ನೂತನ ನಾಡಕಚೇರಿ ಕಟ್ಟಡಕ್ಕೆ ₹50 ಲಕ್ಷ ಅನುದಾನ: ಟಿ.ಡಿ.ರಾಜೇಗೌಡ

| Published : Aug 01 2025, 11:45 PM IST

ನೂತನ ನಾಡಕಚೇರಿ ಕಟ್ಟಡಕ್ಕೆ ₹50 ಲಕ್ಷ ಅನುದಾನ: ಟಿ.ಡಿ.ರಾಜೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಬಾಳೆಹೊನ್ನೂರು ಶಿಥಿಲಗೊಂಡು ಬೀಳುವ ಆತಂಕದಲ್ಲಿರುವ ಪಟ್ಟಣದ ನಾಡಕಚೇರಿಗೆ ₹50 ಲಕ್ಷ ಅನುದಾನ ಮಂಜೂರು ಮಾಡಿ ಹೊಸ ಕಟ್ಟಡ ನಿರ್ಮಿಸಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ನೂತನ ನಾಡಕಚೇರಿ ನಿರ್ಮಾಣಕ್ಕೆ ಶಂಕುಸ್ಥಾಪನೆ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಶಿಥಿಲಗೊಂಡು ಬೀಳುವ ಆತಂಕದಲ್ಲಿರುವ ಪಟ್ಟಣದ ನಾಡಕಚೇರಿಗೆ ₹50 ಲಕ್ಷ ಅನುದಾನ ಮಂಜೂರು ಮಾಡಿ ಹೊಸ ಕಟ್ಟಡ ನಿರ್ಮಿಸಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.ಪಟ್ಟಣದಲ್ಲಿ ನೂತನ ನಾಡಕಚೇರಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಈ ಹಿಂದೆ ಇದೇ ಜಾಗದಲ್ಲಿ ನೂತನ ಕಟ್ಟಡ ಕಟ್ಟಲು ಯೋಜಿಸಲಾಗಿತ್ತು. ಆದರೆ ಕ್ರೀಡಾಪಟುಗಳ ಆಕ್ಷೇಪದಿಂದ ಕಾಮಗಾರಿ ನಿರ್ವಹಿಸಲು ಆಗಿರಲಿಲ್ಲ. ಇದೀಗ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಿದ್ದು, ಸುಸಜ್ಜಿತ ಕಟ್ಟಡ ನಿರ್ಮಿಸಿ ಸಾರ್ವಜನಿಕರ ಸೇವೆಗೆ ಸಮರ್ಪಿಸಲಾಗುವುದು ಎಂದರು.

ಪ್ರಸ್ತುತ ಇರುವ ಹಳೆ ಕಟ್ಟಡ ತೆರವುಗೊಳಿಸಿ ಅದೇ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣವಾಗಲಿದೆ. ತಾತ್ಕಾಲಿಕವಾಗಿ ನಾಡ ಕಚೇರಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕಾರ್ಯನಿರ್ವಹಿಸಲಿದೆ ಎಂದರು.

ಪಟ್ಟಣದ ಜೇಸಿ ವೃತ್ತದಿಂದ ವಿಜಯಮಾತೆ ಚಚ್‌ ಗೆ ₹30 ಲಕ್ಷ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಿಸಲು ಶಂಕು ಸ್ಥಾಪನೆ ನೆರವೇರಿಸಿದ್ದು, ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ. ಈ ರಸ್ತೆ ಅಭಿವೃದ್ಧಿಗೊಳಿಸಬೇಕು ಎಂಬುದು ಸಾರ್ವ ಜನಿಕರ ಹಲವು ದಿನಗಳ ಬೇಡಿಕೆ. ಪ್ರಸ್ತುತ ಅದು ಈಡೇರುತ್ತಿದೆ ಎಂದರು.ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್, ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿ ಚಂದ್ರ, ತಹಸೀಲ್ದಾರ್ ತನುಜಾ ಟಿ.ಸವದತ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರುಬೈಲು ನಟರಾಜ್, ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹನೀಫ್, ಗ್ರಾಪಂ ಉಪಾಧ್ಯಕ್ಷೆ ರಂಜಿತಾ, ಸದಸ್ಯರಾದ ಮಹಮ್ಮದ್ ಜುಹೇಬ್, ಎಂ.ಎಸ್.ಅರುಣೇಶ್, ಬಿ.ಕೆ.ಮಧು ಸೂದನ್, ಶಶಿಕಲಾ, ಸರಿತಾ, ಮಹೇಶ್ ಆಚಾರ್ಯ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಮ್ಮ, ಕಾಂಗ್ರೆಸ್ ವಕ್ತಾರ ಹಿರಿಯಣ್ಣ, ನಾಡಕಚೇರಿ ಉಪ ತಹಸೀಲ್ದಾರ್ ಹೇಮಾ ಮತ್ತಿತರರು ಹಾಜರಿದ್ದರು.೩೧ಬಿಹೆಚ್‌ಆರ್ ೨:

ಬಾಳೆಹೊನ್ನೂರಿನಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ನಾಡಕಚೇರಿ ಕಟ್ಟಡಕ್ಕೆ ಶಾಸಕ ಟಿ.ಡಿ.ರಾಜೇಗೌಡ ಶಂಕು ಸ್ಥಾಪನೆ ನೆರವೇರಿಸಿದರು. ಡಾ.ಅಂಶುಮಂತ್, ರವಿಚಂದ್ರ, ತನುಜಾ ಸವದತ್ತಿ, ಮಹಮ್ಮದ್ ಹನೀಫ್, ರಂಜಿತಾ ಇದ್ದರು.