ಸಾರಾಂಶ
ಜಲಾಶಯದ 19ನೇ ಕ್ರಸ್ಟ್‌ಗೇಟ್ ಮುರಿದ ಹಿನ್ನೆಲೆ ಜಲಾಶಯದ ಭದ್ರತೆ ದೃಷ್ಟಯಿಂದ ಈ ಬಾರಿ 80 ಟಿಎಂಸಿ ನೀರು ಸಂಗ್ರಹಿಸಲು ತಜ್ಞರು ಹೇಳಿದ್ದರಿಂದ ಜಲಾಶಯ ತುಂಬುವ ಮೊದಲೇ ಅಪಾರ ಪ್ರಮಾಣದ ನೀರನ್ನು ನದಿಗೆ ಬೀಡಲಾಗಿದೆ. ಈ ರುದ್ರರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಜನರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ.
ಮುನಿರಾಬಾದ್:
ತುಂಗಭದ್ರಾ ಜಲಾಶಯದ 33 ಗೇಟ್‌ಗಳ ಪೈಕಿ 20 ಗೇಟ್‌ಗಳನ್ನು 2 ಅಡಿ ಎತ್ತರಿಸಿ ಗುರುವಾರ ನದಿಗೆ 58260 ಕ್ಯುಸೆಕ್ ನೀರು ಹರಿಸಲಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಲಾಶಯದತ್ತ ಆಗಮಿಸಿ ನೀರು ಹರಿಯುವುದನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.ಬೆಳಗ್ಗೆ 11ಕ್ಕೆ 12 ಗೇಟ್‌ಗಳಿಂದ 35,100 ಕ್ಯುಸೆಕ್, ಮಧ್ಯಾಹ್ನ ತುಂಗಾ ಜಲಾಶಯದಿಂದ 50000 ಕ್ಯುಸೆಕ್ ನೀರನ್ನು ನದಿಗೆ ಬಿಟ್ಟ ಹಿನ್ನೆಲೆಯಲ್ಲಿ 20 ಗೇಟ್ ತೆರೆದು ನದಿಗೆ 58260 ಕ್ಯುಸೆಕ್ ನೀರು ಹರಿಸಲಾಗಿದೆ. ಇದು ತುಂಗಭದ್ರಾ ಜಲಾಶಯದ ಇತಿಹಾಸದಲ್ಲಿ ಜುಲೈ ತಿಂಗಳ ಮೊದಲ ವಾರದಲ್ಲಿ ಹರಿಸಿದ ಅತ್ಯಧಿಕ ಪ್ರಮಾಣದ ನೀರಿನ ಹೊರಹರಿವಾಗಿದೆ.
ಕಳೆದ ವರ್ಷ ಇದೇ ದಿನದಂದು ತುಂಗಭದ್ರಾ ಜಲಾಶಯದಲ್ಲಿ ಕೇವಲ 8 ಟಿಎಂಸಿ ನೀರು ಮಾತ್ರ ಶೇಖರಣೆಯಾಗಿ 1587 ಅಡಿಗಳಿತ್ತು. ಒಳಹರಿವು 10503 ಕ್ಯುಸೆಕ್ ಇದ್ದು ಕಳೆದ ಹತ್ತು ವರ್ಷದ ಸರಾಸರಿ ಹೋಲಿಸಿದರೆ ಜಲಾಶಯದಲ್ಲಿ ಇದೇ ದಿನದಂದು 23 ಟಿಎಂಸಿ ನೀರು ಹಾಗೂ ಒಳಹರಿವು 9800 ಕ್ಯುಸೆಕ್ ಇತ್ತು.ಜನರ ಸೆಲ್ಫಿ...ಜಲಾಶಯದ 19ನೇ ಕ್ರಸ್ಟ್‌ಗೇಟ್ ಮುರಿದ ಹಿನ್ನೆಲೆ ಜಲಾಶಯದ ಭದ್ರತೆ ದೃಷ್ಟಯಿಂದ ಈ ಬಾರಿ 80 ಟಿಎಂಸಿ ನೀರು ಸಂಗ್ರಹಿಸಲು ತಜ್ಞರು ಹೇಳಿದ್ದರಿಂದ ಜಲಾಶಯ ತುಂಬುವ ಮೊದಲೇ ಅಪಾರ ಪ್ರಮಾಣದ ನೀರನ್ನು ನದಿಗೆ ಬೀಡಲಾಗಿದೆ. ಈ ರುದ್ರರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಜನರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ಜತೆಗೆ ಅಪಾಯವನ್ನು ಲೆಕ್ಕಿಸದೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿಳುತ್ತಿದ್ದಾರೆ.