ಲೋಕ ಅದಾಲತ್‌ನಲ್ಲಿ 500 ಪ್ರಕರಣ ಇತ್ಯರ್ಥ

| Published : Mar 18 2024, 01:47 AM IST

ಸಾರಾಂಶ

ನಗರದ ನ್ಯಾಯಾಲಯದಲ್ಲಿ ನಡೆದ ಬೃಹತ್ ಲೋಕ ಅದಾಲತ್ ನಲ್ಲಿ ಹಲವು ಪ್ರಕರಣಗಳ ರಾಜಿ ಸಂಧಾನ ನಡೆಯಿತು. ಹಿರಿಯೂರು ನ್ಯಾಯಾಲಯಗಳ ವ್ಯಾಪ್ತಿಗೆ ಬರುವ 27 ಸಿವಿಲ್ ಪ್ರಕರಣಗಳು, 413 ಕ್ರಿಮಿನಲ್ ಪ್ರಕರಣಗಳು ಹಾಗೂ 10 ಬ್ಯಾಂಕಿನ ಪ್ರಕರಣಗಳನ್ನು ಕಾನೂನು ಸೇವಾ ಸಮಿತಿ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು.

ಕನ್ನಡಪ್ರಭ ವಾರ್ತೆ ಹಿರಿಯೂರು

ನಗರದ ನ್ಯಾಯಾಲಯದಲ್ಲಿ ನಡೆದ ಬೃಹತ್ ಲೋಕ ಅದಾಲತ್ ನಲ್ಲಿ ಹಲವು ಪ್ರಕರಣಗಳ ರಾಜಿ ಸಂಧಾನ ನಡೆಯಿತು. ಹಿರಿಯೂರು ನ್ಯಾಯಾಲಯಗಳ ವ್ಯಾಪ್ತಿಗೆ ಬರುವ 27 ಸಿವಿಲ್ ಪ್ರಕರಣಗಳು, 413 ಕ್ರಿಮಿನಲ್ ಪ್ರಕರಣಗಳು ಹಾಗೂ 10 ಬ್ಯಾಂಕಿನ ಪ್ರಕರಣಗಳನ್ನು ಕಾನೂನು ಸೇವಾ ಸಮಿತಿ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು.

ಇದೇ ಸಂದರ್ಭದಲ್ಲಿ 2022ರಲ್ಲಿ ವಿವಾಹ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ ಗಂಡ ಹೆಂಡತಿಯನ್ನು ಸಂಧಾನಕಾರರು, ವಕೀಲರು, ನ್ಯಾಯಾಧೀಶರು ಮನವೊಲಿಸಿ ಒಂದಾಗಿ ಬಾಳಲು ಅವಕಾಶ ಕಲ್ಪಿಸಿ ಅನ್ಯೋನ್ಯವಾಗಿರಲು ಸಲಹೆ ನೀಡಿದರು.

ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮೊಹಮ್ಮದ್ ಮೊಯಿನುದ್ದೀನ್, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶಿಲ್ಪಾ ತಿಮ್ಮಾಪುರ,ಅಪರ ಸಿವಿಲ್ ನ್ಯಾಯಾಧೀಶರಾದ ಎಚ್.ಡಿ.ಶ್ರೀಧರ್, ವಕೀಲರ ಸಂಘದ ಅಧ್ಯಕ್ಷ ರಂಗೇನಹಳ್ಳಿ ರಾಮಚಂದ್ರಪ್ಪ ಹಾಗೂ ವಕೀಲರ ಸಂಘದ ಸದಸ್ಯರು ಹಾಜರಿದ್ದರು.