53850 ಮೌಲ್ಯದ 8,640 ಲೀ. ಮದ್ಯ ವಶ

| Published : Apr 13 2024, 01:06 AM IST

ಸಾರಾಂಶ

ನೀತಿ ಸಂಹಿತೆ ಜಾರಿಯಲ್ಲಿದ್ದರೂ, ದ್ವಿಚಕ್ರ ವಾಹನದಲ್ಲಿ ಅಕ್ರಮ ಮದ್ಯ ಸಾಗಿಸುತ್ತಿದ್ದ ಮಾಹಿತಿ ಮೇರೆಗೆ ದಾಳಿ ನಡೆಸಿ, 53850 ಮೌಲ್ಯದ 8,640 ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಹೊನ್ನಾಳಿ ಅಬಕಾರಿ ಇನ್‌ಸ್ಪೆಕ್ಟರ್ ಬಸವಲಿಂಗಪ್ಪ ಹೊನ್ನಾಳಿಯಲ್ಲಿ ತಿಳಿಸಿದ್ದಾರೆ.

ಹೊನ್ನಾಳಿ: ನೀತಿ ಸಂಹಿತೆ ಜಾರಿಯಲ್ಲಿದ್ದರೂ, ದ್ವಿಚಕ್ರ ವಾಹನದಲ್ಲಿ ಅಕ್ರಮ ಮದ್ಯ ಸಾಗಿಸುತ್ತಿದ್ದ ಮಾಹಿತಿ ಮೇರೆಗೆ ದಾಳಿ ನಡೆಸಿ, 53850 ಮೌಲ್ಯದ 8,640 ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಹೊನ್ನಾಳಿ ಅಬಕಾರಿ ಇನ್‌ಸ್ಪೆಕ್ಟರ್ ಬಸವಲಿಂಗಪ್ಪ ತಿಳಿಸಿದ್ದಾರೆ.

ಟಿ.ಬಿ. ವೃತ್ತದ ಸಮೀಪ ದಾಳಿ ಮಾಡುತ್ತಿದ್ದಂತೆ ಸವಾರ ಬೈಕ್ ಬಿಟ್ಟು ಪರಾರಿಯಾಗಿದ್ದಾನೆ. ಬೈಕ್ ಹಾಗೂ 8.640 ಲೀಟರ್ ಮದ್ಯ ಜಪ್ತಿ ಮಾಡಿ, ನ್ಯಾಯಾಲಯಕ್ಕೆ ಪ್ರಥಮ ವರದಿ ಸಲ್ಲಿಸಿದ್ದೇವೆ ಎಂದು ಬಸವಲಿಂಗಪ್ಪ ತಿಳಿಸಿದರು.

ನೀತಿ ಸಂಹಿತೆ ಜಾರಿಯಾದ ನಂತರ ಅವಳಿ ತಾಲೂಕಿನಲ್ಲಿ 52 ಪ್ರಕರಣ ದಾಖಲಾಗಿವೆ. 40 ಲೀ. ಮದ್ಯ, ಬಿಯರ್ 138 ಲೀ., ಮೂರು ವಾಹನ ವಶಪಡಿಸಿಕೊಳ್ಳಲಾಗಿದೆ ಎಂದರು.

ದಾಳಿಯಲ್ಲಿ ಸಿಬ್ಬಂದಿ ಮಂಜನಾಯ್ಕ ಮತ್ತು ಮಂಜು, ಶೈಲಜಾ, ಇತರರು ಇದ್ದರು.

- - - -12ಎಚ್.ಎಲ್.ಐ2: