಿ ಸಂಸದ ಮುನಿಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.ತಂತ್ರಜ್ಞಾನದ ಪರ ಪ್ರಧಾನಿತಂತ್ರಜ್ಞಾನದ ಪ್ರಜಾಪ್ರಭುತ್ವೀಕರಣಕ್ಕಾಗಿ ಕೇಂದ್ರ ಸರಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ, ಡಿಜಿಟಲ್ ಇಂಡಿಯಾ ಹೊಸ ಕೇಳುಗರನ್ನು ಮಾತ್ರ ನೀಡಿಲ್ಲ, ರೇಡಿಯೂ ಆದರೆ ಹೊಸ ಆಲೋಚನಾ ಪ್ರಕ್ರಿಯೆ ಕೂಡ ಒಂದು ಭಾಗವಾಗಿದೆ, ಈ ಭವಿಷ್ಯಕ್ಕಾಗಿ ನಾವು ನಮ್ಮನ್ನು ಸಿದ್ದಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಗಣಿ ಕಾರ್ಮಿಕರಿಗೆ ಹಕ್ಕುಪತ್ರ೨೮೦೦ ಗಣಿ ಕಾರ್ಮಿಕರಿಗೆ ಮುಂದಿನ ತಿಂಗಳು ಮನೆಗಳ ಹಕ್ಕು ಪತ್ರ ಕೇಂದ್ರ ಗಣಿ ಸಚಿವ ಪ್ರಹ್ಲಾದ್ ಜ್ಯೋಷಿ ಸಮುಮ್ಮಖದಲ್ಲಿ ನೀಡಲಾಗುವುದು, ಈಗಾಗಲೇ ದೂರ ಊರುಗಳಲ್ಲಿ ಇರುವ ಕಾರ್ಮಿಕರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ತಿಳಿಸಿದ್ದೇವೆ ಎಂದರು.
ಅರ್ಹ ಅಭ್ಯರ್ಥಿಗೆ ನಿಮ್ಮ ಮತವನ್ನು ನೀಡಿ ಮುಂಬರುವ ಲೋಕಾಸಭಾ ಚುನಾವಣೆಯಲ್ಲಿ ದೇಶವನ್ನು ಮುನ್ನಡೆಸುವಂತಹ ಅಭ್ಯರ್ಥಿಗೆ ನಿಮ್ಮ ಮತವನ್ನು ನೀಡುವಂತೆ ತಿಳಿಸಿದರು.ತಹಸೀಲ್ದಾರ್ ನಾಗವೇಣಿ, ದೂರದರ್ಶನದ ಉಪ ನಿದೇರ್ಶಕ ಶಿವಶಂಕರ್, ಎಇಇ, ಸಿದ್ದಲಿಂಗಪ್ಪ, ಶಂಕರಪ್ಪ, ಮಧುಸೂದನ್ ಇದ್ದರು.