ಸಾರಾಂಶ
ಸೂರ್ಯನ ಬೆಳಕು ಅನೇಕ ರೋಗಗಳನ್ನು ಗುಣಮುಖ ಮಾಡುವ ಶಕ್ತಿ ಹೊಂದಿರುವುದರಿಂದ 108 ಸೂರ್ಯ ನಮಸ್ಕಾರ ಮಾಡುವುದರ ಮೂಲಕ ಚೈತನ್ಯ ತುಂಬಿಕೊಳ್ಳಬಹುದು ಎಂದು ಪತಂಜಲಿ ಯೋಗ ಶಿಕ್ಷಣ ಸಮಿತಿಯ ಪ್ರಾಂತೀಯ ಸಂಚಾಲಕ ರಾಘವೇಂದ್ರ ಹೇಳಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರಸೂರ್ಯನ ಬೆಳಕು ಅನೇಕ ರೋಗಗಳನ್ನು ಗುಣಮುಖ ಮಾಡುವ ಶಕ್ತಿ ಹೊಂದಿರುವುದರಿಂದ 108 ಸೂರ್ಯ ನಮಸ್ಕಾರ ಮಾಡುವುದರ ಮೂಲಕ ಚೈತನ್ಯ ತುಂಬಿಕೊಳ್ಳಬಹುದು ಎಂದು ಪತಂಜಲಿ ಯೋಗ ಶಿಕ್ಷಣ ಸಮಿತಿಯ ಪ್ರಾಂತೀಯ ಸಂಚಾಲಕ ರಾಘವೇಂದ್ರ ಹೇಳಿದರು.
ಪತಂಜಲಿ ಯೋಗ ಶಿಕ್ಷಣ ಸಮಿತಿ ಮತ್ತು ಸೇವಾ ಭಾರತಿ ಟ್ರಸ್ಟ್ ರಥಸಪ್ತಮಿ ಪ್ರಯುಕ್ತ ನಗರದ ಚನ್ನಿಪುರಮೋಳೆಯಲ್ಲಿರುವ ಸೇವಾ ಭಾರತಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ 108 ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ದಿನ ಬರುವ ಈ ರಥ ಸಪ್ತಮಿಗೆ ವೇದ ಪುರಾಣಗಳಲ್ಲಿ ವಿಶೇಷ ಸ್ಥಾನವಿದೆ. ಈ ದಿನದಂದು ಸೂರ್ಯನ ಜಪಿಸಿದರೆ ಒಳಿತಾಗಲಿದೆ ಎಂದರು. ಸಕಲ ಜೀವಿಗಳ ಜೀವನಕ್ಕೆ ಸೂರ್ಯ ಅವಶ್ಯ. ಇದೇ ಕಾರಣಕ್ಕೆ ಸೂರ್ಯನ ಪೂಜೆಗೆ ವಿಶೇಷ ಮಾನ್ಯತೆ ಇದೆ. ಈ ದಿನ ಸೂರ್ಯನ ಆರಾಧನೆ ನಡೆಸಿದರೆ ಆರೋಗ್ಯ ಮತ್ತು ಖ್ಯಾತಿ ಸಿಗುತ್ತದೆ. ಶಿಕ್ಷಣ, ಉದ್ಯೋಗ ಮತ್ತು ವೃತ್ತಿಯಲ್ಲಿ ಅಡೆತಡೆ ನಿವಾರಣೆ ಆಗುತ್ತದೆ. ಎಲ್ಲಾ ರೀತಿಯ ದೈಹಿಕ ಮತ್ತು ಮಾನಸಿಕ ರೋಗಗಳು ಮತ್ತು ನೋವುಗಳು ಗುಣವಾಗುತ್ತವೆ ಎಂಬ ಅಚಲ ನಂಬಿಕೆ ಇದೆ ಎಂದರು.ಚಳಿಗಾಲದಲ್ಲಿ ಒಣಗಿದ ತರಗೆಲೆಯಂತೆ ಆದ ಶರೀರರಥ ಸಪ್ತಮಿಯ ಬಳಿಕ ಸೂರ್ಯನ ಶಾಖದಿಂದ ಹೊಸ ಚೈತನ್ಯ ಪಡೆಯುತ್ತದೆ. ಈ ಕಾರಣದಿಂದಲೇ ಈ ದಿನ ಸೂರ್ಯನಿಗೆ ಮೈಯೊಡ್ಡಿ ವಿಶೇಷ ಪೂಜೆ ಸಲ್ಲಿಸಲಾಗುವುದು ಎಂದರು.ಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಎಚ್.ಜಿ.ಶಿವಕುಮಾರಸ್ವಾಮಿ ಮಾತನಾಡಿ, ಸಾಮೂಹಿಕ 108 ಸೂರ್ಯ ನಮಸ್ಕಾರವನ್ನು ಕಳೆದ 14 ವರ್ಷಗಳಿಂದ ಹಮ್ಮಿಕೊಳ್ಳುತ್ತಾ ಬಂದಿದ್ದು. ಯೋಗದಿಂದ ಆರೋಗ್ಯವಂತ ಸಮಾಜ ಸೃಷ್ಟಿಯಾಗಲಿದೆ ಎಂದರು. ವಿದ್ಯಾರ್ಥಿಗಳು ಮತ್ತು ಯೋಗ ಬಂಧುಗಳು ಸೇರಿದಂತೆ ಐನೂರಕ್ಕೂ ಹೆಚ್ಚು ಮಂದಿ 108 ಸೂರ್ಯ ನಮಸ್ಕಾರದಲ್ಲಿ ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಸೇವಾಭಾರತಿಯ ರಮೇಶ್, ವಾಸುದೇವರಾವ್ ನಿಜಗುಣ, ವೆಂಕಟನಾಗಪ್ಪಶೆಟ್ಡಿ ಸಿದ್ದರಾಜು, ದೊರೆಸ್ವಾಮಿ, ಜಗದಾಂಭಕುಮಾರಸ್ವಾಮಿ, ನಂದಿನಿ, ರಾಧಕ್ಕ, ಶೃತಿ, ಅಜಿತ್ ಇತರರು ಇದ್ದರು.