ಜಿಪಂ ತೆರಿಗೆ ಶೇ.೫೨.೫೩ ರಷ್ಟು ಸಂಗ್ರಹ

| Published : Jan 01 2025, 12:00 AM IST

ಸಾರಾಂಶ

ಕೋಲಾರ-ಮಾಲೂರು ತಾಲ್ಲೂಕುಗಳಲ್ಲಿ ಅತಿ ಹೆಚ್ಚು ತೆರಿಗೆ ವಸೂಲಾತಿ ಮಾಡಲಾಗಿದೆ. ಎರಡು ತಾಲ್ಲೂಕಿನ ವಿವಿಧ ಕಡೆ ಕೈಗಾರಿಕೆಗಳು ಹೆಚ್ಚಾಗಿರುವುದರಿಂದ ತೆರಿಗೆಯು ಹೆಚ್ಚಾಗಿ ವಸೂಲಾತಿಯಾಗಿದೆ. ಜಿಲ್ಲೆಯಲ್ಲಿ ಅಂತರ್ಜಲ ಅಭಿವೃದ್ದಿ ಪಡೆಸುವ ದಿಸೆಯಲ್ಲಿ ಜಲಮೂಲಗಳನ್ನು ಅಭಿವೃದ್ದಿಪಡಿಸಲು ೧೫೫ ಗ್ರಾಮಗಳನ್ನು ಗುರುತಿಸಲಾಗಿದೆ.

ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯಲ್ಲಿ ಕಳೆದ ೨೦೨೩-೨೪ನೇ ಸಾಲಿನ ತೆರಿಗೆ ಆಂದೋಲನ ಡಿ.೧೯ ರಿಂದ ಪ್ರಾರಂಭಿಸಲಾಗಿದೆ. ಜಿಲ್ಲೆಯಲ್ಲಿ ೫೩ ಕೋಟಿ ರೂಗಳ ವಸೂಲಾತಿಯ ಗುರಿ ಹೊಂದಿದ್ದು, ಈಗಾಗಲೇ ೨೭.೮೮ ಕೋಟಿ ರೂ ವಸೂಲಿ ಮಾಡಲಾಗಿದ್ದು, ಶೇ ೫೨.೫೩ ರಷ್ಟು ವಸೂಲಾತಿ ಮಾಡಲಾಗಿದೆ ಎಂದು ಜಿ.ಪಂ ಉಪಕಾರ್ಯದರ್ಶಿ ಶಿವಕುಮಾರ್.ಬಿ ತಿಳಿಸಿದರು.ನಗರದ ಜಿಪಂ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ೧೫ ದಿನಗಳ ಹಿಂದೆಯಷ್ಟೆ ಶೇ.೪೦ ರಷ್ಟು ವಸೂಲಾತಿ ಇದ್ದದ್ದನ್ನು ಶೇ.೧೨ ರಷ್ಟು ಏರಿಕೆ ಮಾಡಿದ್ದು, ಒಟ್ಟು ಶೇ.೫೨.೫೩ರಷ್ಟು ವಸೂಲಾತಿ ಮಾಡುವ ಮೂಲಕ ಅತಿ ಕಡಿಮೆ ಅವಧಿಯಲ್ಲಿ ದಾಖಲಾತಿ ನಿರ್ಮಿಸುವಲ್ಲಿ ಯಶಸ್ವಿ ಕಂಡಿದೆ ಎಂದು ತಿಳಿಸಿದರು. ಮಾಲೂರಿನಲ್ಲಿ ೧೯ ಕೋಟಿಯಲ್ಲಿ ೧೧ ಕೋಟಿ ರೂ ವಸೂಲಾತಿಯಾಗಿದೆ, ಕೋಲಾರದಲ್ಲಿ ೧೭ ಕೋಟಿಯಲ್ಲಿ ೧೩,೭೦ ಕೋಟಿ, ಮುಳಬಾಗಿಲಿನಲ್ಲಿ ೬ ಕೋಟಿ ರೂ ಪೈಕಿ ೨.೧೫ ಕೋಟಿ ರೂ, ಶ್ರೀನಿವಾಸಪುರದಲ್ಲಿ ೫,೩೦ ಕೋಟಿ ರೂ ಪೈಕಿ ೨,೪೭ ಕೋಟಿ ರೂ, ಬಂಗಾರಪೇಟೆಯಲ್ಲಿ ೬.೦೩ ಕೋಟಿಯಲ್ಲಿ ೩.೨೪ ಕೋಟಿ ರೂ ಹಾಗೂ ಕೆ.ಜಿ.ಎಫ್‌ನಲ್ಲಿ ೨,೪೭ ಕೋಟಿ ಗೂ ಗಳ ಪೈಕಿ ೧,೬೭ ಕೋಟಿ ರೂ ಸೇರರಿದಂತೆ ಒಟ್ಟು ೨೭,೮೮ ಕೋಟಿ ರೂ ವಸೂಲಿ ಮಾಡಿ ಶೇ.೫೨,೫೩ ರಷ್ಟು ವಸೂಲಾತಿ ಮಾಡುವ ಮೂಲಕ ದಾಖಲಾತಿಯ ಯಶಸ್ವಿ ಸಾಧನೆ ಮಾಡಿದ್ದು ಈ ಅಭಿಯಾನ ಮುಂದುವರೆಸಲಾಗುವುದು ಎಂದು ಹೇಳಿದರು. ಕೋಲಾರ-ಮಾಲೂರು ತಾಲ್ಲೂಕುಗಳಲ್ಲಿ ಅತಿ ಹೆಚ್ಚು ತೆರಿಗೆ ವಸೂಲಾತಿ ಮಾಡಲಾಗಿದೆ. ಎರಡು ತಾಲ್ಲೂಕಿನ ವಿವಿಧ ಕಡೆ ಕೈಗಾರಿಕೆಗಳು ಹೆಚ್ಚಾಗಿರುವುದರಿಂದ ತೆರಿಗೆಯು ಹೆಚ್ಚಾಗಿ ವಸೂಲಾತಿಯಾಗಿದೆ. ಸಾಮಾನ್ಯವಾಗಿ ಕೃಷಿ ಹೊರತುಪಡಿಸಿ ಕಟ್ಟಡಗಳು, ನಿವೇಶನಗಳು, ವಾಣಿಜ್ಯ, ಕಾಮಗಾರಿಗಳು, ಮಾರುಕಟ್ಟೆ, ಎಲ್ಲದಕ್ಕೂ ತೆರಿಗೆ ಹಾಕಲಾಗುವುದು ಎಂದು ವಿವರಿಸಿದರು.ಜಿಲ್ಲೆಯಲ್ಲಿ ಅಂತರ್ಜಲ ಅಭಿವೃದ್ದಿ ಪಡೆಸುವ ದಿಸೆಯಲ್ಲಿ ಜಲಮೂಲಗಳನ್ನು ಅಭಿವೃದ್ದಿಪಡಿಸಲು ೧೫೫ ಗ್ರಾಮಗಳನ್ನು ಗುರುತಿಸಲಾಗಿದ್ದು, ಈಗಾಗಲೇ ೫೦೦ ಗ್ರಾಮಗಳಿಗೆ ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ, ತೋಟಗಾರಿಕೆ ಬೆಳೆಗಳಿಗೆ ೩ ಸಾವಿರ ಹೆಕ್ಟರ್‌ಗಳಲ್ಲಿ ಸಂಜೀವಿನಿ ಶೆಡ್‌ಗಳನ್ನು ಎಸ್.ಹೆಚ್.ಜಿ.ಗಳಿಗೆ ದಾಖಲಾತಿಗಳಿಗಾಗಿ ಕ್ರೋಡಿಕರಿಸಲಾಗುತ್ತಿದ್ದು ಬಜೆಟ್‌ನಲ್ಲಿ ಘೋಷಿಸಿರುವಂತೆ ೪೦ ರಿಂದ ೫೦ ಶೆಡ್‌ಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.

ನರೇಗಾದಲ್ಲಿ ದುರ್ಬಲ ವರ್ಗದವರಿಗೆ ಅಧ್ಯತೆ ನೀಡಲು ಬಡತನ ನಿರ್ಮೂಲನಕ್ಕೆ ವಿಶೇಷ ಚೇತನರಿಗೆ ೧೮ರ ವಯೋಮಿತಿ ಮೀರಿದ ೮,೫ ಸಾವಿರ ಮಂದಿ ಪೈಕಿ ೬.೫ ಸಾವಿರ ಮಂದಿಗೆ ಜಾಬ್ ಕಾರ್ಡ್ ವಿತರಣೆಯಿಂದಾಗಿ ಪ್ರತಿಯೊರ್ವರಿಗೆ ಸುಮಾರು ರೂ. ೩೯.೫೦೦ ಲಭ್ಯವಾಗಲಿದ್ದು ಜೀವನೋಪಯಕ್ಕೆ ನೆರವು ದೊರೆತಂತಾಗಿದೆ ಎಂದು ತಿಳಿಸಿದರು. ಕೋಲಾರ ಜಿಲ್ಲೆಯು ಗಂಗರು, ಚೋಳರು, ಚಾಲುಕ್ಯರು, ನೋಣಬರು ಆಡಳಿತ ನಡೆಸಿದ ಜಿಲ್ಲೆಯಾಗಿದ್ದಯ ವಿವಿಧಡೆ ಸಾಕಷ್ಟು ವೀರಗಲ್ಲುಗಳು ಹಾಗೂ ಐತಿಹಾಸಿಕವಾಗಿ ದಾಖಲಿಸಬಹುದಾದ ಶಾಸನಗಳ ಚಿತ್ರಗಳು ಒಂದೊಂದು ಒಂದು ಕಥೆಯ ಮಹತ್ವವನ್ನು ಹೊಂದಿದೆ. ಇವುಗಳ ಸಂರಕ್ಷಣೆ ಮಾಡಬೇಕಾಗಿರುವುದು ಎಲ್ಲರ ಜವಾಬ್ದಾರಿಯಾಗಿದೆ. ತಾಲ್ಲೂಕಿನ ಅರಾಭಿಕೊತ್ತನೂರು, ದೊಡ್ಡ ಶಿವಾರ, ಹುನ್ಕುಂದ, ಅಬ್ಬಣಿ, ಮುಂತಾದ ಕಡೆಗಳಲ್ಲಿ ವೀರಗಲ್ಲುಗಳನ್ನು ಸಂರಕ್ಷಿಸುವ ಕೆಲಸವನ್ನು ನಿರ್ವಹಿಸಲಾಗುತ್ತದೆ ಎಂದು ವಿವರಿಸಿದರು.