5ಎ ನೀರಾವರಿ ಯೋಜನೆ ಜಾರಿ: ಸಂಭ್ರಮಾಚರಣೆ

| Published : Feb 18 2024, 01:33 AM IST / Updated: Feb 18 2024, 01:34 AM IST

ಸಾರಾಂಶ

ತಾಲೂಕಿನ ಪಾಮನಕಲ್ಲೂರು, ಅಮಿನಗಡ, ಸಂತೆಕಲ್ಲೂರು, ವಟಗಲ್ ಸೇರಿಂದಂತೆ ವಿವಿಧ ಪ್ರದೇಶಗಳ ವ್ಯಾಪ್ತಿಯ ರೈತರಿಗೆ ವರದಾನವಾಗಲಿರುವ ನಾರಾಯಣಪುರ ಬಲದಂಡೆಯ 5ಎ ಕಾಲುವೆ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದ ಹಿನ್ನೆಯಲ್ಲಿಯಲ್ಲಿ ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.

ಮಸ್ಕಿ: ತಾಲೂಕಿನ ಪಾಮನಕಲ್ಲೂರು, ಅಮಿನಗಡ, ಸಂತೆಕಲ್ಲೂರು, ವಟಗಲ್ ಸೇರಿಂದಂತೆ ವಿವಿಧ ಪ್ರದೇಶಗಳ ವ್ಯಾಪ್ತಿಯ ರೈತರಿಗೆ ವರದಾನವಾಗಲಿರುವ ನಾರಾಯಣಪುರ ಬಲದಂಡೆಯ 5ಎ ಕಾಲುವೆ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದ ಹಿನ್ನೆಯಲ್ಲಿಯಲ್ಲಿ ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.

ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು 5ಎ ನೀರಾವರಿ ಯೋಜನೆಗೆ ಸರ್ಕಾರ ಅಂದಾಜು 990 ಕೋಟಿ ರು. ಹಣ ಬಜೆಟ್‌ನಲ್ಲಿ ಮೀಸಲಿಟ್ಟಿರುವ ಹಿನ್ನೆಲೆಯಲ್ಲಿ ಸರ್ಕಾರದ ಪರ ಜಯಘೋಷಗಳನ್ನು ಕೂಗಿ ಹಳೇ ಬಸ್ ನಿಲ್ದಾಣ, ದೈವದಕಟ್ಟಿಯಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮಸ್ಕಿ ಗ್ರಾಮೀಣ ಘಟಕದ ಅಧ್ಯಕ್ಷ ಹನುಂತಪ್ಪ ಮುದ್ದಾಪೂರು ಮಾತನಾಡಿ ಕಾಂಗ್ರೆಸ್ ಪಕ್ಷ ರೈತರ, ಕಾರ್ಮಿಕರ, ದೀನದಲಿತರಪರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಚುನಾವಣೆಯಲ್ಲಿ ರೈತರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದೆ ಇದರಿಂದ ಕ್ಷೇತ್ರದ ರೈತರಿಗೆ ಅನೂಕೂಲವಾಗಲಿದೆ ಎಂದರು. ಮಸ್ಕಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಾ ಡಿ.ಚಿಗರಿ, ಕಿಸಾನ್ ಸಲ್ ಅಧ್ಯಕ್ಷ ಮೈಬುಸಾಬ ಮುದ್ದಪೂರ, ಕರಿಬಸನಗೌಡ ಗುಡದೂರು, ಬಸಪ್ಪ ಜಂಗರಹಳ್ಳಿ, ಕರಿಯಪ್ಪ ಹಾಲಾಪೂರ, ಆನಂದ ವಿರಾಪೂರ, ಮಲ್ಲಯ್ಯ ಮುರಾರಿ, ಮಲ್ಲನಗೌಡ ಸುಂಕನೂರು, ಬೆಂಗಳೂರು ಕರಿಯಪ್ಪ, ನಾಗಭೂಷಣ ಬಾರಕೇರ್, ಶಿವರೆಡ್ಡಿ, ಶರಣಪ್ಪ ಎಲಿಗಾರ, ರಾಜಾ ನಧಾಪ್, ಸಿದ್ದು ಮುರಾರಿ, ಬಸವರಾಜ ನಾಯಿಕೊಡಿ, ಮೈಬು ಹಣಿಗಿ, ರಮೇಶ್, ಶೇಖರಪ್ಪ, ವೆಂಕಟೇಶ ನಾಯಕ್, ಹಾಗೂ ಇನ್ನಿತರ ಮುಖಂಡರು ಉಪಸ್ಥಿತಿ ಇದ್ದರು.