ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಅಂದು ಸರ್ವರೂ ಸಮಾನರು ಎಂದು ಸಾರಿ ಸಾರಿ ಹೇಳಿದರು. ಆವರ ಕಂಡ ಕನಸು ಇಂದಿಗೂ ಜಗತ್ತಿನ ಜನರೆಲ್ಲರೂ ಒಂದೇ ಮನುಜ ಕುಲ, ಉದೋಗ ಆಧರಿಸಿ ಹುಟ್ಟಿಕೊಂಡಿದ್ದು ಜಾತಿ. ಆದರೆ ಹುಟ್ಟಿನಿಂದ ಯಾರೂ ನಿರ್ದಿಷ್ಟ ಜಾತಿಯಲ್ಲಿ ಹುಟ್ಟುವುದಿಲ್ಲ, ಹುಟ್ಟಿದು ಮನುಷ್ಯರಾಗಿ ಸಾಯುವುದು ಮನುಷ್ಯರಾಗಿಯೇ ಹೊರತು ಜಾತಿವಾದಿಯಾಗಿ ಅಲ್ಲ. ಅಂದೇ ಬಸವಾದಿ ಶರಣರು ಸಮಾನತೆ ಸಾರಿ ಜಗತ್ತಿಗೆ ಬೆಳಕು ಚೆಲ್ಲಿದ್ದರು ಎಂದು ಬಿದರ್ ಚಿದಂಬರ ಆಶ್ರಮದ ಡಾ ಶಿವಕುಮಾರ್ ಸ್ವಾಮೀಜಿ ಹೇಳಿದರು.ನಗರದ ಬನಶಂಕರಿ ದೇವಸ್ಥಾನದ ಸಭಾ ಭವನದಲ್ಲಿ ಆರಂಭಗೊಂಡ ಪ್ರಕರಣ ಪ್ರವೀಣ ಶ್ರೀ ಬಸವಾನಂದರ 50 ನೇ ಪುಣ್ಯಾರಾಧನೆಯ ಸುವರ್ಣ ವೇದಾಂತ ಪರಿಷತ್ ಹಾಗೂ ಸಹಜಾನಂದ ಮಹಾಸ್ವಾಮಿಗಳು 80ನೇ ವರ್ಧಂತಿ (ಸಹಸ್ರ ಚಂದ್ರ ದರ್ಶನ) ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೂಡಲಸಂಗಮ ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು.
ಭವ್ಯ ಮೆರವಣಿಗೆ : ಸಕಲ ಮಂಗಲ ವಾದ್ಯಗಳೊಂದಿಗೆ ಕುಂಭಮೇಳ ಆರತಿಗಳೊಂದಿಗೆ ಸಿದ್ಧಾರೂಢರ ಮೂರ್ತಿ, ಬಸವಾನಂದರ ಮೂರ್ತಿಗಳ ಭವ್ಯ ಮೆರವಣಿಗೆ ಬೆಳಗ್ಗೆ 9 ಗಂಟೆಯಿಂದ ಸಿದ್ಧಾರೂಢ ಮಠದಿಂದ ಆರಂಭಗೊಂಡು, ಚನ್ನಮ್ಮ ಸರ್ಕಲ್, ಗಾಂಧಿವೃತ್ತ, ಜವಳಿ ಬಜಾರ್, ನಡುಚೌಕಿ, ಮಹಾಲಿಂಗೇಶ್ವರ ದೇವಸ್ಥಾನ ಮಾರ್ಗವಾಗಿ ಬನಶಂಕರಿ ದೇವಸ್ಥಾನಕ್ಕೆ ತಲುಪಿತು. ನಗರದ ತುಂಬೆಲ್ಲಾ ಹಬ್ಬದ ವಾತಾವರಣ ಕಳೆ ಕಟ್ಟಿತ್ತು.ಹುಬ್ಬಳ್ಳಿ ಸಿದ್ಧಾರೂಢ ಟ್ರಸ್ಟ್ ಕಮಿಟಿ ಧರ್ಮದರ್ಶಿ ಶಾಮಾನಂದ ಪೂಜಾರಿ ಪ್ರಾಸ್ತವಿಕವಾಗಿ ಮಾತನಾಡಿದರು. ಕಾಡರಕೊಪ್ಪದ ದಯಾನಂದ ಸರಸ್ವತಿ, ಚಳಕಾಪುರದ ಶಂಕರಾರೂಢ ಸ್ವಾಮೀಜಿ, ತಳಕಟ್ಟಿ ಆತ್ಮಾನಂದ ಸ್ವಾಮೀಜಿ, ಹೊಸೂರ ಪರಮಾನಂದ ಸ್ವಾಮೀಜಿ, ರನ್ನಬೆಳಗಲಿಯ ಸದಾಶಿವ ಗುರೂಜಿ, ಕಂಕನವಾಡಿ ಮಾರುತಿ ಶರಣರು, ಮಹಾಲಿಂಗಪುರದ ಸಹಜಾನಂದ ಸ್ವಾಮೀಜಿ, ತಾಳಿಕೋಟಿಯ ಇಂಧುಮತಿ, ಚಿಕ್ಕಪಡಸಲಗಿಯ ಅಕ್ಕಮಹಾದೇವಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಮುಖಂಡರಾದ ಡಾ.ಬಿ.ಡಿ. ಸೊರಾಗಾಂವಿ, ಮಲ್ಲಪ್ಪ ಭಾವಿಕಟ್ಟಿ, ಚನ್ನಪ್ಪ ಪಟ್ಟಣಶೆಟ್ಟಿ, ಬಸವರಾಜ ಢಪಾಳಪುರ, ಮಲ್ಲಪ್ಪ ಕಟಗಿ, ಅಲ್ಲಪ್ಪ ಗುಂಜಿಗಾಂವಿ, ಲಕ್ಕಪ್ಪ ಚಮಕೇರಿ, ಕಲ್ಲಪ್ಪ ಚಿಂಚಲಿ, ಎಸ್.ಕೆ. ಗಿಂಡೆ, ಎಂ.ಪಿ. ಅಂಗಡಿ, ಶಿವಾನಂದ ತಾಳಿಕೋಟಿ, ಪ್ರಭು ಬೆಳಗಲಿ ಇದ್ದರು. ಮೂರ್ತಿ ದಾನಿಗಳನ್ನು ಪ್ರಸಾದ ದಾನಿಗಳನ್ನು ಸನ್ಮಾನಿಸಲಾಯಿತು. ಬೀದರದ ಗಣೇಶಾನಂದ ನಿರೂಪಿಸಿದರು. ಹುಮಾಯಿನ್ ಸುತಾರ ವಂದಿಸಿದರು.