ಅಕ್ಟೋಬರ್‌ ನಿಂದ ಟೋಕಿಯೋಗೆ 5 ವಿಮಾನ: ಬಿಐಎಎಲ್‌

| Published : Aug 24 2024, 01:23 AM IST

ಅಕ್ಟೋಬರ್‌ ನಿಂದ ಟೋಕಿಯೋಗೆ 5 ವಿಮಾನ: ಬಿಐಎಎಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಅಕ್ಟೋಬರ್‌ ನಿಂದ ಟೋಕಿಯೋಗೆ 5 ವಿಮಾನ: ಬಿಐಎಎಲ್‌

ಕನ್ನಡಪ್ರಭ ವಾರ್ತೆ ದೇವನಹಳ್ಳಿ

ಟೋಕಿಯೋ ಮತ್ತು ಬೆಂಗಳೂರು ಮಾರ್ಗದಲ್ಲಿ ಇನ್ನಷ್ಟು ವಿಮಾನಗಳನ್ನು ಹೆಚ್ಚಿಸುವುದಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಬಿಐಎಎಲ್‌) ಹಾಗೂ ಜಪಾನ್‌ ಏರ್‌ಲೈನ್ಸ್‌ ಘೋಷಿಸಿದೆ.

ಟೋಕಿಯೋ, ಬೆಂಗಳೂರು ನಡುವೆ ಪ್ರಸ್ತುತ ವಾರಕ್ಕೆ ಮೂರು ವಿಮಾನಗಳು ಮಾತ್ರ ಹಾರಾಟ ನಡೆಸುತ್ತಿದ್ದು ಪ್ರಯಾಣಿಕರ ಒತ್ತಡದಿಂದ ಅಕ್ಟೋಬರ್‌ ಕೊನೆಯ ವಾರದಿಂದ ಐದು ವಿಮಾನಗಳು ಹಾರಾಟ ನಡೆಸಲಿವೆ. 2022ರಲ್ಲಿ 23,532 ಹಾಗೂ 2023ರಲ್ಲಿ 62,959 ಪ್ರಯಾಣಿಕರು ಪ್ರಯಾಣ ಬೆಳಸಿದ್ದಾರೆ ಎಂದು ಬಿಐಎಎಲ್‌ ಕಾರ್ಯನಿರ್ವಹಣಾಧಿಕಾರಿ ಸತ್ಯಕಿ ರಘುನಾಥ್‌ ತಿಳಿಸಿದ್ದಾರೆ.

ಜಪಾನ್‌ ಏರ್‌ಲೈನ್ಸ್‌ರವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಲು ಮುಂದಾಗಿರುವುದು ಸಂತಸದ ವಿಷಯವಾಗಿದೆ. ಈ ಮೂಲಕ ದಕ್ಷಿಣ ಹಾಗೂ ಮಧ್ಯಭಾರತದ ಪ್ರಮುಖ ಅಂತಾರಾಷ್ಟ್ರೀಯ ಗೇಟ್‌ ವೇ ಆಗಿರುವ ಇಲ್ಲಿನ ವಿಮಾನ ನಿಲ್ದಾಣದ ಹಿರಿಮೆ ಇನ್ನಷ್ಟು ಹೆಚ್ಚಿದಂತಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.