ಗೋ ಶಾಲಾ ಚಿಕಿತ್ಸಾ ಘಟಕಕ್ಕೆ ₹5 ಲಕ್ಷ ನೆರವು

| Published : Sep 14 2025, 01:04 AM IST

ಸಾರಾಂಶ

ಬಾಳೆಹೊನ್ನೂರು, ಹುಯಿಗೆರೆ ಗ್ರಾಮದ ಶಂಕರ ಭಾರತಿ ಗೋ ಶಾಲೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಗೋವುಗಳ ಚಿಕಿತ್ಸಾ ಘಟಕಕ್ಕೆ ಉದ್ಯಮಿ ಕಿಶೋರ್ ಕುಮಾರ್ ಹೆಗ್ಡೆ ₹5 ಲಕ್ಷ ಆರ್ಥಿಕ ನೆರವು ನೀಡಿದ್ದಾರೆ ಎಂದು ಗೋ ಶಾಲೆ ಮುಖ್ಯಸ್ಥ ಪ್ರವೀಣ್ ಖಾಂಡ್ಯ ತಿಳಿಸಿದ್ದಾರೆ.

- ಮುಖ್ಯಸ್ಥ ಪ್ರವೀಣ್ ಖಾಂಡ್ಯ ಮಾಹಿತಿ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಹುಯಿಗೆರೆ ಗ್ರಾಮದ ಶಂಕರ ಭಾರತಿ ಗೋ ಶಾಲೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಗೋವುಗಳ ಚಿಕಿತ್ಸಾ ಘಟಕಕ್ಕೆ ಉದ್ಯಮಿ ಕಿಶೋರ್ ಕುಮಾರ್ ಹೆಗ್ಡೆ ₹5 ಲಕ್ಷ ಆರ್ಥಿಕ ನೆರವು ನೀಡಿದ್ದಾರೆ ಎಂದು ಗೋ ಶಾಲೆ ಮುಖ್ಯಸ್ಥ ಪ್ರವೀಣ್ ಖಾಂಡ್ಯ ತಿಳಿಸಿದ್ದಾರೆ.ನಮ್ಮ ಗೋ ಶಾಲೆಯಲ್ಲಿ ಅಪಘಾತದಿಂದ ಅಂಗವಿಕಲತೆಗೆ ತುತ್ತಾದ ಅಥವಾ ಸಾಂಕ್ರಾಮಿಕ ರೋಗಗಳಿಗೆ ತುತ್ತಾದಂತಹ ಗೋವುಗಳನ್ನು ಚಿಕಿತ್ಸಾ ಘಟಕದಲ್ಲಿ ಆರೈಕೆ ಮಾಡಲಾಗುವುದು. ಇದಕ್ಕಾಗಿ ನೂತನವಾಗಿ ಚಿಕಿತ್ಸಾ ಘಟಕ ನಿರ್ಮಿಸುತ್ತಿದ್ದು, ಜಿಲ್ಲೆಯ ಯಶಸ್ವಿ ಉದ್ಯಮಿಗಳಾದ ಲೈಫ್ ಲೈನ್ ಫೀಡ್‌ ಕಿಶೋರ್ ಕುಮಾರ್ ಹೆಗ್ಡೆ ಸ್ವಯಂಪ್ರೇರಿತವಾಗಿ ಈ ಘಟಕಕ್ಕೆ ₹5 ಲಕ್ಷದ ಆರ್ಥಿಕ ನೆರವು ನೀಡಿದ್ದಾರೆ.ಶಂಕರ ಭಾರತಿ ಗೋ ಶಾಲೆ ಹಿಂದೂ ಸಮಾಜದ ನಂಬಿಕೆ ಗಳಿಸಿ ಗೋವುಗಳಿಗೆ ಶಾಶ್ವತ ಮತ್ತು ಸುರಕ್ಷತೆ ಹೊಂದಿದ ಒಂದು ತಾಣವಾಗಿ ನಿರ್ಮಾಣಗೊಳ್ಳುತ್ತಿದೆ.ಇದಕ್ಕೆ ಹಲವರು ಸಹಕರಿಸುತ್ತಿದ್ದು, ಉದ್ಯಮಿ, ಕಾಫಿ ಬೆಳೆಗಾರರಾದ ಮೂಡಿಗೆರೆಯ ಮಂಚೇಗೌಡ ಅವರು ಗೋವುಗಳ ಕುಡಿಯುವ ನೀರಿಗಾಗಿ ಬೋರ್‌ವೆಲ್, ಮೋಟಾರ್, ಪೈಪ್‌ಲೈನ್‌ಗಾಗಿ ₹80 ಸಾವಿರದ ಸಹಾಯಧನ ನೀಡಿದ್ದಾರೆ.

ಶೃಂಗೇರಿಯ ವಕೀಲ ಸತೀಶ್ ಗೋಚುವಳ್ಳಿಯವರು ಪ್ರತೀ ವರ್ಷದಂತೆ ಈ ವರ್ಷವೂ ತಮ್ಮ ಮಾತೃಶ್ರೀಯವರ ಹೆಸರಿನಲ್ಲಿ ₹12 ಸಾವಿರ ಹಾಗೂ ಕಾಂಗ್ರೆಸ್ ಮುಖಂಡ ಗಿರೀಶ್ ಹುಯಿಗೆರೆ ವಾಟರ್ ಟ್ಯಾಂಕ್ ನಿರ್ಮಾಣಕ್ಕಾಗಿ ₹18 ಸಾವಿರ ಸಹಾಯ ಧನ ನೀಡಿದ್ದಾರೆ ಎಂದು ತಿಳಿಸಿದ್ದಾರೆ.೧೩ಬಿಹೆಚ್‌ಆರ್ ೨:

ಬಾಳೆಹೊನ್ನೂರು ಸಮೀಪದ ಹುಯಿಗೆರೆ ಶಂಕರ ಭಾರತಿ ಗೋ ಶಾಲೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಗೋವುಗಳ ಚಿಕಿತ್ಸಾ ಘಟಕಕ್ಕೆ ಉದ್ಯಮಿ ಕಿಶೋರ್ ಕುಮಾರ್ ಹೆಗ್ಡೆ ನೆರವು ನೀಡಿದರು. ಗೋ ಶಾಲಾ ಮುಖ್ಯಸ್ಥ ಪ್ರವೀಣ್ ಖಾಂಡ್ಯ ಇದ್ದರು.