ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಇತ್ತೀಚೆಗೆ ಯುವ ದಸರಾದಲ್ಲಿ ಸಂಗೀತ ಕಾರ್ಯಕ್ರಮ ನೀಡಲು ಆಗಮಿಸಿದ್ದ ಸಂಗೀತ ಮಾಂತ್ರಿಕ ಇಳಯರಾಜ ಅವರಿಗೆ ನಗರದ ವಿಂಟೇಜ್ ಹಾರ್ವೆಸ್ಟ್ ಸಂಸ್ಥೆಯ ಕಲಾವಿದರ ತಂಡವು 5 ಅಡಿ ಉದ್ದದ ಮೈಸೂರು ಇನ್ಲೇ ಕಲೆಯಲ್ಲಿ ಮೂಡಿಬಂದ ಅವರ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿತು.ಜಿಲ್ಲೆಯಲ್ಲಿ ಮೈಸೂರು ಶೈಲಿಯ ಚಿತ್ರಕಲೆ, ರೇಷ್ಮೆ, ಮಲ್ಲಿಗೆಯು ಪ್ರಸಿದ್ಧಿ ಪಡೆದಿರುವಂತೆ ಮೈಸೂರಿನ ಇನ್ಲೇ ಆರ್ಟ್ಸಹ ಅದರದ್ದೇ ಆದ ಜನಪ್ರಿಯತೆ, ಇತಿಹಾಸ ಹೊಂದಿದೆ. ಅಲ್ಲದೆ ಮೈಸೂರು ಇನ್ಲೇ ಆರ್ಟ್ಗೆ ಜಿಐ ಟ್ಯಾಗ್ ಸಹ ಲಭ್ಯವಾಗಿದೆ. ಈ ಶೈಲಿ ಬಳಸಿಕೊಂಡು ಮೈಸೂರಿನ ವಿಂಟೇಜ್ಹಾರ್ವೆಸ್ಟ್ತಂಡ ಈ ವಿಶಿಷ್ಟ ಚಿತ್ರಕಲೆಯನ್ನು ತಯಾರಿಸಿದ್ದು, ಇಳಯರಾಜ ಅವರು ಕಲಾವಿದರ ಕೈಯಲ್ಲಿ ಮೂಡಿಬಂದ ತಮ್ಮ ಭಾವಚಿತ್ರವನ್ನು ನೋಡಿ ಪುಳಕಿತರಾದರು.ಕಾವಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಶ್ರವಣ ಕುಮಾರ್ ಅವರು ಈ ಕಲೆಯ ರೂವಾರಿ. ಇವರೊಂದಿಗೆ ಕುಮುದಾ, ನಿರ್ಮಲಾ, ಮಿರ್ರಹ್ಮತ್ ಆಲಿ, ಅನ್ಸಾರ್ ಆಲಿ, ಧನಲಕ್ಷ್ಮೀ, ಆನಂದ್, ಆಂಥೋನಿ, ಕುಮಾರ್, ಸಿದ್ದಪ್ಪಾಜಿ ಹಾಗೂ ಜಗದೀಶ್ಸೇರಿ ಈ ಸುಂದರ ಚಿತ್ರಕಲೆಯನ್ನು ತಯಾರಿಸಿದ್ದಾರೆ.ಭಾವಚಿತ್ರವನ್ನು ಉಡುಗೊರೆಯಾಗಿ ನೀಡುವ ವೇಳೆ ವಿಂಟೇಜ್ ಹಾರ್ವೆಸ್ಟ್ ಸಂಸ್ಥೆಯ ಸದಸ್ಯರು ಇದ್ದರು.