ಸಾರಾಂಶ
ವಿಶ್ವ ಯೋಗದಿನದ ಅಂಗವಾಗಿ ಪಟ್ಟಣದ ಚೇತನ ಆಸ್ಪತ್ರೆ ಆವರಣದಲ್ಲಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಕಡೂರುಇಂದಿನ ದಿನಗಳಲ್ಲಿ ಯೋಗ ಬಲ್ಲವನಿಗೆ ರೋಗ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿರುವ ಕಾರಣ ಪ್ರತಿಯೊಬ್ಬರು ಯೋಗಾಬ್ಯಾಸ ಮಾಡಿದರೆ ಉತ್ತಮ ಆರೋಗ್ಯ ಪಡೆಯಲು ಸಾಧ್ಯ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.ಶುಕ್ರವಾರ ವಿಶ್ವ ಯೋಗದಿನದ ಅಂಗವಾಗಿ ಪಟ್ಟಣದ ಚೇತನ ಆಸ್ಪತ್ರೆ ಆವರಣದಲ್ಲಿ ಸ್ನೇಹಮಯಿ ವಿವೇಕಾನಂದ ಯೋಗ ಕೇಂದ್ರ, ಚೇತನ ಆಸ್ಪತ್ರೆ ಆಡಳಿತ ಮಂಡಳಿ, ಪತಂಜಲಿ ಯೋಗ ಸಂಸ್ಥೆ, ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ಸದಸ್ಯರ ಸಹಯೋಗದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 5 ಸಾವಿರ ವರ್ಷಗಳ ಇತಿಹಾಸವಿರುವ ಭಾರತೀಯ ಯೋಗಕ್ಕೆ ವಿಶ್ವಮಟ್ಟದಲ್ಲಿ ಮಾನ್ಯತೆ ದೊರಕಿದ್ದು ಪ್ರತಿವರ್ಷ ಜೂನ್ 21ರಂದು ಅಂತಾರಾಷ್ಟ್ರೀಯ ವಿಶ್ವ ಯೋಗ ದಿನ ಆಚರಿಸಲು 10 ವರ್ಷಗಳ ಹಿಂದೆ 177 ರಾಷ್ಟ್ರಗಳು ಒಪ್ಪಿಗೆ ನೀಡಿದ್ದು ನಮ್ಮ ದೇಶದ ಪ್ರಧಾನಿ 2014ರಲ್ಲಿ ವಿಶ್ವ ಯೋಗ ದಿನಾಚರಣೆಗೆ ಚಾಲನೆ ನೀಡಿ ಅಲ್ಲಿಂದ ಇಲ್ಲಿಯವರೆವಿಗೂ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ವವೇ ಆಚರಣೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.ಅಂತಾರಾಷ್ಟ್ರೀಯ ಯೋಗ ಜಾಗತಿಕ ಆರೋಗ್ಯ ಸುಧಾರಣೆಗೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಸಹಕಾರ ಮರೆಯು ವಂತಿಲ್ಲ ಎಂದರು.ಪಟ್ಟಣದ ಚೇತನ ಆಸ್ಪತ್ರೆ ವೈದ್ಯರಾದ ಡಾ.ಚಂದ್ರಶೇಖರ್ ಮತ್ತು ಅವರ ಕುಟುಂಬದವರು ಕಳೆದ 30 ವರ್ಷಗಳಿಂದ ಆರೋಗ್ಯ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದು. ಉತ್ತಮ ಚಿಕಿತ್ಸೆಯನ್ನು ಚೇತನ ಆಸ್ಪತ್ರೆ ನೀಡುತ್ತಿದೆ ಎಂದು ಶ್ಲಾಘಿಸಿದರು.ಚೇತನ ಆಸ್ಪತ್ರೆ ಡಾ.ಚಂದ್ರಶೇಖರ್ ಯೋಗ ದಿನಾಚರಣೆ ಬಗ್ಗೆ, ಯೋಗದಿಂದ ಆರೋಗ್ಯಕ್ಕೆ ಆಗುವ ಅನೇಕ ಅನುಕೂಲಗಳ ಬಗ್ಗೆ ಮಾಹಿತಿ ನೀಡಿದರು.ಸ್ನೇಹಮಯಿ ವಿವೇಕಾನಂದ ಯೋಗ ಕೇಂದ್ರದ ಪ್ರಾಚಾರ್ಯ ನವೀನ್ ಕಳೆದ ಅನೇಕ ವರ್ಷಗಳಿಂದ ಪಟ್ಟಣದಲ್ಲಿ ಯೋಗ ಶಿಕ್ಷಣ ನೀಡುತ್ತಿದ್ದು ಸಾವಿರಾರು ವಿದ್ಯಾರ್ಥಿಗಳನ್ನು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗೆ ಕಳುಹಿಸಿರುವ ಹೆಗ್ಗಳಿಕೆ ನಮ್ಮ ಸಂಸ್ಥೆಯದು ಎಂದರು.ಡಾ.ಮನೋಜ್, ಡಾ.ಮಯೂರ್, ಯೋಗ ಕೇಂದ್ರದ ವಿಷ್ಣುಪ್ರಸಾದ್, ರಂಜಿತ್, ಈಶ್ವರಿ ವಿದ್ಯಾಲಯದ ಜ್ಞಾನೇಶ್ವರಿ ಅಕ್ಕ ಹಾಗೂ ಆಸ್ಪತ್ರೆ ಸಿಬ್ಬಂದಿಯಿಂದ ಯೋಗ ಪ್ರದರ್ಶನ ನಡೆಯಿತು.21ಕೆಕೆಡಿಯು2.
ಕಡೂರು ಸ್ನೇಹಮಯಿ ವಿವೇಕಾನಂದ ಯೋಗ ಶಿಕ್ಷಣ ಸಂಸ್ಥೆ, ಚೇತನ ಆಸ್ಪತ್ರೆ, ಈಶ್ವರಿ ವಿದ್ಯಾಲಯ ವಿಶ್ವ ಯೋಗ ದಿನದ ಅಂಗವಾಗಿ ಚೇತನ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ಯೋಗ ಕಾರ್ಯಕ್ರಮವನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು.