ಮಂಡ್ಯ ಜಿಲ್ಲಾ ಕಾರ್ಮಿಕ ಇಲಾಖೆ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿರುವ ೬೯೪೩೦ ಮಂದಿಗೆ ಗುರುತಿನ ಚೀಟಿ ವಿತರಿಸಿ ಹೊಸ ತಂತ್ರಾಂಶದಲ್ಲಿ ನೋಂದಣಿ ಮಾಡಲಾಗಿದೆ. ಇದೇ ಸಮಯದಲ್ಲಿ ೫೦೩ ಮಂದಿಯ ಗುರುತಿನ ಚೀಟಿಯನ್ನು ರದ್ದುಗೊಳಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯಜಿಲ್ಲಾ ಕಾರ್ಮಿಕ ಇಲಾಖೆ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿರುವ ೬೯೪೩೦ ಮಂದಿಗೆ ಗುರುತಿನ ಚೀಟಿ ವಿತರಿಸಿ ಹೊಸ ತಂತ್ರಾಂಶದಲ್ಲಿ ನೋಂದಣಿ ಮಾಡಲಾಗಿದೆ. ಇದೇ ಸಮಯದಲ್ಲಿ ೫೦೩ ಮಂದಿಯ ಗುರುತಿನ ಚೀಟಿಯನ್ನು ರದ್ದುಗೊಳಿಸಲಾಗಿದೆ.ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರನ್ನು ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ ಅವರು ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸ ಮಾಡದಿರುವುದು ಕಂಡುಬಂದಿದೆ. ಹಾಗಾಗಿ ಅವರನ್ನು ಅನರ್ಹ ಕಾರ್ಮಿಕರೆಂದು ತೀರ್ಮಾನಿಸಿ ಗುರುತಿನ ಚೀಟಿಗಳನ್ನು ರದ್ದುಪಡಿಸಲಾಗಿದೆ ಎಂದು ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ.ಜೂನ್ ೨೦೦೭ ರಿಂದ ೩೦ ಅಕ್ಟೋಬರ್ ೨೦೨೫ರವರೆಗೆ ಮಂಡ್ಯ ಒಂದನೇ ವೃತ್ತದಲ್ಲಿ ೬೬, ಎರಡನೇ ವೃತ್ತದಲ್ಲಿ ೬೨, ಮದ್ದೂರು ವೃತ್ತ-೩೮, ಕೆ.ಆರ್.ಪೇಟೆ ವೃತ್ತ-೧೨೧, ನಾಗಮಂಗಲ ವೃತ್ತ-೫೨, ಮಳವಳ್ಳಿ ವೃತ್ತ-೯೪, ಶ್ರೀರಂಗಪಟ್ಟಣ ವೃತ್ತ-೪೨, ಪಾಂಡವಪುರ ವೃತ್ತದಲ್ಲಿ ೨೮ ಸೇರಿ ೫೦೩ ಅನರ್ಹ ಕಾರ್ಮಿಕರ ಗುರುತಿನ ಚೀಟಿಗಳನ್ನು ರದ್ದು ಮಾಡಲಾಗಿದೆ.ಜಿಲ್ಲೆಯಲ್ಲಿ ೫೨೪೮೭ ಪುರುಷರು ಹಾಗೂ ೧೬೯೪೩ ಮಹಿಳೆಯರು ಸೇರಿದಂತೆ ೬೯೪೩೦ ಗುರುತಿನ ಚೀಟಿಗಳನ್ನು ಕಟ್ಟಡ ನಿರ್ಮಾಣ ಕಾಯ್ದೆಯಡಿ ಹೊಸ ತಂತ್ರಾಂಶದಲ್ಲಿ ನೋಂದಣಿ ಮಾಡಲಾಗಿದೆ. ೧೭ ಅಕ್ಟೋಬರ್ ೨೦೨೩ ರಿಂದ ೩೦ ೧೧೨೦೨೫ರವರೆಗೆ ೨೩೮೬ ಪುರುಷರು ಹಾಗೂ ೩೩೭ ಮಹಿಳೆಯರು ಸೇರಿ ೨೭೨೩ ಮಂದಿ ನೋಂದಣಿಯಾಗಿದ್ದಾರೆ. ೬.೮೧ ಕೋಟಿ ರು. ಪರಿಹಾರರಾಜ್ಯ ಖಾಸಗಿ ವಾಣಿಜ್ಯ ವಾಹನ ಚಾಲಕರ ಅಪಘಾತ ವಿಮೆ ಪರಿಹಾರ ಯೋಜನೆಯಡಿ ಕಳೆದ ವರ್ಷ ೫೦ ಮರಣ ಪ್ರಕರಣಗಳಲ್ಲಿ ಆಸ್ಪತ್ರೆ ವೆಚ್ಚ ಹಾಗೂ ಮೃತ ಚಾಲಕರ ಇಬ್ಬರು ಮಕ್ಕಳ ಶೈಕ್ಷಣಿಕ ಸಹಾಯಧನ ಸೇರಿ ೬,೮೧೫೧,೧೨೦ ರು. ಹಣವನ್ನು ಪರಿಹಾರ ರೂಪದಲ್ಲಿ ನೀಡಿರುವುದಾಗಿ ಜಿಲ್ಲಾ ಕಾರ್ಮಿಕ ಅಧಿಕಾರಿ ಡಾ.ಎಂ.ಸವಿತಾ ಕನ್ನಡಪ್ರಭ ಪತ್ರಿಕೆಗೆ ತಿಳಿಸಿದರು.ಇದಲ್ಲದೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಮದುವೆ ಸಹಾಯಧನವಾಗಿ ಬಂದಿದ್ದ ೩೬೬ ಅರ್ಜಿಗಳಲ್ಲಿ ೨೯೦ ಅರ್ಜಿಗಳನ್ನು ವಿಲೇವಾರಿ ಮಾಡಿದ್ದು ೧.೭೪ ಕೋಟಿ ರು. ನೀಡಲಾಗಿದೆ. ೫೪ ಅರ್ಜಿಗಳನ್ನು ತಿರಸ್ಕರಿಸಿದ್ದು, ೨೦ಅರ್ಜಿಗಳು ಬಾಕಿ ಉಳಿದಿವೆ. ಪ್ರಮುಖ ವೈದ್ಯಕೀಯ ಸಹಾಯಧನವಾಗಿ ೪೭ ಪ್ರಕರಣಗಳಲ್ಲಿ ೩೪ ಮಂದಿಗೆ ೧೨.೬೫ ಲಕ್ಷ ರು. ಧನ ಸಹಾಯ ನೀಡಲಾಗಿದೆ. ಹೆರಿಗೆ ಸಹಾಯಧನವಾಗಿ ೫೦ ಸಾವಿರ ರು., ತಾಯಿ-ಮಗು ಸಹಾಯಹಸ್ತ ಸಹಾಯಧನಸಹಾಯವಾಗಿ ಒಬ್ಬರಿಗೆ ೬ ಸಾವಿರ ರು.ಗಳನ್ನು ಇಲಾಖೆ ವತಿಯಿಂದ ನೀಡಲಾಗಿದೆ.-----------------------------------------ಖಾಸಗಿ ವಾಣಿಜ್ಯ ವಾಹನ ಚಾಲಕರ ಅಪಘಾತ ವಿಮೆ ಪರಿಹಾರತಾಲೂಕು ಚಾಲಕರ ಮರಣ ಪರಿಹಾರಮಂಡ್ಯ ೦೮ ೪೦ ಲಕ್ಷ ರು.ಮದ್ದೂರು ೧೨ ೬೦ ಲಕ್ಷ ರು.ಮಳವಳ್ಳಿ ೧೦ ೫೦ ಲಕ್ಷ ರು.ನಾಗಮಂಗಲ ೦೭ ೩೫ ಲಕ್ಷ ರು.ಪಾಂಡವಪುರ ೦೧ ೦೫ ಲಕ್ಷ ರು.ಶ್ರೀರಂಗಪಟ್ಟಣ ೦೪ ೨೦ ಲಕ್ಷ ರು.ಒಟ್ಟು ೫೦ ೬.೮೦ ಕೋಟಿ ರು.-----------------------------------------ಜಿಲ್ಲೆಯಲ್ಲಿರುವ ಕಟ್ಟಡ ಕಾರ್ಮಿಕರ ನೋಂದಣಿ ವಿವರಕಾರ್ಮಿಕ ಅಧಿಕಾರಿಗಳ ಕಚೇರಿ ಗಂಡು ಹೆಣ್ಣು ಒಟ್ಟು ರದ್ದು------------------------------------------ಮಂಡ್ಯ ಒಂದನೇ ವೃತ್ತ ೬೬೫೦ ೧೫೧೬ ೮೧೬೬ ೬೬ಮಂಡ್ಯ ಎರಡನೇ ವೃತ್ತ ೭೧೨೪ ೨೩೪೯ ೯೪೭೩ ೬೨ಮದ್ದೂರು ವೃತ್ತ ೬೯೪೩ ೨೦೪೭ ೮೯೯೦ ೩೮ಕೆ.ಆರ್.ಪೇಟೆ ವೃತ್ತ ೬೯೦೮ ೩೪೧೧ ೧೦೩೧೯ ೧೨೧ನಾಗಮಂಗಲ ವೃತ್ತ ೩೧೧೭ ೯೧೬ ೪೦೩೩ ೫೨ಮಳವಳ್ಳಿ ವೃತ್ತ ೯೦೭೧ ೩೭೩೩ ೧೨೮೦೪ ೯೪ಶ್ರೀರಂಗಪಟ್ಟಣ ವೃತ್ತ ೬೯೬೬ ೧೦೪೮ ೮೦೧೪ ೪೨ಪಾಂಡವಪುರ ವೃತ್ತ ೫೭೦೮ ೧೯೨೩ ೭೬೩೧ ೨೮---------------------------------------------------------------------------ಒಟ್ಟು ೫೨೪೮೭ ೧೬೯೪೩ ೬೯೪೩೦ ೫೦೩

ನೈಜ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿರುವವರಿಗೆ ಸರ್ಕಾರದ ಸೌಲಭ್ಯಗಳು ದೊರೆಯಬೇಕು. ಕಾರ್ಮಿಕರು ಕೆಲಸ ಮಾಡುತ್ತಿರುವ ಕುರಿತಂತೆ ನಿರಂತರ ತಪಾಸಣೆ ನಡೆಸಲಾಗುತ್ತಿದೆ ಮತ್ತು ಪ್ರತಿ ವರ್ಷ ಗುರುತಿನ ಚೀಟಿ ನವೀಕರಣ ಮಾಡಿಕೊಳ್ಳುವುದು ಅಗತ್ಯವಿದೆ. ಅನರ್ಹರೆಂದು ಕಂಡುಬಂದ ೫೦೩ ಗುರುತಿನ ಚೀಟಿಗಳನ್ನು ರದ್ದುಗೊಳಿಸಲಾಗಿದೆ.- ಡಾ.ಎಂ.ಸವಿತಾ, ಜಿಲ್ಲಾ ಕಾರ್ಮಿಕ ಅಧಿಕಾರಿ